Adah Sharma: ಕನ್ನಡದಲ್ಲಿ ʻರಣವಿಕ್ರಮʼ ಸಿನಿಮಾದಲ್ಲಿ ಅಪ್ಪು ಜೊತೆ ತೆರೆಹಂಚಿಕೊಂಡಿದ್ದ ನಟಿ ಅದಾ ಶರ್ಮಾ(Adah Sharma). ʻದಿ ಕೇರಳ ಸ್ಟೋರಿʼ ಸಿನಿಮಾ ಮೂಲಕ ಅಪಾರ ಜನಪ್ರಿಯತೆ ಗಳಿಸಿಕೊಂಡಿರುವ ಬಹುಭಾಷಾ ನಟಿ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಫ್ಲ್ಯಾಟ್ ಖರೀದಿಸಿ ಸುದ್ದಿಯಲ್ಲಿದ್ದಾರೆ.
ಮುಂಬೈನ ಮೌಂಟ್ ಬ್ಲಾಂಕ್ ಅಪಾರ್ಟ್ಮೆಂಟ್ನಲ್ಲಿ ಫ್ಲ್ಯಾಟ್ ಖರೀದಿ ಮಾಡಿ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ವಾಸವಿದ್ದರು. 2020ರ ಅವರ ಸಾವಿನ ನಂತರ ಆ ಮನೆಯನ್ನ ಯಾರೂ ಖರೀದಿ ಮಾಡಿರಲಿಲ್ಲ. ಮಾರಾಟಕ್ಕಿದ್ದ ಮನೆಯನ್ನು ಕಳೆದ ವರ್ಷ ಅದಾ ಶರ್ಮಾ(Adah Sharma) ಖರೀದಿಸಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಅದಾ ಮಾತ್ರ ಈ ಬಗ್ಗೆ ಮೌನಕ್ಕೆ ಶರಣಾಗಿದ್ದರು. ಇದೀಗ ಸುಶಾಂತ್ ಪ್ಲ್ಯಾಟ್ ಖರೀದಿ ಬಗ್ಗೆ ಮೌನ ಮುರಿದು ಮಾತನಾಡಿದ್ದಾರೆ.
ʻಇದೀಗ ನಾನು ಪ್ರತಿಯೊಬ್ಬರ ಹೃದಯದಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಲು ಇಷ್ಟ ಪಡುತ್ತೇನೆ. ಸುಶಾಂತ್ ಸಿಂಗ್ ಮನೆ ಖರೀದಿ ಮಾಡಲು ಹೋದಾಗ ಮಾಧ್ಯಮದವರ ಕಣ್ಣು ನನ್ನ ಮೇಲಿತ್ತು. ನಾನು ಯಾವಾಗಲೂ ನನ್ನ ಖಾಸಗಿ ವಿಚಾರಗಳನ್ನು ಖಾಸಗಿಯಾಗಿಯೇ ಇಟ್ಟುಕೊಳ್ಳಲು ಬಯಸುತ್ತೇನೆ. ಸಿನಿಮಾ ವಿಚಾರವಾಗಿ ಮಾತ್ರ ಸುದ್ದಿಯಲ್ಲಿ ಇರಲು ಬಯಸುತ್ತೇನೆʼ. ಆದ್ರಿಂದ ಈ ಬಗ್ಗೆ ಟಾಕ್ ಶುರುವಾದಾಗ ನಾನು ಪ್ರತಿಕ್ರಿಯೆ ನೀಡಿರಲಿಲ್ಲ ಎಂದಿದ್ದಾರೆ.
ಸುಶಾಂತ್(Sushant Singh Rajput)ಸಾವಿನ ನಂತರ ಅವರು ಡ್ರಗ್ಸ್ ತೆಗೆದು ಕೊಳ್ಳುತ್ತಿದ್ದರು ಎಂದು ಎಲ್ಲರೂ ಮಾತನಾಡುತ್ತಿದ್ದರು. ಇದು ನನಗೆ ಬೇಸರ ಉಂಟು ಮಾಡಿತ್ತು. ನಾನು ಮನೆ ಖರೀದಿಸಲು ಹೋದಾಗ ನನ್ನನ್ನೂ ಕೂಡ ಟ್ರೋಲ್ ಮಾಡಿದ್ದರು. ಈ ಜಗತ್ತಿನಲ್ಲಿ ಇಲ್ಲದ ವ್ಯಕ್ತಿ ಬಗ್ಗೆ ಮಾತನಾಡೋದು ತಪ್ಪು ಎಂದು ನಾನು ಭಾವಿಸಿದ್ದೇನೆ. ಯಾರೂ ಕೂಡ ಈ ರೀತಿ ಮಾಡಬೇಡಿ ಎಂದಿರುವ ಅದಾ ಶರ್ಮಾ(Adah Sharma) ಸುಶಾಂತ್ ಮೇಲೆ ಅಪಾರ ಗೌರವವಿದೆ ಎಂದಿದ್ದಾರೆ.