Alia Bhatt: ಬಾಲಿವುಡ್ ಚಿತ್ರರಂಗದ ಸ್ಟಾರ್ ನಟಿ ಆಲಿಯಾ ಭಟ್. ಸೂಪರ್ ಹಿಟ್ ಸಿನಿಮಾಗಳ ಒಡತಿ ರಣಬೀರ್ ಮದುವೆಯ ನಂತರ ಪುತ್ರಿ ರಹಾ ಕಪೂರ್ ಜೊತೆ ಹಾಯಾಗಿ ದಿನ ಕಳೆಯುತ್ತಿದ್ದಾರೆ. ಇದರ ನಡುವೆ ಇಂಟರ್‌ನೆಟ್‌ನಲ್ಲಿ ಕಂಡ ವೀಡಿಯೋವೊಂದು ಆಲಿಯಾಗೆ ನೋವು ತಂದಿದೆ.
Pls share this
Dog walker at #khar #bandra needs to be reported to the owner. pic.twitter.com/pqIfVAlKRF
— majnu bhai (@DigitalAgarwal) April 18, 2024
ಆಲಿಯಾ ಭಟ್(Alia Bhatt) ನಟಿಯಾಗಿ ಸಕ್ಸಸ್ ಕಂಡವರು ಬಿಟೌನ್ ಸ್ಟಾರ್ ನಟಿಗೆ ಪ್ರಾಣಿಗಳಂದ್ರೆ ಅಚ್ಚುಮೆಚ್ಚು. ಪ್ರಾಣಿಪ್ರಿಯೆ ಆಲಿಯಾಗೆ ಹೆಂಗಸೊಬ್ಬಳು ನಾಯಿಯನ್ನು ಥಳಿಸುತ್ತಿರುವ ವೀಡಿಯೋ ಕಂಡು ಬೇಸರವಾಗಿದೆ. ಬಾಂದ್ರಾದ ರಸ್ತೆಯೊಂದರಲ್ಲಿ ಕಂಡುಬಂದ ದೃಶ್ಯ ಇದಾಗಿದ್ದು, ಬೀರ ಹೆಸರಿನ ಬೀಗಲ್ ನಾಯಿಗೆ ಹೆಂಗಸೊಬ್ಬಳು ಅಮಾನುಷವಾಗಿ ಥಳಿಸಿದ್ದಾಳೆ. ಈ ದೃಶ್ಯ ಎಂತವರಿಗಾದರೂ ನೋವುಂಟು ಮಾಡುವಂತಿದ್ದು, ಆಲಿಯಾ ಕಣ್ಣಿಗೆ ಈ ವೀಡಿಯೋ ಬಿದ್ದಿದ್ದು ತೀವ್ರ ಬೇಸರ, ಆಕ್ರೋಶ ಹೊರ ಹಾಕಿದ್ದಾರೆ.
ವೀಡಿಯೋವನ್ನು ಮೊದಲಿಗೆ ನಟಿ ಸೋಫಿ ಚೌಧರಿ ಹಂಚಿಕೊಂಡು ಸಂಬಂಧಪಟ್ಟವರು ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ರು. ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ವ್ಯಾಪಕ ಖಂಡನೆ ಕೇಳಿ ಬರ್ತಿದ್ದು, ನಾಯಿಗೆ ಥಳಿಸಿದ ಹೆಂಗಸಿನ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿಲಾಗುತ್ತಿದೆ. ಸೋಫಿಯ ಪೋಸ್ಟ್ ಶೇರ್ ಮಾಡಿರುವ ಆಲಿಯಾ(Alia Bhatt) ‘ಈ ರೀತಿ ಪ್ರಾಣಿಗಳನ್ನು ಹಿಂಸಿಸುವ ದೃಶ್ಯಗಳು ಕಂಡು ಬಂದಲ್ಲಿ ವೀಡಿಯೋ ಮಾಡಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ನೀಡಿ ಕ್ರಮ ಕೈಗೊಳ್ಳುವಂತೆ ಮಾಡಿ. ತಮ್ಮ ಹತಾಶೆಯನ್ನು ಪ್ರಾಣಿಗಳು, ಸಾಕು ಪ್ರಾಣಿಗಳ ಮೇಲೆ ತೋರಿಸುವವರಿಗೆ ಕಠಿಣ ಕ್ರಮ ಜಾರಿಗೆ ಬರಬೇಕು’ ಎಂದು ಬರೆದುಕೊಂಡು ಆಕ್ರೋಶ ಹೊರ ಹಾಕಿದ್ದಾರೆ.