ಸ್ಯಾಂಡಲ್‍ವುಡ್‍ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಲುಕ್-ಗೆಟಪ್‍ನ ಬದಲಾಯಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಕೆಡಿ ಅಖಾಡದಲ್ಲಿ ಧ್ರುವ ರೆಟ್ರೋ ಲುಕ್‍ನಲ್ಲಿ ಕಾಣಿಸಿಕೊಂಡಿದ್ದರು. ಆದ್ರೀಗ ವರಸೆ ಬದಲಾಯಿಸಿರೋ ಬಹದ್ದೂರ್ ಗಂಡು, ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗುವ ಅವತಾರದಲ್ಲಿ ದರ್ಶನ ನೀಡಿದ್ದಾರೆ. ಅಧಿಕೃತವಾಗಿ ನ್ಯೂ ಲುಕ್ಕು-ಗೆಟಪ್ ಫೋಟೋವೊಂದನ್ನ ಧ್ರುವಾ ಹಂಚಿಕೊಂಡಿಲ್ಲವಾದ್ರೂ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ವೈರಲ್ ಆಗಿದೆ. ಅಷ್ಟಕ್ಕೂ, ಆ ಫೋಟೋ ಹಿಂದಿನ ಕಥೆಯೇನು? ಆ್ಯಕ್ಷನ್ ಪ್ರಿನ್ಸ್ ಹೊಸ ವರಸೆ ಯಾವ ಚಿತ್ರದ್ದು? ಏನ್ ಕಥೆ? ಎಂಬುದರ ಕಂಪ್ಲೀಟ್ ಅಪ್‍ಡೇಟ್ ಇಲ್ಲಿದೆ ನೋಡಿ
ಮೇಕೋವರ್ ವಿಚಾರದಲ್ಲಿ ಧ್ರುವ ಎಂತಹ ಡೆಡಿಕೇಟೆಡ್ ಆ್ಯಕ್ಟರ್ ಅನ್ನೋದನ್ನ ನಾವೇನ್ ಹೊಸದಾಗಿ ಹೇಳಬೇಕಾಗಿಲ್ಲ. ಪಾತ್ರ ಏನ್ ಡಿಮ್ಯಾಂಡ್ ಮಾಡುತ್ತೋ ಅದನ್ನ ಹಂಡ್ರೆಂಡ್ ಪರ್ಸೆಂಟ್ ಕೊಡೋದಕ್ಕೆ ಎಫರ್ಟ್ ಹಾಕ್ತಾರೆ. ತೂಕ ಇಳಿಸೋದಿರಲಿ, ತೂಕ ಹೆಚ್ಚಿಸಿಕೊಳ್ಳೋದಿರಲಿ ಯಾವುದಕ್ಕೂ ಹಿಂದೇಟು ಹಾಕುವುದಿಲ್ಲ. ಬೆವರು ಸರಿಸೋದ್ರ ಜೊತೆಗೆ ರಕ್ತಬಸಿದಾದ್ರೂ ಸರೀ ನಿರ್ದೇಶಕನ ಕಲ್ಪನೆಯ ಪಾತ್ರಕ್ಕೆ ಜೀವತುಂಬಲು ರೆಡಿಯಾಗ್ತಾರೆ. ಪಾತ್ರಕ್ಕಾಗಿ ಹಲವಾರು ಚಾಲೆಂಜಸ್‍ಗಳನ್ನ ಸ್ವೀಕರಿಸಿ ಅಭಿಮಾನಿಗಳನ್ನು ರಂಜಿಸ್ತಿದ್ದಾರೆ. ಈಗ ನಯಾ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಧ್ರುವ ಸುದ್ದಿಯಾಗಿದ್ದಾರೆ.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮಾಡಿರೋದು ನಾಲ್ಕೇ ಸಿನಿಮಾ. ಪೊಗರು ಚಿತ್ರವೊಂದು ನಿರೀಕೆಯ ಹಂತ ತಲುಪಲಿಲ್ಲ ಅನ್ನೋದನ್ನ ಬಿಟ್ಟರೆ ಉಳಿದ ಮೂರು ಚಿತ್ರಗಳು ಬ್ಲಾಕ್‍ಬಸ್ಟರ್ ಹಿಟ್. ಸದ್ಯ, ಈ ಬೆಂಕಿ ಚೆಂಡಿನ ಕೈಯಲ್ಲಿ ಎರಡು ಹೈವೋಲ್ಟೇಜ್ ಸಿನಿಮಾಗಳಿವೆ. ಒಂದು ಮಾರ್ಟಿನ್, ಇನ್ನೊಂದು ಕೆಡಿ. ಈ ಎರಡು ಸಿನಿಮಾದ ಮೇಲೂ ನಿರೀಕ್ಷೆ ಬೆಟ್ಟದಷ್ಟಿದೆ. ಟೀಸರ್ಸ್ ಹೊರಬಿದ್ಮೇಲೆ ಸ್ಯಾಂಡಲ್‍ವುಡ್ ಮಾತ್ರವಲ್ಲ ಇಡೀ ಸೌತ್ ಸಿನಿದುನಿಯಾವೇ ಮಾತನಾಡ್ತಿದೆ. ಸಿನಿಮಾದ ಸ್ಟಾರ್‍ಕಾಸ್ಟ್, ಬಿಗ್ ಬಜೆಟ್ ಪ್ಲಸ್ ಮೇಕಿಂಗ್ ಈ ಎರಡು ಚಿತ್ರಗಳನ್ನ ಪ್ಯಾನ್ ಇಂಡಿಯಾ ಮಟ್ಟಕ್ಕೆ ಕೊಂಡೊಯ್ಯಲು ಸಜ್ಜಾಗುತ್ತಿವೆ. ಮೊದಲು ಮಾರ್ಟಿನ್ ತೆರೆಗೆ ಬರಲಿದ್ದು, ಕೆಡಿ ಅನಂತರ ಕಣಕ್ಕಿಳಿಯಲಿದೆ. ಸಂಜಯ್ ದತ್ತ್, ಶಿಲ್ಪಾಶೆಟ್ಟಿ, ಕ್ರೇಜಿಸ್ಟಾರ್ ರವಿಚಂದ್ರನ್, ರೀಷ್ಮಾ ನಾಣಯ್ಯ ಸೇರಿದಂತೆ ಅತೀ ದೊಡ್ಡ ತಾರಾಬಳಗ `ಕೆಡಿ’ ಅಂಗಳದಲ್ಲಿದೆ.
ಇನ್ನೂ, ಜೋಗಿ ಪ್ರೇಮ್ ನಿರ್ದೇಶನದಲ್ಲಿ, ಕೆ.ವಿ.ಎನ್ ಪ್ರೊಡಕ್ಷನ್ ಅಡಿಯಲ್ಲಿ `ಕೆಡಿ’ ಅದ್ದೂರಿಯಾಗಿ ತಯ್ಯಾರಾಗುತ್ತಿದ್ದು, ಇತ್ತೀಚೆಗಷ್ಟೇ ಮೈಸೂರಿನಲ್ಲಿ ಅಧೀರ, ಆರ್ಮುಗಂ ರವಿಶಂಕರ್, ಅದ್ದೂರಿ ಹೀರೋ ಧ್ರುವ ಕಾಂಬಿನೇಷನ್ ಸೀಕ್ವೆನ್ಸ್ ಶೂಟಿಂಗ್ ನಡೀತು. ಸುಮಾರು 10 ದಿನಗಳ ಕಾಲ ಅರಮನೆ ನಗರಿಯಲ್ಲಿ ಟೆಂಟ್ ಹಾಕಿದ್ದ ಚಿತ್ರತಂಡ `ಕೆಡಿ’ ಖಡಕ್ ದೃಶ್ಯಗಳನ್ನ ಸೆರೆಯಿಡಿಯುವಲ್ಲಿ ಬ್ಯುಸಿಯಾಗಿತ್ತು. ಆ ಟೈಮ್‍ನಲ್ಲಿ ರೆಟ್ರೋ ಲುಕ್‍ನಲ್ಲಿ ಕಾಣಿಸಿಕೊಂಡಿದ್ದ ಕಾಳಿದಾಸ ಅಲಿಯಾಸ್ ಧ್ರುವ ಈಗ ಮತ್ತೆ ಮಾರ್ಟಿನ್ ಲುಕ್‍ನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಈ ಮೂಲಕ `ಮಾರ್ಟಿನ್’ ಸಿನಿಮಾದ ಶೂಟಿಂಗ್ ಇನ್ನೂ ಮುಗಿದಿಲ್ವಾ ಎನ್ನುವ ಅನುಮಾನಕ್ಕೆ ಕಾರಣವಾಗಿದ್ದಾರೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ `ಮಾರ್ಟಿನ್’ ಚಿತ್ರ ಇಷ್ಟೊತ್ತಿಗಾಗಲೇ ತೆರೆಗೆ ಬರಬೇಕಿತ್ತು. ಆದರೆ, ಕರೋನಾ ಸೇರಿದಂತೆ ನಾನಾ ಕಾರಣಗಳಿಂದ ಡಿಲೇ ಆದ ಮಾರ್ಟಿನ್ ಈ ವರ್ಷ ತೆರೆಗಪ್ಪಳಿಸಲು ಸಜ್ಜಾಗ್ತಿದೆ. ಈ ಮಧ್ಯೆ ಧ್ರುವ ಮತ್ತೆ ಮಾರ್ಟಿನ್ ಲುಕ್‍ನಲ್ಲಿ ಕಾಣಿಸಿಕೊಂಡಿರುವುದು ಚಿತ್ರೀಕರಣ ಇನ್ನೂ ಬ್ಯಾಲೆನ್ಸ್ ಇರುವ ಬಗ್ಗೆ ಸುಳಿವು ನೀಡಿದೆ. ಹಾಡುಗಳ ಚಿತ್ರೀಕರಣ ಹಾಗೂ ಪ್ಯಾಚಪ್ ವರ್ಕ್ ಬಾಕಿಯಿದ್ದು ಅದಕ್ಕಾಗಿ ಧ್ರುವ ಮತ್ತೆ ಮಾರ್ಟಿನ್ ಲುಕ್‍ಗೆ ಮರಳಿರೋ ಬಗ್ಗೆ ಅಪ್‍ಡೇಟ್ ಲಭ್ಯವಾಗ್ತಿದೆ. ಎ.ಪಿ ಅರ್ಜುನ್ ನಿರ್ದೇಶನ, ಉದಯ್ ಕೆ.ಮೆಹ್ತಾ ನಿರ್ಮಾಣದಲ್ಲಿ ಬಹುಕೋಟಿ ವೆಚ್ಚದಲ್ಲಿ ಮೂಡಿಬರ್ತಿರೋ ಈ ಚಿತ್ರದ ಮೇಲೆ ನಿರೀಕ್ಷೆ ತುಸು ಜಾಸ್ತಿನೆಯಿದೆ. ಹೈವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ ಚಿತ್ರ ಇದಾಗಿದ್ದು, ವಿದೇಶಿ ಮೂಲದ ಖ್ಯಾತ ಬಾಡಿಬಿಲ್ಡರ್‍ಗಳ ಜೊತೆ ಧ್ರುವ ಹೊಡೆದಾಡಿದ್ದಾರೆ. ಅಷ್ಟಕ್ಕೂ, ಧ್ರುವ ಗ್ಯಾಂಗ್‍ಸ್ಟರ್ರಾ ಅಥವಾ ಸೋಲ್ಜರ್ರಾ? ಈ ಕುತೂಹಲವನ್ನ ಬಿಟ್ಟುಕೊಡದ ಎ.ಪಿ ಅರ್ಜುನ್ `ಮಾರ್ಟಿನ್’ಗಾಗಿ ಇಂಡಿಯಾದ ಜೊತೆಗೆ ಪಾಕ್ ಕೂಡ ಕಣ್ಣರಳಿಸಿ ಕಾಯುವಂತೆ ಮಾಡಿದ್ದಾರೆ.