Darshan: ಮೈಸೂರು ದಸರಾದಲ್ಲಿ ಸುಮಾರು ಎಂಟು ಬಾರಿ ಅಂಬಾರಿ ಹೊತ್ತು, ತನ್ನ ಗಜ ಗಾಂಬೀರ್ಯಕ್ಕೆ ಹೆಸರಾಗಿದ್ದ, ಎಲ್ಲರ ಗಮನ ಸೆಳೆದಿದ್ದ ಆನೆ ಅರ್ಜುನ. ಕಳೆದ ವರ್ಷ ಕಾಡಾನೆ ಕಾರ್ಯಚರಣೆಯಲ್ಲಿ ಮೃತಪಟ್ಟ ಅರ್ಜುನನಿಗೆ ಕರುನಾಡೇ ಮರುಗಿತ್ತು. ರಾಜ್ಯಾದ ಹೃದಯ ಕಲುಕಿದ ಈ ಸುದ್ದಿ ನಟ ದರ್ಶನ್‌ರನ್ನು ಕಾಡಿತ್ತು. ಆ ಕಾಡುವಿಕೆ ಇನ್ನೂ ನಿಂತಿಲ್ಲ. ಅದಕ್ಕೆ ಕಾರಣ ಚಾಲೆಂಜಿಂಗ್ ಸ್ಟಾರ್ ಹಾಕಿರುವ ಪೋಸ್ಟ್̤
ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಕ್ಯಾಪ್ಟನ್, ಗಜ ಗಾಂಬೀರ್ಯಕ್ಕೆ ಹೆಸರುವಾಸಿಯಾದ ಅರ್ಜುನ ಸಾವಿಗೀಡಾಗಿತ್ತು. ಎಂಟು ಬಾರಿ ಅಂಬಾರಿ ಹೊತ್ತು, ಗಜ ಗಾಂಬೀರ್ಯದಿಂದ ಹೆಜ್ಜೆ ಹಾಕಿ ಕರುನಾಡ ಜನರ ಮನಸ್ಸಲ್ಲಿ ನೆಲೆಸಿದ ಅರ್ಜುನನ ಸಾವು ಮರುಕ ಉಂಟು ಮಾಡಿತ್ತು. ಅರ್ಜುನ ಸಾವಿಗೀಡಾಗಿ ಆರು ತಿಂಗಳೇ ಕಳೆಯುತ್ತಾ ಬಂದಿದೆ. ಆದ್ರೆ ಅಂಬಾರಿ ಹೊತ್ತು ರಾಜ ಮರ್ಯಾದೆ ತಂದು ಕೊಟ್ಟಿದ್ದ ಆನೆಗೆ ಸಮಾಧಿ ನಿರ್ಮಿಸಿಲ್ಲ ಎನ್ನುವುದು ದಾಸನ ಮನಸ್ಸನ್ನು ಬಹುವಾಗಿ ಕಾಡುತ್ತಿದೆ. ಆತನ ಸಮಾಧಿಗೆ ಒಂದು ವ್ಯವಸ್ಥೆ ಮಾಡಿ, ಗೌರವ ಸಲ್ಲಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ. ದರ್ಶನ್(Darshan) ಮಾಡಿರುವ ಪೋಸ್ಟ್ ಹೀಗಿದೆ.
‘ದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರು ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ. ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ. ಇನ್ನೇನು ಮಳೆಗಾಲ ಶುರುವಾಗುವ ಮುನ್ನ ಇದಕ್ಕೊಂದು ಒಳ್ಳೆ ವ್ಯವಸ್ಥೆಯಾಗಲಿ ಎಂಬ ಕೋರಿಕೆ ನಮ್ಮದು’.
ನಟ ದರ್ಶನ್(Darshan) ಅಭಿಪ್ರಾಯಕ್ಕೆ, ಆಲೋಚನೆಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ. ಆದಷ್ಟು ಬೇಗ ಅರ್ಜುನನಿಗೆ ಸಲ್ಲಬೇಕಾದ ಗೌರವವನ್ನು ಸಂಬಂಧಪಟ್ಟ ಇಲಾಖೆ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ.