ನಮ್ಮ ಮೇಘು ಬ್ಯೂಟಿ ಅಂತ ಗೊತ್ತಿತ್ತು. ಆದರೆ, ಇಷ್ಟೊಂದು ಹಾಟ್ ಬ್ಯೂಟಿ ಅಂತ ಗೊತ್ತಿರಲಿಲ್ಲ. ನಮ್ಮ ಮೇಘು ಒನಪು ವಯ್ಯಾರಕ್ಕೆ ನಾವೆಲ್ಲ ಕುಂತಕುಂತಲ್ಲೇ ಬೆವತೋಗುವಷ್ಟು ಪವರ್ ಇದೆ ಎಂಬುದು ನಮಗೆ ತಿಳಿದಿರಲಿಲ್ಲ. ಆದ್ರೀಗ ಎಲ್ಲವೂ ನಮ್ಮ ಅರಿವಿಗೆ ಬಂದಿದೆ. ಹೀಗಿರುವಾಗ ನಾವೆಲ್ಲ ಆಕೆಗೆ `ಐ ಲವ್ ಯೂ’ ಸಾಂಗ್‍ನ ಡೆಡಿಕೇಟ್ ಮಾಡದೇ ಇದ್ದರೆ ಹೇಗೆ. ಹೀಗಂದುಕೊಂಡ ಹರೆಯದ ಹುಡುಗರ ತಂಡವೊಂದು `ಬಂಗಾರದಂತ ಬೊಂಬೆ ಮಾಡಿದ… ಆ ರಂಭೆಗಿಂತ ರಂಗು ನೀಡಿದ’ ಅಂತ ಹಾಡ್ತಾ, ಸ್ವರ್ಗದಿಂದ ಧರೆಗಿಳಿದ ದೇವತೆಯಂತಿರೋ ಮೇಘಾ ಚೆಲುವನ್ನು ಬಣ್ಣಿಸ್ತಿದ್ದಾರೆ. ಮೇಘು ನಿನ್ನ ಸೌಂದರ್ಯಕ್ಕೆ ಹಾಲಿವುಡ್ ಸುಂದರಿಯರಿಗೆ ಸೆಡ್ಡು ಹೊಡೆಯುವಷ್ಟು ಶಕ್ತಿಯಿದೆ. ನಿನ್ನ ಮುಂದೆ ಆ ಹಾಲಿವುಡ್‍ನ ಹೀರೋಯಿನ್ಸ್ ಕೂಡ ಡಮ್ಮಿ ಎಂದ್ರೂ ತಪ್ಪಾಗಲ್ಲ ಬಿಡು ಅಂತಿದ್ದಾರೆ.
ಮೇಘಾ ನ್ಯೂ ಲುಕ್ ನೋಡಿದರೆ ನಿಮ್ಮೆಲ್ಲರಿಗೂ ಕೂಡ ಪಡ್ಡೆಹುಡುಗರು ಹೇಳಿದ್ದು ನಿಜ ಅನ್ಸುತ್ತೆ. ಜೊತೆಗೆ ಇದು ನಮ್ಮ ಮೇಘಾಶೆಟ್ಟಿನಾ ಅಂತ ಡೌಟ್ ಕೂಡ ಬರುತ್ತೆ. ಯಾಕಂದ್ರೆ, ಜೊತೆಜೊತೆಯಲಿ ಸೀರಿಯಲ್‍ನಲ್ಲಿ ನೀವು ನೋಡಿದ ಮೇಘಾಶೆಟ್ಟಿಗೂ, ಈಗ ನಿಮ್ಮ ಮುಂದೆ ಹಾಲಿವುಡ್ ನಟಿಯರನ್ನೂ ಮೀರಿಸುವಂತೆ ಲುಕ್ ಕೊಟ್ಟಿರೋ ಮೇಘಾಶೆಟ್ಟಿಗೂ ಲಾಟ್ ಆಫ್ ಡಿಫರೆನ್ಸ್ ಇದೆ. ಅಲ್ಲಿ ಲಂಗದಾವಣಿ ಹಾಕ್ಕೊಂಡು, ಸೀರೆ ಇಲ್ಲವೇ ಚೂಡಿದಾರ್ ಹಾಕ್ಕೊಂಡು, ಅನುಸಿರಿಮನೆಯಾಗಿ ದರ್ಶನ ಕೊಡ್ತಿದ್ದ ಮೇಘಾ, ಈಗ ಕಂಪ್ಲೀಟ್ ಚೇಂಜ್ ಆಗಿದ್ದಾರೆ. ಭರ್ಜರಿ ಮೇಕೋವರ್ ಮಾಡಿಕೊಳ್ಳುತ್ತಾ, ವಾರಕ್ಕೊಂದು ಫೋಟೋಶೂಟ್ ಮಾಡಿಸಿಕೊಳ್ಳುತ್ತಾ, ನೋಡುಗರನ್ನ ಮಾತ್ರವಲ್ಲ ನಟಿಮಣಿಯರನ್ನೂ ಕೂಡ ಬೆಕ್ಕಸ ಬೆರಗಾಗಿಸ್ತಿದ್ದಾರೆ.
ಜೊತೆಜೊತೆಯಲಿ ಸೀರಿಯಲ್‍ನಲ್ಲಿ ಅನುಸಿರಿಮನೆ ಅಲಿಯಾಸ್ ಮೇಘಾಶೆಟ್ಟಿ ಪಕ್ಕದ್ಮನೆ ಹುಡುಗಿಯಂತಿದ್ದಿದ್ದೇನೋ ನಿಜ. ಆದ್ರೀಗ, ಯಾವ ಫಾರಿನ್ ಹುಡುಗಿಗೂ ಕಮ್ಮಿಯಿಲ್ಲದಂತೆ ಬದಲಾಗಿದ್ದಾರೆ. ಒಂದೊಂದು ಲುಕ್‍ನಲ್ಲಿ ಒಂದೊಂದು ರೀತಿಯಾಗಿ ಕಾಣಿಸುತ್ತಾ, ನೋಡುಗರನ್ನ ಒಂದೇ ಏಟಿಗೆ ಕ್ಲೀನ್ ಬೋಲ್ಡ್ ಮಾಡುತ್ತಿರುವ ಮೇಘಾ, ವೈಟ್ ಕೋಟ್ ಧರಿಸಿ ಹಾಲಿವುಡ್ ಬೆಡಗಿಯಂತೆ ಕಂಗೊಳಿಸಿದ್ದಾರೆ. ಸದ್ಯ ಮೇಘಾಶೆಟ್ಟಿಯ ಈ ಲುಕ್ಕು-ಗೆಟಪ್ಪು ಭಾರೀ ಚರ್ಚೆಯಾಗ್ತಿದೆ. ಹಳ್ಳಿಹುಡುಗಿಯಾಗೋಕು ಸೈ, ಗ್ಲಾಮರ್ ಡಾಲ್ ಆಗೋಕೂ ಜೈ ಅಂತಿರುವ ಮೇಘಾಶೆಟ್ಟಿನಾ ಪರಭಾಷೆಯವರು ಆರಿಸಿಕೊಂಡು ಹೋಗೋದ್ರಲ್ಲಿ ನೋ ಡೌಟ್ ಎನ್ನಲಾಗ್ತಿದೆ.
ನಿಮಗೀಗಾಗಲೇ ಗೊತ್ತಿರುವ ಹಾಗೇ ಮೇಘಾಶೆಟ್ಟಿ ಜೊತೆಜೊತೆಯಲಿ ಸೀರಿಯಲ್‍ನಿಂದ ಹೊರಬಂದು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಗೋಲ್ಡನ್ ಸ್ಟಾರ್ ಗಣಿ ಜೊತೆ ಮೊದಲ ಭಾರಿಗೆ ಬೆಳ್ಳಿಪರದೆ ಮೇಲೆ `ತ್ರಿಬಲ್ ರೈಡಿಂಗ್’ ಹೊರಟ ಮೇಘಾ, ಡಾರ್ಲಿಂಗ್ ಕೃಷ್ಣ ಜೊತೆಗೆ ದಿಲ್‍ಪಸಂದ್ ತಯ್ಯಾರಿಸಿ ಪ್ರೇಕ್ಷಕರಿಗೆ ತಿನಿಸಿದ್ರು. ಈಗ ಬಜಾರ್ ಹುಡುಗ ಧನ್ವೀರ್ ಗೆ ಕೈವಾ ಚಿತ್ರದಲ್ಲಿ ಕೋಸ್ಟಾರ್ ಆಗಿದ್ದಾರೆ. `ಆಪರೇಷನ್ ಲಂಡನ್ ಕೆಫೆ’ ಹೆಸರಿನ ಸಿನಿಮಾದಲ್ಲೂ ನಾಯಕಿಯಾಗಿ ಮಿಂಚುತ್ತಿದ್ದಾರೆ. ಪ್ರಿನ್ಸ್ ಮಹೇಶ್ ಬಾಬು ಜೊತೆ ಖಾಸಗಿ ಜಾಹೀರಾತುವೊಂದ್ರಲ್ಲಿ ಕಾಣಿಸಿಕೊಂಡು ಸಿಕ್ಕಾಪಟ್ಟೆ ಸುದ್ದಿಯಾದರು. ಈಗ ಹೊಸ ಹೊಸ ಫೋಟೋಶೂಟ್ ಮೂಲಕ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಜೊತೆಜೊತೆಯಲಿ ಸೀರಿಯಲ್ ಫೇಮ್‍ನಿಂದ ಕ್ರೇಜ್ ಜೊತೆಗೆ ಹ್ಯೂಜ್ ಫ್ಯಾನ್ ಫಾಲೋಯಿಂಗ್ ಸೃಷ್ಟಿಸಿಕೊಂಡಿರೋ ಅನುಸಿರಿಮನೆಗೆ ಈಗ 1 ಮಿಲಿಯನ್‍ಗೂ ಅಧಿಕ ಫಾಲೋಯರ್ಸ್ ಇದ್ದಾರೆ. ಹೊಸ ಲುಕ್ಕು ಅಂಡ್ ಫೀಲ್ ಕೊಡ್ತಾ ಫೋಟೋಶೂಟ್‍ನಿಂದ ಸುದ್ದಿಯಲ್ಲಿರೋ ಮೇಘಾ, ಆದಷ್ಟು ಬೇಗ ಮೆಗಾಸಿನಿಮಾಗೆ ಆನ್‍ಬೋರ್ಡ್ ಆಗಲಿ. `ಐಎಎಸ್’ ಆಫೀಸರ್ ಆಗುವ ಕನಸು ಕಂಡು, ಅಚಾನಕ್ ಆಗಿ ಸಿನಿಮಾಲೋಕ ಪ್ರವೇಶಿಸಿರೋ ಮೇಘಾಶೆಟ್ಟಿಗೆ ಸಿನಿದುನಿಯಾದಲ್ಲಿ ಒಳ್ಳೊಳ್ಳೆ ಆಫರ್ ಸಿಗಲಿ. ಮಾಯಲೋಕದಲ್ಲಿ ಮಂಗಳೂರು ಚೆಲುವೆ ಹೊಳೆಯುವಂತಾಗಲಿ ಅನ್ನೋದೇ ಸಿನಿಮಾಮಂದಿಯ ಆಶಯ