Parineeti Chopra: ಸಿನಿಮಾ ಇಂಡಸ್ಟ್ರಿ ಅಂದ್ರೆ ಸಾಕು ಎಲ್ಲರಲ್ಲೂ ಒಂದು ಕುತೂಹಲ. ಈ ಕಲರ್‌ಫುಲ್ ದುನಿಯಾ ಕೂಡ ಕಪ್ಪು ಚುಕ್ಕೆಯ ಹೊರತಾಗಿಲ್ಲ. ಇಲ್ಲೂ ಲಾಬಿಗಳು ನಡೆಯುತ್ತೆ. ಕಾಲೆಳೆಯುವವರು, ಅವಕಾಶ ಕಸಿದು ಕೊಳ್ಳುವವರು ಇದ್ದೇ ಇರ್ತಾರೆ. ಆಗಾಗ ಈ ಕಹಿ ಸತ್ಯಗಳು ನಟ-ನಟಿಯರ ಬಾಯಲ್ಲಿ ಬಂದು ಸುದ್ದಿಯಾಗುತ್ತಲೇ ಇರುತ್ತೆ. ಇದೀಗ ಬಿಟೌನ್ ನಟಿ ಪರಿಣಿತಿ ಚೋಪ್ರಾ(Parineeti Chopra) ಕೂಡ ಇದರ ಬಗೆಗ ಮೌನ ಮುರಿದು ಮಾತನಾಡಿದ್ದಾರೆ
ಬಾಲಿವುಡ್‌ನಲ್ಲಿ ಸಿನಿಮಾ ಅವಕಾಶಕ್ಕಾಗಿ ದೊಡ್ಡ ಲಾಬಿಯಾಗುತ್ತೆ ಎಂದು ಸಂದರ್ಶನವೊಂದರಲ್ಲಿ ಓಪನ್ ಆಗಿ ಹೇಳಿದ್ದಾರೆ ಪರಿಣಿತಿ(Parineeti Chopra). ದೊಡ್ಡ ಸಿನಿಮಾಗಳು, ಸ್ಟಾರ್ ಸಿನಿಮಾಗಳಲ್ಲಿ ಮಿಂಚಬೇಕಂದ್ರೆ ಅವಕಾಶಕ್ಕಾಗಿ ಪಾರ್ಟಿಗಳಿಗೆ ಹೋಗಬೇಕಾಗುತ್ತೆ. ಇವೆಂಟ್‌ಗಳಲ್ಲಿ ಭಾಗಿಯಾಗಬೇಕು. ಅಲ್ಲಿ ಪಾತ್ರಕ್ಕಾಗಿ ಲಾಬಿ ನಡೆಯುತ್ತಿರುತ್ತೆ ಆ ಲಾಭಿಯಲ್ಲಿ ಭಾಗಿಯಾಗಿ ಅವಕಾಶ ಗಿಟ್ಟಿಸಿಕೊಳ್ಳಬೇಕು. ನಾನು ಇದನ್ನೆಲ್ಲಾ ಮಾಡೋದಿಲ್ಲ. ಆದ್ರಿಂದ ನನಗೆ ದೊಡ್ಡ ಸಿನಿಮಾಗಳು ಕೈ ತಪ್ಪಿವೆ ಎಂದು ಕಹಿ ಸತ್ಯ ಬಿಚ್ಚಿದ್ದಾರೆ.
ಬಿಟೌನ್‌ನ ಹಲವು ಸಿನಿಮಾಗಳಲ್ಲಿ ನಟಿಸಿದ್ರೂ ಕೂಡ ಬಿಗ್ ಬಜೆಟ್ ಸಿನಿಮಾಗಳು ಪರಿಣಿತಿ ಕೈ ಸೇರಲಿಲ್ಲ. ಇದರ ಬಗ್ಗೆ ಕೂಡ ಮಾತನಾಡಿರುವ ಪರಿಣಿತಿ(Parineeti Chopra) ನಾನು ಕಮರ್ಶಿಯಲ್ ಸಿನಿಮಾಗಳನ್ನು ಮಾಡಿದ್ರೆ ಹೆಚ್ಚು ಪಾಪ್ಯುಲರ್ ಆಗುತ್ತಿದ್ದೆ ಆದರೆ ಈ ರೀತಿಯ ಲಾಬಿಯಿಂದ ಸಿಗಲಿಲ್ಲ. ನಾನು ಇಲ್ಲಿಯವರೆಗೆ ಏನು ಸಾಧಿಸಿದ್ದೇನೋ ಅದರ ಬಗ್ಗೆ ತೃಪ್ತಿ ಇದೆ ಎಂದಿದ್ದಾರೆ.
ಬಿಟೌನ್‌ನ ಸ್ಟಾರ್ ನಟಿಯರಲ್ಲಿ ಒಬ್ಬರಾದ ಪರಿಣಿತಿ ಚೋಪ್ರಾ(Parineeti Chopra) ಸದ್ಯ ಮ್ಯಾರೇಜ್ ಲೈಫ್ ಎಂಜಾಯ್ ಮಾಡ್ತಿದ್ದಾರೆ. ಇದರ ನಡುವೆ ಅವರು ನಟಿಸಿರುವ ‘ಅಮರ್ ಸಿಂಗ್ ಚಂಮ್ಕೀಲ'(Amar singh chamkila) ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಿ ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.