Nabha Natesh: ಕಾರ್ ಆಕ್ಸಿಡೆಂಟ್‌ನಿಂದಾಗಿ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದ ನಟಿ ನಭಾ ನಟೇಶ್(Nabha Natesh) ಚಿತ್ರರಂಗಕ್ಕೆ ಮರಳಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಒಪ್ಪಿಕೊಂಡು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ‘ಹನು-ಮಾನ್’ ಸಿನಿಮಾ ನಿರ್ಮಿಸಿ ಬ್ಲಾಕ್ ಬಸ್ಟರ್ ಹಿಟ್ ನೀಡಿರುವ ಕೆ. ನಿರಂಜನ್ ರೆಡ್ಡಿ ಸಿನಿಮಾದಲ್ಲಿ ನಭಾ ನಟಿಸುತ್ತಿದ್ದು, ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಪೋಸ್ಟರ್ ಕಂಡು ನೆಟ್ಟಿಗರು ‘ವೈ ದಿಸ್ ಕೊಲವೆರಿ’ ಅಂತಿದ್ದಾರೆ.
ಹನು-ಮಾನ್(Hanu̲-Man) ಸಿನಿಮಾ ನಂತರ ಕೆ.ನಿರಂಜನ್ ರೆಡ್ಡಿ ರೋಮ್ಯಾಂಟಿಕ್ ಕಾಮಿಡಿ ಸಿನಿಮಾಗೆ ಬಂಡವಾಳ ಹಾಕಲು ರೆಡಿಯಾಗಿದ್ದಾರೆ. ಈ ಚಿತ್ರದಲ್ಲಿ ನಭಾ(Nabha Natesh) ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ‘ಡಾರ್ಲಿಂಗ್’(Darling) ಟೈಟಲ್ ಇಡಲಾಗಿದ್ದು, ‘ವೈ ದಿಸ್ ಕೊಲವೆರಿ’ ಎಂದು ಅಡಿಬರಹವಿದೆ. ನಟ ಪ್ರಿಯದರ್ಶಿ ಪುಲಿಕೊಂಡ, ನಭಾ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಚಿತ್ರಕ್ಕೆ ಅಶ್ವಿನ್ ರಾಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಚಿತ್ರದ ಫಸ್ಟ್ ಲುಕ್ ಸಖತ್ ಬಝ್ ಕ್ರಿಯೇಟ್ ಮಾಡಿದೆ.
ಟಾಲಿವುಡ್ ಸ್ಟಾರ್ ನಟರಾದ ರಾಮ್ ಪೋತಿನೇನಿ, ರವಿತೇಜ, ಸಾಯಿ ಧರ್ಮ ತೇಜ್, ನಿತಿನ್ ಜೊತೆ ಸ್ಕ್ರೀನ್ ಶೇರ್ ಮಾಡಿದ ಖ್ಯಾತಿ ಈಕೆಯದ್ದು. ಸಿನಿ ಕೆರಿಯರ್ ಪೀಕ್‌ನಲ್ಲಿರುವಾಗ ಕಾರ್ ಆಕ್ಸಿಡೆಂಟ್‌ನಿಂದ ನಭಾ ಸತತ ಎರಡು ವರ್ಷ ಬ್ರೇಕ್ ತೆಗೆದುಕೊಂಡಿದ್ರು. ಇದೀಗ ಮತ್ತೆ ಸಿನಿಮಾಗೆ ಬಣ್ಣಹಚ್ಚಲು ಆರಂಭಿಸಿದ್ದಾರೆ ಕನ್ನಡತಿ. ʻಕಾರ್ತಿಕೇಯʼ ಖ್ಯಾತಿಯ ನಿಖಿಲ್ ಸಿದ್ದಾರ್ಥ್ ನಟನೆಯ ʻಸ್ವಯಂಬುʼ(Swayambu) ಸಿನಿಮಾದಲ್ಲಿ ಸೆಕೆಂಡ್ ಲೀಡ್ ನಲ್ಲಿ ನಭಾ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ನೆಚ್ಚಿನ ನಟಿ ಮತ್ತೆ ಸಿನಿಮಾದಲ್ಲಿ ಬ್ಯುಸಿಯಾಗಿರೋದು ಅಭಿಮಾನಿಗಳಿಗೆ ಸಂತಸ ತಂದಿದೆ.