Sanjay Dutt: ಬಿಟೌನ್‌ನಲ್ಲಿ ದಾಖಲೆ ಬರೆಯೋದರ ಜೊತೆಗೆ ನಟ ಸಂಜಯ್ ದತ್‌ಗೆ ಮರು ಜೀವ ನೀಡಿದ ಚಿತ್ರ ‘ಮುನ್ನಾಭಾಯಿ MBBS'(Munna Bhai MBBS). ರಾಜ್ ಕುಮಾರ್ ಹಿರಾನಿ ನಿರ್ದೇಶನದ ಈ ಸಿನಿಮಾ ಎರಡು ದಶಕ ಪೂರೈಸಿದ್ದು, ಚಿತ್ರದ ನಿರ್ಮಾಪಕರಾದ ವಿದು ವಿನೋದ್ ಚೋಪ್ರ ಸಿನಿಮಾದ ಹಲವು ಸೀಕ್ರೇಟ್ ಬಿಚ್ಚಿಟ್ಟಿದ್ದಾರೆ.
ಮುನ್ನಾಭಾಯಿ ಎಂಬಿಬಿಎಸ್ ಸಿನಿಮಾ ಯಾರಿಗೆ ಗೊತ್ತಿಲ್ಲ ಹೇಳಿ, ಯಾರು ಈ ಸಿನಿಮಾ ನೋಡಿಲ್ಲ ಹೇಳಿ. ರಾಜ್ ಕುಮಾರ್ ಹಿರಾನಿ ಮ್ಯಾಜಿಕ್‌ಗಳಲ್ಲಿ ಈ ಸಿನಿಮಾ ಕೂಡ ಒಂದು. ಹೊಸ ಅಲೆ ಸೃಷ್ಟಿಸಿದ ಈ ಸಿನಿಮಾ ತೆರೆಕಂಡು ಎರಡು ದಶಕವಾಗಿದೆ. ಇಂದಿಗೂ ಈ ಸಿನಿಮಾ ಎಲ್ಲರ ಫೇವರೇಟ್. ಇತ್ತೀಚೆಗೆ ಈ ಚಿತ್ರದ ನಿರ್ಮಾಪಕ ವಿದು ವಿನೋದ್ ಚೋಪ್ರ ಸಿನಿಮಾದ ಬಗ್ಗೆ ಹಲವು ಇಂಟ್ರಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಟಿಸಬೇಕಾಗಿದ್ದು ಶಾರೂಕ್ ಖಾನ್ ಎಂದು ಹೇಳಿದ್ದಾರೆ. ಕಾರಣಾಂತರಗಳಿಂದ ಕಿಂಗ್ ಖಾನ್ ಈ ಸಿನಿಮಾ ಕೈ ಬಿಟ್ಟರು ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲ ಮುಂಬೈ ಬ್ಲ್ಯಾಸ್ಟ್ ನಲ್ಲಿ ಸಂಜಯ್ ದತ್(Sanjay Dutt) ಕೈವಾಡವಿದೆ ಎಂದು ಜೈಲುವಾಸ ಅನುಭವಿಸಿ ಬಂದಿದ್ದ ನಟ ಸಿನಿಮಾದ ಪಾತ್ರವೊಂದಕ್ಕೆ ಆಯ್ಕೆಯಾಗಿದ್ದರು. ಜೈಲಿಂದ ಬಂದ ಮೇಲೆ ಯಾವುದೇ ಪಾತ್ರವಾದರೂ ನಟಿಸುವ ಮನಸ್ಥಿತಿಯಲ್ಲಿದ್ದರು. ‘ಮುನ್ನಾಭಾಯಿ ಎಂಬಿಬಿಎಸ್’ MBBS(Munna Bhai MBBS) ಸಿನಿಮಾದಲ್ಲಿ ಕ್ಯಾನ್ಸರ್ ರೋಗಿ ಪಾತ್ರಕ್ಕೆ ಆಯ್ಕೆಯಾಗಿದ್ದರು. ಶಾರೂಕ್ ಈ ಸಿನಿಮಾ ಕೈಬಿಟ್ಟ ಮೇಲೆ ರಾಜ್ ಕುಮಾರ್ ಹಿರಾನಿ ಸಂಜುಬಾಬಾರಲ್ಲಿ ಮುನ್ನಾಭಾಯಿಯನ್ನು ಕಂಡು ಅವರಿಗೆ ಲೀಡ್ ರೋಲ್ ನೀಡಿದರು ಎಂದಿದ್ದಾರೆ ಚಿತ್ರದ ನಿರ್ಮಾಪಕ ವಿದು ವಿನೋದ್ ಚೋಪ್ರ.
2003ರಲ್ಲಿ ತೆರೆಕಂಡ ‘ಮುನ್ನಾಭಾಯಿ MBBS’(Munna Bhai MBBS) ಸಂಜಯ್ ದತ್‌ಗೆ ಮರು ಜೀವ ನೀಡಿತು. ಸಿನಿಮಾರಂಗದಿಂದ ಬ್ಯಾನ್ ಆಗಿದ್ದ ನಟ ಈ ಚಿತ್ರದ ಮೂಲಕ ಸ್ಟ್ರಾಂಗ್ ಕಂಬ್ಯಾಕ್ ಮಾಡಿದ್ರು. ಬಾಲಿವುಡ್‌ನಲ್ಲಿ ಮತ್ತೆ ಸಂಜು ಬಾಬಾ ಬ್ಯುಸಿಯಾದ್ರು.