ಕಿಚ್ಚ ಸುದೀಪ್ ಜೊತೆ ಹೆಬ್ಬುಲಿ ಸಿನಿಮಾದಲ್ಲಿ ಸ್ಕ್ರೀನ್ ಶೇರ್ ಮಾಡಿ ಕನ್ನಡಿಗರಿಗೆ ಪರಿಚಯಗೊಂಡ ಬಹುಭಾಷಾ ಚೆಲುವೆ ಅಮಲಾ ಪೌಲ್, ತುಟಿಗೆ ತುಟಿ ಕೊಟ್ಟು ಬೆರಳಿಗೆ ರಿಂಗ್ ಹಾಕಿಸಿಕೊಂಡು ಸುದ್ದಿಯಾಗಿದ್ದಾರೆ. ಇನ್ನೇನು ಆಧ್ಯಾತ್ಮದತ್ತ ವಾಲೆ ಬಿಟ್ಟರು ಎನ್ನುವಾಗಲೇ ಗೆಳೆಯನ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡು `ಹೆಂಗೆ ನಾವು’ ಅಂತ ಲವ್ ಮಾಕ್ಟೇಲ್ ಸ್ಟೈಲ್ನಲ್ಲಿ ಸರ್ ಪ್ರೈಸ್ ಕೊಟ್ಟಿದ್ದಾರೆ.
ಅಕ್ಟೋಬರ್ 26 ಸೌತ್ ಸುಂದರಿ ನಟಿ ಅಮಲ ಪೌಲ್ ಹುಟ್ಟುಹಬ್ಬ. ಅದೇ ದಿನ ಭಾಯ್ ಫ್ರೆಂಡ್ ಜಗತ್ ದೇಸಾಯಿ ಅಮಲ ಪೌಲ್ಗೆ ಸರ್ ಪ್ರೈಸ್ ಕೊಟ್ಟಿದ್ದಾರೆ. ಖಾಸಗಿ ಹೋಟೆಲ್ನಲ್ಲಿ ಬರ್ತ್ಡೇ ಪಾರ್ಟಿ ಅರೇಂಜ್ ಮಾಡಿ ಗೆಳತಿ ಅಮಲಾಗೆ ಪ್ರಪೋಸ್ ಮಾಡಿದ್ದಾರೆ. ಮಂಡಿಯೂರಿ ಪ್ರೀತಿ ನೀವೇದನೆ ಮಾಡಿಕೊಳ್ಳುವುದರ ಜೊತೆಗೆ ಕೈಗೆ ರಿಂಗ್ ಹಾಕಿ `ವಿಲ್ ಯೂ ಮ್ಯಾರಿ ಮಿ’ ಎಂದಿದ್ದಾರೆ. ಗೆಳೆಯ ಕೇಳಿದ್ದೇ ತಡ ಯಸ್ ಎಂದು ಒಪ್ಪಿಕೊಂಡ ಅಮಲ ಪೌಲ್, ಮೂರ್ನಾಲ್ಕು ಭಾರಿ ತುಟಿಗೆ ತುಟಿ ಚುಂಬಿಸಿದ್ದಾರೆ. ಮುತ್ತಿನ ಮತ್ತಲ್ಲಿ ಶಾಂಪೇನ್ ಬಾಟೆಲ್ ಓಪನ್ ಮಾಡಿದ ಜೋಡಿ, `ಎಣ್ಣೆನೂ ಸೋಡಾನು ಎಂಥಾ ಒಳ್ಳೆ ಫ್ರೆಂಡು’ ಅಂತ ಹೆಬ್ಬುಲಿ ಸಾಂಗ್ನ ಗುನುಗಿರಬಹುದಾ? ಅಥವಾ ಓಪನ್ ದಿ ಬಾಟೆಲ್ ಎಂದು ಹಾಡಿರಬಹುದಾ ಗೊತ್ತಿಲ್ಲ. ಆದರೆ, ಇಬ್ಬರು ಖುಷಿಖುಷಿಯಲ್ಲಿದ್ದಾರೆ. ತಮ್ಮ ಸೋಷಿಯಲ್ ಪುಟದಲ್ಲಿ ಎಂಗೇಜ್ ಆಗಿರುವ ಸುದ್ದಿನಾ ವಿಡಿಯೋ ಸಮೇತ ಹಂಚಿಕೊಂಡಿದ್ದಾರೆ. ಹೀಗಾಗಿ, ಫ್ರೆಂಡ್ಸ್, ಫ್ಯಾನ್ಸ್ ಎಲ್ಲಾ ವಿಶ್ ಮಾಡ್ತಾವ್ರೆ. ಆದಷ್ಟು ಬೇಗ ಮದುವೆ ಊಟ ಹಾಕಿಸಿ ಎನ್ನುತ್ತಿದ್ದಾರೆ
ಈಗ ಜಗತ್ ದೇಸಾಯಿ ಜೊತೆ ರಿಂಗ್ ಎಕ್ಸ್ ಚೇಂಜ್ ಮಾಡಿಕೊಂಡು ಮದುವೆಗೆ ಮುಹೂರ್ತ ನೋಡ್ತಿರೋ ಮೈನಾ ಚೆಲುವೆಗೆ ಇದು ಎರಡನೇ ಮದುವೆ. ಈ ಹಿಂದೆ 2014ರಲ್ಲಿ ತಮಿಳು ನಿರ್ದೇಶಕ ಎ.ಎಲ್ ವಿಜಯ್ ಅವ್ರ ಜೊತೆ ಹಸೆಮಣೆ ಏರಿದ್ದರು. ಅದೇನಾಯ್ತೋ ಏನೋ ಗೊತ್ತಿಲ್ಲ ಇವರಿಬ್ಬರ ದಾಂಪತ್ಯ ಮೂರೇ ಮೂರು ವರ್ಷದಲ್ಲಿ ಮುರಿದುಬಿತ್ತು. ಅನಂತರ ಕೆಲವರ ಜೊತೆ ಈ ನಟಿಯ ಹೆಸರು ತಳುಕು ಹಾಕಿಕೊಳ್ತು. ಇದಕ್ಕೆಲ್ಲಾ ಸೊಪ್ಪಕಾದ ಈ ಸುಂದರಿ, ಕಾಡು ಬೆಟ್ಟ ಎಲ್ಲಾ ಸುತ್ತಾಡಿ, ಸಪ್ತಸಾಗರದಾಚೆ ಟ್ರಿಪ್ ಮಾಡಿ ಕೊನೆಗೆ ಹಿಮಾಲಯಕ್ಕೆ ಹೋದರು. ಆಗೆಲ್ಲರೂ ಅಂದುಕೊಂಡ್ರು ಆಧ್ಯಾತ್ಮ ಸ್ವೀಕರಿಸಬಹುದು ಅಂತಾ? ಆದ್ರೀಗ ಎಲ್ಲಾ ಉಲ್ಟಾ ಆಗಿದೆ. ಔಟಿಂಗ್ ಅಂಡ್ ಡೇಟಿಂಗ್ ಅಂತ ಸುತ್ತಾಡಿದ ಗೆಳೆಯನ ಜೊತೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲು ಲಿಪ್ಲಾಕ್ ಮಾಡಿ ಲಾಕ್ ಆಗಿಯಾಗಿದೆ. ಇನ್ನೇನಿದ್ರು ಪೀ ಪೀ ಪೀ ಢುಂ ಢುಂ ಢುಂ ಅಷ್ಟೇಯಾ. ಎನಿವೇ ಆಲ್ ದಿ ಬೆಸ್ಟ್ ಹೆಬ್ಬುಲಿ ಅಲ್ಲಲ್ಲಾ ಹೆಣ್ಣುಲಿ