Harshika Poonacha: ನಟಿ ಹರ್ಷಿಕಾ ಪೂಣಚ್ಚ(Harshika Poonacha) ಇಂದು ಕಳೆದೆರಡು ದಿನಗಳ ಹಿಂದೆ ತಮಗಾದ ಕರಾಳ ಅನುಭವ ತೆರೆದಿಟ್ಟಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ನಡೆದ ಈ ಘಟನೆ ಬಗ್ಗೆ ಶಾಕ್ ಆಗಿರುವ ಈಕೆ ಪತಿ ಭುವನ್ ಪೊನ್ನಣ್ಣ(Bhuvan Ponnannaa) ಮೇಲೆ ಕಣ್ಣೆದುರೇ ನಡೆದ ಹಲ್ಲೆಯನ್ನು ಘಟನೆ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಪುಲಕೇಶಿ ನಗರದಲ್ಲಿರುವ ರೆಸ್ಟೋರೆಂಟ್‌ಗೆ ದಂಪತಿಗಳಿಬ್ಬರು ಕುಟುಂಬ ಸಮೇತ ಹೋದಾಗ ನಡೆದ ಘಟನೆ ಇದಾಗಿದೆ. ವಾಲೆಟ್ ಪಾರ್ಕಿಂಗ್‌ನಿಂದ ಕಾರ್ ತೆಗೆಯುತ್ತಿರುವಾಗ ಇಬ್ಬರು ವ್ಯಕ್ತಿಗಳು ನಿಮ್ಮ ಗಾಡಿ ದೊಡ್ಡದಿದೆ ಮುಂದೆ ಚಲಿಸಿದರೆ ನಮ್ಮನ್ನು ಮುಟ್ಟುತ್ತದೆ ಎಂದು ಕಾರ್ ಕಿಟಕಿ ಪಕ್ಕ ವಾದಿಸಿದರು. ಭುವನ್((Bhuvan Ponnannaa) ಇನ್ನೂ ಗಾಡಿ ತೆಗೆದಿಲ್ಲ ದಾರಿ ಬಿಡಿ ಎಂದು ಕೇಳಿದ್ರು. ಗಾಡಿ ಮುಂದೆ ತೆಗೆಯುತ್ತಿದ್ದಂತೆ ಕೆಟ್ಟ ಭಾಷೆಯಲ್ಲಿ ನಿಂದಿಸಿದ್ರು. ಲೋಕಲ್ ಕನ್ನಡಿಗರಿಗೆ ಬುದ್ದಿ ಕಲಿಸಬೇಕು ಎಂದು ಭೂವನ್‌ಗೆ ಹೊಡೆಯಲು ಯತ್ನಿಸಿದ್ರು, ಸ್ವಲ್ಪ ಸಮಯದಲ್ಲೇ ೨೦-೩೦ ಜನ ಗ್ಯಾಂಗ್ ಬಂದು ಭುವನ್ ಕತ್ತಿಗೆ ಕೈ ಹಾಕಿ ಚಿನ್ನದ ಸರ ಕಸಿಯಲು ಪ್ರಯತ್ನಪಟ್ರು. ಇಬ್ಬರನ್ನು ದೈಹಿಕವಾಗಿ ನಿಂದಿಸಿ, ಕಾರ್‌ಗೆ ಕೂಡ ಹಾನಿ ಮಾಡಿದ್ದಾರೆ.
ನಾವು ಕನ್ನಡದಲ್ಲಿ ಮಾತನಾಡಿದ್ದು ಅವರಿಗೆ ಸಮಸ್ಯೆಯಾಗಿದೆ. ಆ ಗುಂಪಿನಲ್ಲಿ ಹಿಂದಿ, ಉರ್ದುನವರೇ ಹೆಚ್ಚಿದ್ದರು. ʼಎ ಲೋಕಲ್ ಕನ್ನಡ್ ವಾಲಾ ಹೈʼ ಎಂದು ನಮ್ಮನ್ನು ಕಂಡು ಮಾತನಾಡಿಕೊಳ್ತಿದ್ರು ಆ ಸಮಯದಲ್ಲಿ ಪೊಲೀಸ್ ಸಹಾಯವನ್ನು ಯಾಚಿಸಿದರೂ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ. ಈ ಘಟನೆ ಬಳಿಕ ಮಾನಸಿಕ ಆಘಾತಕ್ಕೆ ಒಳಗಾಗಿದ್ದೇನೆ ಎಂದು ಸುದೀರ್ಘವಾಗಿ ನಡೆದ ಘಟನೆ ಹಂಚಿಕೊಂಡು ಆತಂಕ ವ್ಯಕ್ತಪಡಿಸಿದ್ದಾರೆ ಹರ್ಷಿಕಾ ಪೂಣಚ್ಚ(Harshika Poonacha). ಘಟನೆ ಬಳಿಕ ಮನನೊಂದಿರುವ ಹರ್ಷಿಕಾ(Harshika Poonacha) ಬೆಂಗಳೂರಿನಲ್ಲಿ ಇರುವ ಸ್ಥಳೀಯರು ಎಷ್ಟು ಸುರಕ್ಷಿತ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ನಮ್ಮ ಊರಲ್ಲಿ ಕನ್ನಡ ಮಾತನಾಡೋದು ತಪ್ಪಾ..? ಈ ಬಗ್ಗೆ ಮುಖ್ಯಮಂತ್ರಿಗಳು, ರಾಜ್ಯ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.