Kareena Kapoor: ಕರೀನಾ ಕಪೂರ್.. ಬಾಲಿವುಡ್ ಅಂಗಳದಲ್ಲಿ ಬೇಬೋ ಎಂದೇ ಖ್ಯಾತಿ ಗಳಿಸಿಕೊಂಡಿದ್ದಾರೆ. ನಟ ಸೈಫ್ ಅಲಿಖಾನ್ ಮದುವೆಯಾಗಿ ಮ್ಯಾರೇಜ್ ಲೈಫ್‌ನಲ್ಲಿ ಬ್ಯುಸಿಯಾಗಿದ್ದ ಕರೀನಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಕ್ರ್ಯೂ(Crew) ಸಿನಿಮಾ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ ಕರೀನಾ(Kareena Kapoor).
ಕ್ರ್ಯೂ(Crew) ಸಿನಿಮಾ ಬಿಟೌನ್ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದೆ. ಮಹಿಳಾ ಪ್ರಧಾನ ಸಿನಿಮಾವೊಂದು ಸ್ಟಾರ್ ಹೀರೋಗಳ ಸಿನಿಮಾ ಕಲೆಕ್ಷನ್‌ಗೆ ಸೆಡ್ಡು ಹೊಡೆದು ನಿಂತಿದೆ. ಕೇವಲ ಬಿಟೌನ್ ಮಾತ್ರವಲ್ಲದೆ ಗ್ಲೋಬಲ್ ಲೆವೆಲ್‌ನಲ್ಲಿ ಹಿಟ್ ಆದ ಸಿನಿಮಾ ಒಟ್ಟು 150 ಕೋಟಿ ಕಲೆಕ್ಷನ್ ಮಾಡಿದೆ. ಇದೇ ಖುಷಿಯಲ್ಲಿ ಕರೀನಾ(Kareena Kapoor) ತೇಲುತ್ತಿದ್ದಾರೆ. ಖುಷಿಯಲ್ಲೇ ಸ್ಟೇಟ್‌ಮೆಂಟ್‌ವೊಂದನ್ನು ನೀಡಿ ಗಮನ ಸೆಳೆದಿದ್ದಾರೆ.
ಕ್ರ್ಯೂ(Crew) ಸಿನಿಮಾ ಗೆದ್ದಿರೋದಕ್ಕೆ, ಇಷ್ಟು ಕಲೆಕ್ಷನ್ ಮಾಡಿರೋದಕ್ಕೆ ತುಂಬಾ ಖುಷಿಯಿದೆ. ಮಹಿಳೆಯ ಚಿತ್ರಗಳೂ ಕೂಡ ಬಾಕ್ಸ್ ಆಫೀಸ್ ರೂಲ್ಸ್ ಬ್ರೇಕ್ ಮಾಡಬಲ್ಲವು ಎಂದಿದ್ದಾರೆ. ಕ್ರ್ಯೂ ಸಿನಿಮಾ ಮನರಂಜನೆ ಜೊತೆಗೆ ಉತ್ತಮ ಸಂದೇಶವುಳ್ಳ ಸಿನಿಮಾ. ಮೂರು ನಟಿಯರ ಮುಖ್ಯ ಭೂಮಿಕೆಯ ಈ ಸಿನಿಮಾವನ್ನು ಜನ ಮೆಚ್ಚಿ ಗೆಲ್ಲಿಸಿದ್ದಾರೆ. ಸಿನಿಮಾ 150 ಕೋಟಿ ಕಲೆಕ್ಷನ್ ಮಾಡುವ ಮೂಲಕ ಲಿಂಗತಾರತಮ್ಯ ಇಲ್ಲ ಅನ್ನೋದನ್ನ ಪ್ರೂವ್ ಮಾಡಿದೆ. ಇದು ನಟರ ಸಿನಿಮಾ, ನಟಿಯರ ಸಿನಿಮಾ ಎಂದಿದ್ದ ಬ್ಯಾರೀಕೇಡ್‌ನ್ನು ಈ ಚಿತ್ರ ಮುರಿದಿದೆ ಎಂದು ಕರೀನಾ ಕಪೂರ್ ಹೇಳಿದ್ದಾರೆ.
ಮಾರ್ಚ್‌ನಲ್ಲಿ ತೆರೆಕಂಡ ಕ್ರ್ಯೂ(Crew)ಚಿತ್ರದಲ್ಲಿ ಕರೀನಾ ಕಪೂರ್(Kareena Kapoor), ಕೃತಿ ಸನೂನ್(Kriti Sanoon), ಟಬು(Tabu) ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು. ಬಿಡುಗಡೆಯ ಮೊದಲವಾರದಲೇ ಸಿನಿಮಾ ಬಾಕ್ಸ್ ಆಫೀಸ್ ಶೇಕ್ ಮಾಡಿತ್ತು. ಒಂದೇ ವಾರದಲ್ಲಿ 48 ಕೋಟಿ ಕಲೆಕ್ಷನ್ ಮಾಡಿತ್ತು. ತದನಂತರ ಈ ಸಿನಿಮಾ ನೂರು ಕೋಟಿ ಕ್ಲಬ್ ಸೇರಿತ್ತು. ಗೆಲುವಿನ ನಗೆ ಬೀರಿತ್ತು. ರಾಜೇಶ್ ಎ ಕೃಷ್ಣನ್ ನಿರ್ದೇಶನದಲ್ಲಿ ತೆರೆಕಂಡ ಚಿತ್ರವನ್ನು ರಿಯಾ ಕಪೂರ್ ನಿರ್ಮಾಣ ಮಾಡಿದ್ದಾರೆ.