Yuva: ‘ಯುವ’ ಸಿನಿಮಾ (Yuva) ಬಾಕ್ಸ್ ಆಫೀಸ್‌ನಲ್ಲಿ ರೆಕಾರ್ಡ್ ಬರೆದಾಗಿದೆ. ಯುವ ರಾಜ್‌ಕುಮಾರ್ (Yuva Rajkumar) ಪಟ್ಟಾಭಿಷೇಕವೂ ಅದ್ದೂರಿಯಾಗಿ ಆಗಿದೆ. ಹೀರೋ ಆಗುವ ಮೊದಲಿದ್ದ ಅಭಿಮಾನಿ ಬಳಗ ಈಗ ದೊಡ್ಡದಾಗಿದೆ. ಯುವ ಮೇಲಿಟ್ಟಿದ್ದ ಅಭಿಮಾನಿಗಳ ಭರವಸೆ ಈಡೇರಿದೆ. ದೊಡ್ಮನೆ ಯುವರಾಜ ಮೊದಲ ಗೆಲುವಿಗೆ ಕೃತಘ್ನರಾಗಿದ್ದಾರೆ. ಅದೇ ಖುಷಿಯಲ್ಲಿ ಒಂದು ಮನವಿ ಮಾಡಿದ್ದಾರೆ.
ಏಪ್ರಿಲ್ 23 ಯುವ ರಾಜ್‌ಕುಮಾರ್(Yuva Rajkumar) ಹುಟ್ಟುಹಬ್ಬ. ಹುಟ್ಟುಹಬ್ಬದ ದಿನ ನಾನು ಮನೆಯಲ್ಲಿ ಇರೋದಿಲ್ಲ ಮತ್ತೊಮ್ಮೆ ಭೇಟಿಯಾಗೋಣ ಎಂದು ಕ್ಷಮೆ ಕೇಳಿದ್ದಾರೆ ಯುವ. ನೀವೆಲ್ಲಿದ್ದೀರೋ ಅಲ್ಲಿಂದಲೇ ನಿಮ್ಮ ಪ್ರೀತಿಯ ಹಾರೈಕೆ ತಿಳಿಸಿ ಅಷ್ಟೇ ನನಗೆ ಸಾಕು ಎಂದಿದ್ದಾರೆ. ಅಷ್ಟೇ ಅಲ್ಲ ಯುವ ಸಿನಿಮಾವನ್ನು ಪ್ರೀತಿಯಿಂದ ಸ್ವೀಕರಿಸಿದ್ದಕ್ಕೂ ಕೃತಘ್ನತೆ ತಿಳಿಸಿದ್ದಾರೆ. ಆದಷ್ಟು ಭೇಗ ಎಲ್ಲರನ್ನು ಭೇಟಿ ಮಾಡುವ ಪ್ರೀತಿಯ ಭರವಸೆ ನೀಡಿದ್ದಾರೆ.
‘ಯುವ’(Yuva)ನಾಗಿ ತೆರೆಮೇಲೆ ಮಿಂಚಿ ಮೊದಲ ಸಿನಿಮಾ ಗೆಲುವಿನ ಸಿಹಿಯುಂಡಿದ್ದಾರೆ ಯುವ ರಾಜ್‌ಕುಮಾರ್(Yuva Rajkumar). ಅಭಿಮಾನಿಗಳು ಯುವ ನಟನೆಗೆ ಫಿದಾ ಆಗಿದ್ದಾರೆ. ಅದೇ ಖುಷಿಯಲ್ಲಿ ಯುವ ಹುಟ್ಟುಹಬ್ಬ ಜೋರಾಗಿ ಸೆಲೆಬ್ರೇಟ್ ಮಾಡುವ ಯೋಜನೆಯಲ್ಲಿತ್ತು ದೊಡ್ಮನೆ ಅಭಿಮಾನಿ ವೃಂದ. ಸಿನಿಮಾ ಸಕ್ಸಸ್ ಆಗಿರೋದ್ರಿಂದ ದೊಡ್ಡ ಮಟ್ಟದಲ್ಲಿ ಯುವನನ್ನು ನೋಡಲು ಅಭಿಮಾನಿ ಬಳಗ ಕಾಯುತ್ತಿತ್ತು. ಆದ್ರೀಗ ಅದಕ್ಕೆ ಬ್ರೇಕ್ ಬಿದ್ದಿದೆ. ಸೆಲೇಬ್ರೇಶನ್ ಮೂಡ್‌ನಲ್ಲಿದ್ದವರು ನಿರಾಸೆಗೊಂಡಿದ್ದಾರೆ.
ಮಾರ್ಚ್ 29ರಂದು ‘ಯುವ’ ಸಿನಿಮಾ ತೆರೆಕಂಡಿತ್ತು. ಸಾಕಷ್ಟು ನಿರೀಕ್ಷೆಯೊಂದಿಗೆ ಬಂದ ಸಿನಿಮಾ ಎಲ್ಲರ ಮನ ಗೆದ್ದಿದೆ. ಯುವನನ್ನು ಮೆಚ್ಚಿ ಅಪ್ಪಿಕೊಂಡಿದ್ದಾರೆ ಜನ. ನಿರೀಕ್ಷೆಯಂತೆ ಬಾಕ್ಸ್ ಆಫೀಸ್‌ನಲ್ಲಿ ಗೆಲವು ಕಂಡಿದೆ. ಎಲ್ಲದಕ್ಕೂ ಹೆಚ್ಚಾಗಿ ಮೊದಲ ಸಿನಿಮಾದಲ್ಲೇ ಯುವ ರಾಜ್‌ಕುಮಾರ್(Yuva Rajkumar) ಅಭಿನಯ ಎಲ್ಲರ ಗಮನ ಸೆಳೆದಿದೆ.