Turbo: ಮಾಲಿವುಡ್ ಸಿನಿ ಅಂಗಳ ವರ್ಷದ ಮೊದಲಾರ್ಧದಲ್ಲೇ ಒಳ್ಳೆ ಪಸಲು ನೀಡಿದೆ. ವರ್ಲ್ಡ್ ಸಿನಿ ಪ್ರಿಯರು ಕಣ್ಣರಳಿಸಿ ತಮ್ಮತ್ತ ನೋಡುವಂತೆ ಮಾಡಿದೆ. ಚಿಕ್ಕ ಬಜೆಟ್ ಸಿನಿಮಾಗಳು ಕಂಟೆಂ ಮುಖ್ಯ ಅನ್ನೋದನ್ನು ಸಾಭೀತು ಮಾಡಿವೆ. ಇಂತಹದ್ದೇ ಕಂಟೆಂಟ್ ಹಾಗೂ ಮಾಸ್ ಆಕ್ಷನ್ ಸಬ್ಜೆಕ್ಟ್ ಹೊತ್ತು ಮಾಲಿವುಡ್ ಸೂಪರ್ ಸ್ಟಾರ್ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಅದುವೆ ಟರ್ಬೋ(Turbo).
ಮಾಲಿವುಡ್ ಸೂಪರ್ ಸ್ಟಾರ್ ಮಮ್ಮುಟ್ಟಿ(Mammotty) ನಟಿಸಿರುವ ಬಹು ನಿರೀಕ್ಷಿತ ಸಿನಿಮಾ ಟರ್ಬೋ. ಮೇ 23ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಪ್ರಮೋಶನ್ನಲ್ಲಿ ಬ್ಯುಸಿಯಾಗಿರುವ ಚಿತ್ರತಂಡ ಹೈ ವೊಲ್ಟೇಜ್ ಟ್ರೇಲರ್ ಬಿಡುಗಡೆ ಮಾಡಿ ಎಲ್ಲರ ಅಟೆಂಶನ್ ಗ್ರ್ಯಾಬ್ ಮಾಡಿದೆ. ಮಾಸ್ ಆಕ್ಷನ್ ಟ್ರೈಲರ್ ತುಣುಕು ಸೋಶಿಯಲ್ ಮೀಡಿಯಾ ಅಂಗಳದಲ್ಲಿ ಕಿಚ್ಚು ಹಚ್ಚಿಸಿದ್ದು, ಮತ್ತೊಮ್ಮೆ, ಮಗದೊಮ್ಮೆ ನೋಡುವಂತೆ ಮಾಡಿದೆ. ಈ ಚಿತ್ರದ ವಿಶೇಷ ಅಂದ್ರೆ ರಾಜ್ ಬಿ ಶೆಟ್ಟಿ. ಹೌದು, ಕನ್ನಡಿಗ ನಟ ನಿರ್ದೇಶಕ ರಾಜ್ ಬಿ ಶೆಟ್ಟಿ(Raj B Shetty) ಚಿತ್ರದಲ್ಲಿ ವಿಲನ್ ಅವತಾರ ಎತ್ತಿದ್ದಾರೆ.
ಸೂಪರ್ ಸ್ಟಾರ್ ಮಮ್ಮುಟ್ಟಿ(Mammotty) ಎದುರು ರಾಜ್ ಬಿ ಶೆಟ್ಟಿ(Raj B Shetty) ಖಡಕ್ ಆಗಿ ಮಿಂಚಿದ್ದು, ಟ್ರೇಲರ್ ತುಣುಕಲ್ಲಿ ಟೋಬಿ ಕಂಡು ಥ್ರಿಲ್ ಆಗಿದ್ದಾರೆ ಮಾಲಿವುಡ್ ಮಂದಿ. ಖಡಕ್ ಲುಕ್ ಲೋಕಲ್ ವಿಲನ್ ಆಗಿ ಮಿಂಚಿರುವ ರಾಜ್ ಬಿ ಶೆಟ್ಟಿ ನಯಾ ವೆಂಚರ್ ಪಕ್ಕಾ ಕ್ಲಿಕ್ ಆಗುತ್ತೆ ಅನ್ನೋದಕ್ಕೆ ಸಾಕ್ಷಿ ಟರ್ಬೋ ಟ್ರೇಲರ್. ವೈಶಾಕ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರವನ್ನು ಮಮ್ಮುಟ್ಟಿ ತಮ್ಮದೇ ಬ್ಯಾನರ್ನಲ್ಲಿ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.