NabhaNatesh: ಸೀರೆಯುಟ್ಟು, ಮೂಗುತಿ ಧರಿಸಿ, ಬೈತಲೆ ಬೊಟ್ಟು ಏರಿಸಿಕೊಂಡು ಥೇಟ್ ಯುವರಾಣಿಯಂತೆ ಕಾಣೋ ನಭಾ ನಟೇಶ್ ಮೊದಲ ನೋಟದಲ್ಲೇ ಮನ ಕದಿಯುತ್ತಿದ್ದಾರೆ. ಇದು ನಾವು ಹೇಳ್ತಿರೋ ಮಾತಲ್ಲ. ನಭಾ ನಟೇಶ್(NabhaNatesh) ನಯಾ ಅವತಾರ ಕಂಡು ಅಭಿಮಾನಿಗಳು ಹೇಳ್ತಿರೋ ಮಾತು. ನಭಾ ಆ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಹೌದು, ನಭಾ ನಟೇಶ್(NabhaNatesh) ನಿತಿನ್ ಸಿದ್ದಾರ್ಥ್ ಜೊತೆ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ʻಸ್ವಯಂಭು(Swayambhu) ಸಿನಿಮಾ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ರಾಣಿ ಲುಕ್‌ನಲ್ಲಿ ನಭಾ ನಟೇಶ್ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಕಂಡು ಅಭಿಮಾನಿಗಳು ನಭಾ ಫೋಟೋವನ್ನು ಮತ್ತೊಮ್ಮೆ ಮಗದೊಮ್ಮೆ ನೋಡಿ ಖುಷಿ ಪಡುತ್ತಿದ್ದಾರೆ.
ʻಇಸ್ಮಾರ್ಟ್ ಶಂಕರ್ʼ(Ismart Shankar)ಮೂಲಕ ಟಾಲಿವುಡ್‌ನಲ್ಲಿ ಸಕ್ಸಸ್ ಕಂಡ ಕನ್ನಡತಿ ಆಕ್ಸಿಡೆಂಟ್‌ನಿಂದಾಗಿ ಸಿನಿಮಾದಿಂದ ದೂರ ಉಳಿದಿದ್ರು. ಇದೀಗ ʻಸ್ವಯಂಭುʼ ಸಿನಿಮಾ ಮೂಲಕ ನಭಾ ಕಂಬ್ಯಾಕ್ ಮಾಡುತ್ತಿದ್ದಾರೆ. ಚಿತ್ರತಂಡ ನಟಿಯನ್ನು ಗ್ರ್ಯಾಂಡ್ ವೆಲ್‌ಕಂ ಮಾಡಿದ್ದು ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿದೆ.
ʻಸ್ವಯಂಭುʼ(Swayambu)ಚಿತ್ರದಲ್ಲಿ ಸೆಕೆಂಡ್ ಲೀಡ್ ರೋಲ್ ನಲ್ಲಿ ನಭಾ (NabhaNatesh)ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಈ ಚಿತ್ರವಲ್ಲದೇ ʻಹನು-ಮಾನ್ʼ ನಿರ್ಮಾಪಕ ಕೆ.ನಿರಂಜನ್ ರೆಡ್ಡಿ ನಿರ್ಮಾಣದ ಸಿನಿಮಾದಲ್ಲೂ ನಟಿಸಲು ನಭಾ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಒಟ್ನಲ್ಲಿ, ಎರಡು ವರ್ಷದ ನಂತರ ನೆಚ್ಚಿನ ನಟಿಯನ್ನು ತೆರೆ ಮೇಲೆ ಕಾಣ್ತಿರೋದಕ್ಕೆ ಅವ್ರ ಅಭಿಮಾನಿಗಳು ದಿಲ್ ಖುಷ್ ಆಗಿರೋದಂತೂ ನಿಜ.