Siddharth: ಕಾಲಿವುಡ್ ಸ್ಟಾರ ನಟ ಸಿದ್ದಾರ್ಥ್(Siddharth)ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಕಳೆದ ವರ್ಷ ತೆರೆಕಂಡ ‘ಚಿತ್ತ’(Chithha) ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಗೆಲ್ಲುವುದರ ಜೊತೆ ದೇಶಾದ್ಯಂತ ಮೆಚ್ಚುಗೆ ಪಡೆದುಕೊಂಡಿತ್ತು. ಸದ್ಯ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಸಿದ್ದಾರ್ಥ್‌ಗೆ ‘ಇಂಡಿಯನ್2’(Indian2) ಟೀಂ ಕೂಡ ಬರ್ತ್ ಡೇ ಗಿಫ್ಟ್ ನೀಡಿ ಶುಭ ಹಾರೈಸಿದೆ.
ಕಮಲ್ ಹಾಸನ್(Kamal Haasan), ಶಂಕರ್(S Shankar) ಕಾಂಬಿನೇಶನ್‌ನಲ್ಲಿ ಮೂಡಿ ಬರ್ತಿರುವ ಬಹು ನಿರೀಕ್ಷಿತ ಸಿನಿಮಾ ‘ಇಂಡಿಯನ್2’(Indian2). ಇಡೀ ದೇಶವೇ ಈ ಇಬ್ಬರ ಕ್ರೇಜಿ಼ ಕಾಂಬಿನೇಶನ್ ಕಣ್ತುಂಬಿಕೊಳ್ಳಲು ಕಾಯುತ್ತಿದೆ. ಜೂನ್‌ನಲ್ಲು ತೆರೆ ಕಾಣಲು ರೆಡಿಯಾಗಿರುವ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಕಾಲಿವುಡ್ ಸ್ಟಾರ್ ನಟ ಸಿದ್ದಾರ್ಥ್(Siddharth) ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸಿದ್ದಾರ್ಥ್ ಹುಟ್ಟುಹಬ್ಬಕ್ಕೆ ಚಿತ್ರತಂಡ ಸಿದ್ದಾರ್ಥ್ ಲುಕ್ ರಿವೀಲ್ ಮಾಡಿ ಶುಭ ಹಾರೈಸಿದೆ. ಸಖತ್ ಜೋಶ್‌ನಲ್ಲಿರುವ ಸಿದ್ದಾರ್ಥ್ ಲುಕ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಕಳೆದ ವರ್ಷ ತೆರೆಕಂಡ ‘ಚಿತ್ತ’(Chithha) ಸಿನಿಮಾ ಗೆಲುವಿನಿಂದ ಸಖತ್ ಖುಷಿಯಲ್ಲಿದ್ದಾರೆ ನಟ ಸಿದ್ದಾರ್ಥ್. ಇದೀಗ ‘ಇಂಡಿಯನ್2’ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆ ನಟಿಸಿದ್ದು, ಇದರ ಹೊರತಾಗಿ ಬೇರಾವ ಸಿನಿಮಾಗಳಿಗೆ ಸಿದ್ದಾರ್ಥ್(Siddharth) ಸಹಿ ಮಾಡಿಲ್ಲ. ‘ಇಂಡಿಯನ್ 2’ ಸಿನಿಮಾ ಸಿದ್ದಾರ್ಥ್‌ಗೆ ದೊಡ್ಡ ಬ್ರೇಕ್ ತಂಡಕೊಡುತ್ತಾ ಕಾದುನೋಡಬೇಕು. ಇದರ ನಡುವೆ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ನಟ ಕಳೆದ ತಿಂಗಳು ನಟಿ ಅದಿತಿ ರಾವ್ ಹೈದರಿ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ ಈ ಜೋಡಿ ಮದುವೆಯಾಗಲಿದೆ.