Surya: ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ (Surya) ಸದ್ಯ `ಕಂಗುವಾ’(Kanguva) ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೀಸರ್ ಬಿಡುಗಡೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ಧೂಳ್ ಎಬ್ಬಿಸಿತ್ತು. ʻಕಂಗುವಾʼ ಲೋಕ ಕಂಡು ಕುತೂಹಲ ಭರಿತವಾಗಿರುವ ಸಿನಿಲೋಕ ಸಿನಿಮಾ ಬಿಡುಗಡೆಯನ್ನು ಎದುರು ನೋಡುತ್ತಿದೆ. ಇದೇ ಸಮಯದಲ್ಲಿ ನೆಚ್ಚಿನ ನಟನ ಮುಂದಿನ ಅಪ್ಡೇಡ್ ಕೂಡ ಸಿಕ್ಕಿದೆ.
ನಟ ಸೂರ್ಯ (Surya) ತಮ್ಮ 44ನೇ ಸಿನಿಮಾಗಾಗಿ ವೆರಿ ಟ್ಯಾಲೆಂಟೆಡ್ ಡೈರೆಕ್ಟರ್ ಕಾರ್ತಿಕ್ ಸುಬ್ಬರಾಜು(Kartik Subbarju) ಜೊತೆ ಕೈ ಜೋಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸೂರ್ಯ ಕಾರ್ತಿಕ್ ಸುಬ್ಬರಾಜು ಜೊತೆ ಇರುವ ಫೋಟೊ ಹಂಚಿಕೊಂಡಿದ್ದು, ಎಲ್ಲರ ಶುಭ ಹಾರೈಕೆ ಇರಲಿ ಎಂದು ಪೋಸ್ಟ್ ಮಾಡಿದ್ದಾರೆ. ಲವ್, ಲಾಫ್ಟರ್, ವಾರ್ ಎಂದಿರುವ ಸಿನಿಮಾದ ಪೋಸ್ಟರ್ ಕೂಡ ಕುತೂಹಲ ಮೂಡಿಸಿದೆ. ಪೋಸ್ಟರ್ ಕಂಡು ಸಿನಿಮಾ ಸಬ್ಜೆಕ್ಟ್, ಸಿನಿಮಾ ಯಾವ ರೀತಿ ಮೂಡಿ ಬರಲಿದೆ ಎಂಬ ಲೆಕ್ಕಾಚಾರ ಸಿನಿ ದುನಿಯಾದಲ್ಲಿ ನಡೆಯುತ್ತಿದೆ.
ಜಿಗರ್‌ಥಂಡಾ-2(Jigarthanda DoubleX) ಸಿನಿಮಾ ಸಕ್ಸಸ್ ಖುಷಿಯಲ್ಲಿದ್ದಾರೆ ಕಾರ್ತಿಕ್ ಸುಬ್ಬರಾಜು. ಧನುಷ್, ರಜನಿಕಾಂತ್, ಚಿಯಾನ್ ವಿಕ್ರಮ್ ರಂತ ಸ್ಟಾರ್ ನಟರಿಗೆ ಆಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿದ್ದಾರೆ. ಇದೀಗ ತಮಿಳು ಚಿತ್ರರಂಗದ ಮತ್ತೊಬ್ಬ ಸೂಪರ್ ಸ್ಟಾರ್‌ಗೆ ಆಕ್ಷನ್ ಕಟ್ ಹೇಳ್ತಿದ್ದಾರೆ.
ಈ ನಡುವೆ ಸೂರ್ಯ(Surya) ಸಿನಿಮಾ ಆಯ್ಕೆ ವಿಚಾರದಲ್ಲಿ ಪಳಗಿದ್ದಾರೆ. ಒಂದೊಂದು ಸಿನಿಮಾವನ್ನು ಅಳೆದು ತೂಗಿ ಆಯ್ಕೆ ಮಾಡಿಕೊಳ್ಳುತ್ತಿರುವ ಸೂರ್ಯ ಬಾಕ್ಸ್ ಆಫೀಸ್ ನಲ್ಲೂ ಗೆಲುವು ಕಾಣುತ್ತಿದ್ದಾರೆ. ಇದೀಗ ಕಾರ್ತಿಕ್ ಸುಬ್ಬರಾಜು ಜೊತೆ ಕೈ ಜೋಡಿಸಿರೋದು ಸಹಜವಾಗಿಯೇ ನಿರೀಕ್ಷೆ ಹೆಚ್ಚಿಸಿದೆ.