Uttarakanda: ‘ಉತ್ತರಕಾಂಡ’ ಡಾಲಿ ಧನಂಜಯ್(Dhananjay) ಅಭಿನಯದ ಬಹು ನಿರೀಕ್ಷಿತ ಸಿನಿಮಾ. ಅದ್ದೂರಿಯಾಗಿ ಸೆಟ್ಟೇರಿದ ಸಿನಿಮಾ ಒಂದಿಷ್ಟು ಗ್ಯಾಪ್ ಬಳಿಕ ಸಿನಿಮಾ ಶೂಟಿಂಗ್ ಆರಂಭಿಸಿದೆ. ಈ ಚಿತ್ರ ಆರಂಭದಲ್ಲಿ ಮೋಹಕ ತಾರೆ ರಮ್ಯಾ ಕಂ ಬ್ಯಾಕ್ ಮಾಡ್ತಾರೆ ಅನ್ನೋ ಕಾರಣಕ್ಕ ಭಲೇ ಸೌಂಡ್ ಮಾಡಿತ್ತು ಆದ್ರೆ ರಮ್ಯಾ ಸಿನಿಮಾದಿಂದ ಹೆಜ್ಜೆ ಹೊರಗಿಟ್ಟು ನಡೆದಿದ್ದಾರೆ. ಹಾಕಿದ್ರೆ ಡಾಲಿಗೆ ನಾಯಕಿ ಯಾರು ಅನ್ನೋವಾಗ ಹೊಸ ಸುದ್ದಿ ನೀಡಿದೆ ಚಿತ್ರತಂಡ.
ಧನಂಜಯ್(Dhananjay̧) ಕೆಆರ್ಜಿ ಸ್ಟುಡಿಯೋ ಒಂದಾಗಿರುವ ಸಿನಿಮಾ ‘ಉತ್ತರಕಾಂಡ’(Uttarakanda). ರೋಹಿತ್ ಪದಕಿ ಆಕ್ಷನ್ ಕಟ್ ಹೇಳ್ತಿರುವ ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡ ನಟಿಸುತ್ತಿದ್ದಾರೆ. ನಾಯಕಿಯಾಗಿ ರಮ್ಯಾ(Ramya) ಕಂ ಬ್ಯಾಕ್ ಮಾಡೋ ಕನಸಾಗಿಯೇ ಉಳಿದಿದ್ದು, ಉತ್ತರಕಾಂಡದಿಂದ ರಮ್ಯಾ ಬಲಗಾಲಿಟ್ಟು ಹೊರನಡೆದಿದ್ದಾರೆ. ಇದೀಗ ಚಿತ್ರತಂಡ ನಯಾ ನಾಯಕಿಯನ್ನು ಪರಿಚಯಿಸಿದೆ ಆಕೆ ಬೇರಾರು ಅಲ್ಲ ‘ಟೋಬಿ’, ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಖ್ಯಾತಿಯ ಚೈತ್ರಾ ಜೆ ಆಚಾರ್(Chaithra J Achar).
ಹೌದು, ಚೈತ್ರಾ ಜೆ(Chaithra J Achar). ಆಚಾರ್ ‘ಉತ್ತರಕಾಂಡ’(Uttarakanda) ಸಿನಿಮಾ ಅಡ್ಡ ಸೇರಿಕೊಂಡಿದ್ದಾರೆ. ಇಂದಿನಿಂದ ಚಿತ್ರೀಕರಣಕ್ಕೂ ಹೆಜ್ಜೆ ಇಟ್ಟಿದ್ದಾರೆ. ಚಿತ್ರದಲ್ಲಿ ಲಚ್ಚಿಯಾಗಿ ಪ್ರಮುಖ ಪಾತ್ರವನ್ನು ಚೈತ್ರ ನಟಿಸುತ್ತಿದ್ದಾರೆ.ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿ ಚೈತ್ರಾಗೆ ವೆಲ್ ಕಂ ಹೇಳಿದೆ. ಪೋಸ್ಟರ್ ನೋಡಿದವರು ಡಾಲಿಗೆ ಈಕೆಯೇ ನಾಯಕಿಯಾಗಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರಾ ಅಥವಾ ಚಿತ್ರದ ಪ್ರಮುಖ ರೋಲ್ನಲ್ಲಿ ಮಾತ್ರ ಇರ್ತಾರಾ ಎಂಬ ಲೆಕ್ಕಾಚಾರದಲ್ಲಿದ್ದಾರೆ.