ಶನಿವಾರ, ಜುಲೈ 5, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Dhruva Sarja : ʻನನಗೆ ಎನಿಮೀಸ್‌ ಜಾಸ್ತಿʼ ಹೀಗಂದರೇಕೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ!

Vishalakshi Pby Vishalakshi P
12/03/2024
in Majja Special
Reading Time: 1 min read
Dhruva Sarja : ʻನನಗೆ ಎನಿಮೀಸ್‌ ಜಾಸ್ತಿʼ ಹೀಗಂದರೇಕೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ!

ಸ್ಯಾಂಡಲ್‌ವುಡ್‌ನ ಬಹದ್ದೂರ್‌ ಗಂಡು, ಬೆಂಕಿಚೆಂಡು ಅಂತಾನೇ ಕರೆಸಿಕೊಳ್ಳುವ ಆ್ಯಕ್ಷನ್ ಪ್ರಿನ್ಸ್ ಧ್ರುವ (Dhruva Sarja) ಸರ್ಜಾ ಬಿಗ್‌ ಬ್ರೇಕಿಂಗ್‌ ನ್ಯೂಸ್‌ ಆಗಿದ್ದಾರೆ. ಸದ್ಯಕ್ಕೆ ನನಗೆ ಎನಿಮೀಸ್‌ ಜಾಸ್ತಿ ಅಂತ ಹೇಳೋ ಮೂಲಕ ಧ್ರುವ ಸರ್ಜಾ ಸುದ್ದಿಯಲ್ಲಿದ್ದಾರೆ. ಅಷ್ಟಕ್ಕೂ, ಅದ್ದೂರಿ ಈ ಹೀರೋ ಈ ಮಾತು ಹೇಳೋದಕ್ಕೆ ಕಾರಣ ಕೊಪ್ಪಳದ ಅಭಿಮಾನಿಗಳು. ಯಸ್‌, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇತ್ತೀಚೆಗೆ ಕೊಪ್ಪಳದಲ್ಲಿ ನಡೆದ ಆನೆಗುಂದಿ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ, ತಮ್ಮ ವಿಐಪಿಗಳ ಒತ್ತಾಯದ ಮೇರೆಗೆ ತಮ್ಮ ಮುಂದಿನ ಬಹುನಿರೀಕ್ಷಿತ ಮಾರ್ಟಿನ್‌ (Martin) ಚಿತ್ರದ ಡೈಲಾಗ್‌ ಹೇಳಿದರು. ಅದುವೇ ಸದ್ಯಕ್ಕೆ ನನಗೆ ಎನಿಮೀಸ್‌ ಜಾಸ್ತಿ ಅನ್ನೋದು.

“ಲೈಫ್‌ ಅಲ್ಲಿ ಸೋತವರ ಜೊತೆ ಫ್ರೆಂಡ್ಸ್ ಜಾಸ್ತಿ ಇರ್ತಾರೆ. ಗೆದ್ದವರ ಹಿಂದೆ ಎನಿಮೀಸ್ ಜಾಸ್ತಿ ಇರ್ತಾರೆ. ಸದ್ಯಕ್ಕೆ ನನಗೆ ಎನಿಮೀಸ್‌ ಜಾಸ್ತಿ” ಇದು ಮಾರ್ಟಿನ್‌ (Martin) ಸಿನಿಮಾದ ಡೈಲಾಗ್‌. ಈಗಾಗಲೇ ಟೀಸರ್‌ನಲ್ಲಿ ಕೆಲ ಡೈಲಾಗ್‌ಗಳು ಹೊರಬಿದ್ದಿವೆ. ಆದರೆ, ಕೊಪ್ಪಳದ ಜನತೆಯ ಮುಂದೆ ಬಹದ್ದೂರ್‌ ಗಂಡು (Dhruva Sarja) ಎಕ್ಸ್‌ಕ್ಲೂಸೀವ್‌ ಆಗಿ ಒಂದು ಬೆಂಕಿ ಡೈಲಾಗ್‌ ಬಿಟ್ಟಿದ್ದಾರೆ. ಸದ್ಯ ಈ ಡೈಲಾಗ್‌ ಸೆನ್ಸೇಷನ್‌ ಕ್ರಿಯೇಟ್‌ ಮಾಡಿದೆ. ಸರ್ಜಾ ಕುಟುಂಬದ ಕುಡಿ, ಸ್ಯಾಂಡಲ್‌ವುಡ್‌ನ ಬಹದ್ದೂರ್‌ ಗಂಡಿಗೆ (Dhruva Sarja) ಎನಿಮೀಸ್‌ಗಳು ಅಂತ ಯಾರೆಲ್ಲಾ ಇದ್ದಾರಾ ಅಂತ ಕೆಲವರು ಆಲ್‌ರೆಡಿ ಚರ್ಚೆ ಮಾಡೋದಕ್ಕೆ ಶುರು ಮಾಡಿದ್ದಾರೆ. ಆದರೆ, ಧ್ರುವ (Dhruva Sarja) ವಿಐಪಿಗಳು ಮಾತ್ರ ಈ ಜಬರ್ದಸ್ತ್ ಡೈಲಾಗ್ ಕೇಳಿ ಕಾಲರ್‌ ಪಟ್ಟಿ ಎಗರಿಸ್ತಿದ್ದಾರೆ. ಅಷ್ಟಕ್ಕೂ, ಈ ಸ್ಪೆಷಲ್‌ ಡೈಲಾಗ್‌ ಸಿನ್ಮಾದಲ್ಲಿ ಯಾವ್‌ ಸೀಕ್ವೆನ್ಸ್‌ನಲ್ಲಿ ಬರುತ್ತೆ? ಯಾರ ವಿರುದ್ದ ತೊಡೆತಟ್ಟುವಾಗ ಬಹದ್ದೂರ್‌ ಗಂಡು (Dhruva Sarja) ಈ ಡೈಲಾಗ್‌ ಬಿಡ್ತಾರಾ? ಈ ಕುತೂಹಲಕ್ಕೆ ಉತ್ತರ ಕಂಡುಕೊಳ್ಳಲು ಸಿನಿಮಾ ಪ್ರೇಮಿಗಳು ಒಂಟಿಕಾಲಿನಲ್ಲಿ ನಿಂತಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ಮಾರ್ಟಿನ್‌ (Martin) ರಿಲೀಸ್‌ ಆಗ್ಬೇಕಿತ್ತು. ಆದರೆ, ಕಾರಣಾಂತರಗಳಿಂದ ಮಾರ್ಟಿನ್‌ ಡಿಲೇ ಆಗಿದೆ. ಅದ್ದೂರಿ ಕಾಂಬಿನೇಷನ್‍ನಲ್ಲಿ `ಮಾರ್ಟಿನ್’ (Martin) ಸಿನಿಮಾ ಭರ್ಜರಿಯಾಗೇ ತಯ್ಯಾರಾಗಿದೆ. ಎ.ಪಿ ಅರ್ಜುನ್ (A. P. Arjun) ನಿರ್ದೇಶನ, ಉದಯ್ ಕೆ.ಮೆಹ್ತಾ ನಿರ್ಮಾಣದಲ್ಲಿ ಬಹುಕೋಟಿ ವೆಚ್ಚದಲ್ಲಿ ಮೂಡಿಬರ್ತಿರೋ ಈ ಚಿತ್ರದ ಮೇಲೆ ನಿರೀಕ್ಷೆ ತುಸು ಜಾಸ್ತಿನೆಯಿದೆ. ಹೈವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ ಚಿತ್ರ ಇದಾಗಿದ್ದು, ವಿದೇಶಿ ಮೂಲದ ಖ್ಯಾತ ಬಾಡಿಬಿಲ್ಡರ್ಗಳ ಜೊತೆ ಧ್ರುವ ಹೊಡೆದಾಡಿದ್ದಾರೆ. ಅಷ್ಟಕ್ಕೂ, ಧ್ರುವ ಗ್ಯಾಂಗ್ ಸ್ಟರ್ರಾ ಅಥವಾ ಸೋಲ್ಜರ್ರಾ? ಈ ಕುತೂಹಲವನ್ನ ಬಿಟ್ಟುಕೊಡದ ಎ.ಪಿ ಅರ್ಜುನ್ `ಮಾರ್ಟಿನ್’ಗಾಗಿ ಇಂಡಿಯಾದ ಜೊತೆಗೆ ಪಾಕ್ ಕೂಡ ಕಣ್ಣರಳಿಸಿ ಕಾಯುವಂತೆ ಮಾಡಿದ್ದಾರೆ.

ಮಾರ್ಟಿನ್ (Martin)  ಚಿತ್ರದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗ ಪ್ರವೇಶಿಸಿರುವ ಇಟಲಿ ಬೆಡಗಿ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆ ಸಖತ್ತಾಗಿ ಹೆಜ್ಜೆ ಹಾಕಿದ್ದಾರೆ. ಆ್ಯಕ್ಷನ್ ಪ್ರಿನ್ಸ್ ಜೊತೆ ವೈಭವಿ ಶಾಂಡಿಲ್ಯ, ಸುಕೃತ ವಾಗ್ಲೆ, ಅನ್ವೇಶಿ ಜೈನ್, ನವಾಬ್ ಷಾ, ರೋಹಿತ್ ಪಾಠಕ್, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್, ಚಿಕ್ಕಣ್ಣ, ಸಾಧುಕೋಕಿಲ ಸೇರಿದಂತೆ ಹಲವರು ಪಾತ್ರವರ್ಗದಲ್ಲಿದ್ದಾರೆ. ಛಾಯಾಗ್ರಾಹಕ ಸತ್ಯಾ ಹೆಗಡೆ ‘ಮಾರ್ಟಿನ್’ ಆರ್ಭಟವನ್ನು ಸೆರೆಹಿಡಿದಿದ್ದಾರೆ. ಮಣಿಶರ್ಮಾ ಸಂಗೀತ ಸಿನಿಮಾಗಿದ್ದು, ರವಿಬಸ್ರೂರ್ ಹಿನ್ನಲೆ ಸಂಗೀತ ಒದಗಿಸಿದ್ದಾರೆ. ಸಾರೆಗಮ ಆಡಿಯೋ ಸಂಸ್ಥೆ 9 ಕೋಟಿ ರೂ.ಗೆ ಚಿತ್ರದ ಆಡಿಯೋ ರೈಟ್ಸ್ ಖರೀದಿಸಿದೆ. ರಾಮ್-ಲಕ್ಷ್ಮಣ್ ಹಾಗೂ ರವಿವರ್ಮಾ ಸಾಹಸ ಸಂಯೋಜನೆ ಮಾಡಿದ್ದಾರೆ.  ಬರೋಬ್ಬರಿ 240 ದಿನಗಳ ಕಾಲ ಈ ಚಿತ್ರಕ್ಕಾಗಿ ಚಿತ್ರತಂಡ ಶೂಟಿಂಗ್ ಮಾಡಿದೆ. ಬಹುತೇಕ ಪೋಸ್ಟ್‌ ಪ್ರೊಡಕ್ಷನ್ ವರ್ಕ್ ಕೂಡ ಮುಗಿಸಿದ್ದು, ಆದಷ್ಟು ಬೇಗ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ಪ್ಯಾನ್ ಇಂಡಿಯಾ ತುಂಬೆಲ್ಲಾ ಮಾರ್ಟಿನ್ (Martin) ಮೇನಿಯಾ ಶುರುವಾಗಲಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Blink: ʻಬ್ಲಿಂಕ್ʻ ಮಾಡದೇ ನೋಡಿಸಿಕೊಂಡು ಹೋಗುವ ಸಿನಿಮಾಗೆ ಹೇಳಲೇಬೇಕು ʻವಾವ್‌ʻ

Blink: ʻಬ್ಲಿಂಕ್ʻ ಮಾಡದೇ ನೋಡಿಸಿಕೊಂಡು ಹೋಗುವ ಸಿನಿಮಾಗೆ ಹೇಳಲೇಬೇಕು ʻವಾವ್‌ʻ

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.