Neethu Shetty: ‘ಗಾಳಿಪಟ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಅಂಗಳಕ್ಕೆ ಕಾಲಿಟ್ಟವರು ನೀತು ಶೆಟ್ಟಿ(Neethu Shetty). ಕನ್ನಡ, ತುಳು, ಕೊಂಕಣಿ ಸಿನಿಮಾಗಳಲ್ಲಿ ನಟಿಸಿರುವ ‘ಗಾಳಿಪಟ’(Gaalipata) ‘ರಾಧಾ’ ಸಿನಿಮಾದಿಂದ ದೂರ ಉಳಿದಿದ್ದಾರೆ. ಮೊದಲ ಸಿನಿಮಾದಲ್ಲೇ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟ ಹುಡುಗಿ ಅಷ್ಟೇ ಬಹುಬೇಗ ತೆರಹಿಂದೆ ಸರಿದವರು. ಇತ್ತೀಚೆಗೆ ತಮ್ಮ ಜರ್ನಿ ಹಾಗೂ ಜರ್ನಿಯಲ್ಲಿ ಕಂಡ ಏರಿಳಿತವನ್ನು ಮನ ಬಿಚ್ಚಿ ಮಾತನಾಡಿದ್ದಾರೆ. ಎದುರಿಸಿದ ಅವಮಾನಕ್ಕೆ ಕಣ್ಣೀರಿಟ್ಟಿದ್ದಾರೆ.
ಗಾಳಿಪಟ(Gaalipata) ನಂತರ ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ನೀತು(Neethu Shetty)ಗೆ ಗೆಲುವು ಮರೀಚಿಕೆಯಾಗಿತ್ತು. ಸಿನಿಮಾ ಅವಕಾಶಗಳು ಬರುತ್ತಿದ್ದ ಸಮಯದಲ್ಲೇ ಸರ್ಜರಿ ಮಾಡಿಸಿಕೊಂಡ ನೀತು ಸೈಡ್ ಎಫೆಕ್ಟ್ ಆಗಿ ದಪ್ಪ ಆದ್ರು. ಸಿನಿಮಾ ಅವಕಾಶ ಕಮ್ಮಿಯಾಯ್ತು. ದಪ್ಪ ಆದ ಮೇಲೆ ಕೆಟ್ಟ ಕಮೆಂಟ್‌ಗಳು ಕೇಳಿ ಬರ್ತಿದ್ವು. ಯಾವ ಅಕ್ಕಿ ತಿಂತಿಯಾ ಅಂತ ಕೇಳ್ತಾರೆ. ಅದಕ್ಕೂ ಮೀರಿ ಬೇರೆಯವರೊಂದಿಗೆ ಮಜಾ ಮಾಡ್ತಿದ್ದಾಳೆ ಎಂಬ ಹಂತಕ್ಕೆ ಯೋಚನೆ ಮಾಡ್ತಿದ್ದಾರೆ. ಇಂತಹ ಕೆಟ್ಟ ಮೆಂಟಾಲಿಟಿ ಜನರಲ್ಲಿದೆ. ಈ ಮಾತುಗಳು ನನ್ನ ಜೀವನದಲ್ಲಿ ತುಂಬಾ ನೋವು ತಂದಿದೆ. ನಮ್ಮ ಊಟ, ಬೆಡ್ ರೂಂವರೆಗೂ ಯೋಚನೆ ಮಾಡಿದ್ದಾರೆ ಅಂದ್ರೆ ಅದು ಅಸಹ್ಯದ ಸಂಗತಿ. ಇದನ್ನೆಲ್ಲಾ ಕೇಳಿ ಮೊದಲು ತುಂಬಾ ಡಿಪ್ರೆಶನ್‌ಗೆ ಹೋಗಿದ್ದೆ ಎಂದು ಕಣ್ಣೀರಿಟ್ಟಿದ್ದಾರೆ. ಇದೇ ಸಮಯದಲ್ಲಿ ಬಾಡಿ ಶೇಮಿಂಗ್ ಮಾಡೋರಿಗೆ ಖಡಕ್ ಉತ್ತರ ಕೂಡ ನೀಡಿದ್ದಾರೆ.
ಸದ್ಯ ನೀತು ನಟನೆಗೆ ಬ್ರೇಕ್ ಹೇಳಿ ‘ಶಮನಿಸಂ’ ಕೋರ್ಸ್ ಮಾಡಿ ಅದನ್ನು ಪ್ರೊಫೆಶನ್ ಆಗಿ ತೆಗೆದುಕೊಂಡಿದ್ದಾರೆ. ನಾನು ಕನಸಲ್ಲೂ ಈ ಕೋರ್ಸ್ ಮಾಡುತ್ತೇನೆ, ಪೊಫ್ರೆಶನ್ ಆಗಿ ತೆಗದುಕೊಳ್ಳುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಫ್ಯಾಮಿಲಿ ಹಾಗೂ ಪರ್ಸನಲ್ ಜೀವನದಲ್ಲಿ ಆದ ಅನುಭವಗಳಿಂದ ಈ ಕೋರ್ಸ್ ತೆಗೆದುಕೊಳ್ಳಲು ನಿರ್ಧರಿಸಿದೆ ಎಂದಿದ್ದಾರೆ.