Aditi Prabhudeva: ಸ್ಯಾಂಡಲ್ವುಡ್ ಅಂಗಳದ ಚೆಂದದ ನಟಿ ಅದಿತಿ ಪ್ರಭುದೇವ(Aditi Prabhudeva). ʻವಾಟೆ ಎ ಬ್ಯೂಟಿಫುಲ್ ಹುಡುಗಿ ಶಿವ ಶಿವʼ ಎಂದು ಹುಡುಗರ ದಿಲ್ ಕದ್ದ ಈ ನಟಿ ಸದ್ಯ ಮ್ಯಾರೇಜ್ ಲೈಫ್ ಎಂಜಾಯ್ ಮಾಡ್ತಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅದಿತಿ-ಯಶಸ್ ಜೋಡಿ ಚೆಂದದೊಂದು ಫೋಟೋಶೂಟ್ನಿಂದ ಗಮನ ಸೆಳೆಯುತ್ತಿದ್ದಾರೆ.
ಇತ್ತೀಚೆಗೆ ಅದ್ದೂರಿಯಾಗಿ ಸೀಮಂತ ಆಚರಿಸಿಕೊಂಡ ಅದಿತಿ(Aditi Prabhudeva) ಇದೀಗ ಡಿಫರೆಂಟ್ ಆಗಿ ಬೇಬಿ ಬಂಪ್ ಫೋಟೊಶೂಟ್ ಮಾಡಿಸಿ ಗಮನ ಸೆಳೆಯುತ್ತಿದ್ದಾರೆ. ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಮೈಸೂರ್ ಸಿಲ್ಕ್ ಸೀರೆ, ಕಾಸಿನ ಸರ, ಮೂಗುತಿ ಧರಿಸಿ ಅದಿತಿ ಪೋಸ್ ನೀಡಿದ್ದು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಬೇಬಿ ಬಂಪ್ ಫೋಟೋಸ್ ಹಂಚಿಕೊಂಡಿರುವ ನಟಿ ʻಕೊನೆಗೂ ಈಡೇರಿದ ನನ್ನ ಪುಟ್ಟ ಆಸೆʼ ಎಂದು ಬರೆದುಕೊಂಡಿದ್ದಾರೆ. ಡಿಫ್ರೆಂಟ್ ಆಗಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿಕೊಂಡು ಗಮನ ಸೆಳೆದಿರುವ ಅದಿತಿ(Aditi Prabhudeva) ಅಪ್ಪಟ ಕನ್ನಡತಿ ಲುಕ್ನಲ್ಲಿ ಕಂಗೊಳಿಸಿದ್ದಾರೆ. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗೋದ್ರ ಜೊತೆಗೆ ಹೀಗೂ ಬೇಬಿ ಬಂಪ್ ಫೋಟೋಶೂಟ್ ಮಾಡಿಸಬಹುದು ಎಂದು ಲೈಕ್ಸ್, ಶೇರ್ ಮಾಡುತ್ತಿದ್ದಾರೆ ನೆಟ್ಟಿಗರು.
ʻಧೈರ್ಯಂʼ ಸಿನಿಮಾ ಮೂಲಕ ನಾಯಕಿಯಾಗಿ ಬಣ್ಣ ಹಚ್ಚಿದ ಅದಿತಿ ಪ್ರಭುದೇವ(Aditi Prabhudeva) ನಂತರದಲ್ಲಿ ಸಿಂಗ, ಬಜಾರ್, ಬ್ರಹ್ಮಚಾರಿ, ತೋತಾಪುರಿ, ತ್ರಿಬಲ್ ರೈಡಿಂಗ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿನಯ್ ರಾಜ್ ಕುಮಾರ್, ಆದಿತ್ಯ ಜೊತೆ ನಟಿಸಿದ ಸಿನಿಮಾಗಳು ತೆರೆ ಕಾಣಬೇಕಿದೆ.