Uttarakaanda: ಡಾಲಿ ಧನಂಜಯ್(Dhananjaya) ಅಭಿನಯದ ‘ಉತ್ತರಕಾಂಡ’(Uttarakaanda) ಸಿನಿಮಾ ಶೂಟಿಂಗ್ ಆರಂಭವಾಗಿದೆ. ಮೊನ್ನೆ ಮೊನ್ನೆಯಷ್ಟೇ ರಾಜ್ಯದ ವಿವಿಧ ಭಾಗದಲ್ಲಿ ಚಿತ್ರಕ್ಕಾಗಿ ಹೊಸ ಪ್ರತಿಭೆ ಅನ್ವೇಷಣೆ ನಡೆಸಿದ್ದ ಚಿತ್ರತಂಡವೀಗ ಹೊಸ ಹೊಸ ಅಪ್ಡೇಟ್ ಮೂಲಕ ಗಮನ ಸೆಳೆಯುತ್ತಿದೆ.
ಹೌದು, ದಿನಕ್ಕೊಂದು ನಟ-ನಟಿಯರು ‘ಉತ್ತರಕಾಂಡ’(Uttarakaanda) ಅಂಗಳವನ್ನು ಸೇರಿಕೊಳ್ಳುತ್ತಿದ್ದಾರೆ. ಈ ಮೂಲಕ ಚಿತ್ರತಂಡದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ದೂದ್ ಪೇಡ ದಿಗಂತ್(Diganth) ಉತ್ತರಕಾಂಡ ಅಡ್ಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರತಂಡ ದಿಗ್ಗಿ ನಯಾ ಅವತಾರದ ಪೋಸ್ಟರ್ ಬಿಡುಗಡೆ ಮಾಡಿ ವೆಲ್ಕಂ ಹೇಳಿದೆ. ‘ಮಲ್ಲಿಗೆ’ ಪಾತ್ರಕ್ಕೆ ದಿಗಂತ್ ಬಣ್ಣ ಹಚ್ಚಿದ್ದು, ಚಾಕ್ಲೆಟ್ ಬಾಯ್ ದಿಗ್ಗಿ ರಗಡ್ ನಯಾ ಅವತಾರ ನೋಡಿದ್ರೆ ಕ್ಯೂರಿಯಾಸಿಟಿ ಮೂಡೋದಂತೂ ಗ್ಯಾರೆಂಟಿ.
ಮಲಯಾಳಂ ಖ್ಯಾತ ನಟ ವಿಜಯ್ ಬಾಬು(Vijay Babu) ಕೂಡ ಉತ್ತರಕಾಂಡ ಅಖಾಡಕ್ಕೆ ಸೇರಿಕೊಂಡಿದ್ದಾರೆ. ‘ಟೊರಿನೋ’ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ‘ಟೋಬಿ’, ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಖ್ಯಾತಿಯ ಚೈತ್ರಾ.ಜೆ.ಆಚಾರ್(Chaithra J Achar) ಕೂಡ ಡಾಲಿ ಸಿನಿಮಾಗೆ ಎಂಟ್ರಿಕೊಟ್ಟಿದ್ದು ಲಚ್ಚಿಯಾಗಿ ಮ್ಯಾಜಿಕ್ ಮಾಡೋಕೆ ರೆಡಿಯಾಗಿದ್ದಾರೆ. ದಿನಕ್ಕೊಂದು ಸ್ಟಾರ್ಗಳು ಚಿತ್ರತಂಡ ಸೇರಿಕೊಳ್ತಿರೋದು ಕ್ಯೂರಿಯಾಸಿಟಿ ಹೆಚ್ಚಿಸಿದೆ. ಜೊತೆಗೆ ಪ್ರತಿ ಪಾತ್ರದ ಲುಕ್, ಗೆಟಪ್ ಡಿಫ್ರೆಂಟ್ ಆಗಿದ್ದು ಸಖತ್ ಕ್ರೇಜಿ಼ಯಾಗಿರಲಿದೆ ‘ಉತ್ತರಕಾಂಡ’(Uttarakaanda) ಲೋಕ ಎನ್ನುತ್ತಿದ್ದಾರೆ ಸಿನಿರಸಿಕರು.
ಕೆಆರ್ಜಿ ಸ್ಟುಡಿಯೋ(KRG Studios) ನಿರ್ಮಾಣದಲ್ಲಿ ಚಿತ್ರ ಮೂಡಿ ಬರ್ತಿದ್ದು, ‘ಗಬ್ರು ಸತ್ಯ’ನಾಗಿ ಡಾಲಿ ಮಿಂಚಲಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಕೂಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರೋಹಿತ್ ಪದಕಿ ಸಾರಥ್ಯವಹಿಸಿರುವ ಚಿತ್ರಕ್ಕೆ ಚರಣ್ ರಾಜ್ ಸಂಗೀತವಿದೆ.