Meghana Raj: ನಟಿ ಮೇಘನಾ ರಾಜ್(Meghana Raj)ಬೇಸಿಗೆ ಕಾಲವನ್ನು ಮಗ ಹಾಗೂ ಫ್ಯಾಮಿಲಿಯೊಂದಿಗೆ ಎಂಜಾಯ್ ಮಾಡುತ್ತಾ ಕಳೆಯುತ್ತಿದ್ದಾರೆ. ಮೈಸೂರಿನ ಮೃಗಾಲಯಕ್ಕೆ ಮಗ ರಾಯನ್(Rayan Raj Sarja) ಹಾಗೂ ತಾಯಿ ಪ್ರಮೀಳ ಜೋಶಯ್, ತಂದೆ ಸುಂದರ್ ರಾಜ್ ಜೊತೆ ಭೇಟಿ ನೀಡಿದ್ದಾರೆ. ಒಂದಿಷ್ಟು ಸಮಯವನ್ನು ಪ್ರಾಣಿ, ಪಕ್ಷಿಗಳ ನಡುವೆ ಕಳೆದು ಎಂಜಾಯ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
ಮೃಗಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೈಸೂರು ರಾಣಿ ಪ್ರಮೋದ ದೇವಿ ಯುವರಾಜ ಆಧ್ಯವೀರ್‌ರನ್ನು ಮೇಘನಾ ರಾಜ್(Meghana Raj) ಫ್ಯಾಮಿಲಿ ಭೇಟಿ ಮಾಡಿ ಫೋಟೋ ಕ್ಲಿಕ್ಕಿಸಿಕೊಂಡಿದೆ. ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಮಹಾರಾಣಿ ಹಾಗೂ ಲಿಟಲ್ ಪ್ರಿನ್ಸ್ ಜೊತೆಗೆ ಇದೊಂದು ರಾಯಲ್ ಕ್ಷಣ. ಈ ಕ್ಷಣವನ್ನು ಎಂದೆಂದಿಗೂ ಸ್ಮರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಮಗನ ಆರೈಕೆಯಲ್ಲಿ ಬ್ಯುಸಿಯಾಗಿರುವ ಮೇಘನಾ ಯೂಟ್ಯೂಬ್ ಕೂಡ ಆರಂಭಿಸಿದ್ದಾರೆ. ರಾಯನ್, ಅಪ್ಪ-ಅಮ್ಮನ ಜೊತೆ ಕಳೆಯುವ ಸಮಯವನ್ನು ವ್ಲಾಗ್ಸ್ ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ಸಿನಿಮಾದಾಚೆಯೂ ಬ್ಯುಸಿಯಾಗಿಟ್ಟುಕೊಂಡಿದ್ದಾರೆ ಮೇಘನಾ(Meghana Raj). ಸಿನಿಮಾ ವಿಚಾರಕ್ಕೆ ಬಂದ್ರೆ ಕಳೆದ ವರ್ಷ ಮೇಘನಾ ಅಭಿನಯದ ‘ತತ್ಸಮ -ತದ್ಭವ’ ಸಿನಿಮಾ ಬಿಡುಗಡೆಯಾಗಿತ್ತು. ಇದು ಹೊರತು ಪಡಿಸಿ ಉಪೇಂದ್ರ ಅಭಿನಯದ ‘ಬುದ್ದಿವಂತ2’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.