ಹೆಡ್ಡಿಂಗ್ ನೋಡಿದ್ಮೇಲೆ ಕುತೂಹಲದ ಕೋಲಾಹಲದ ಜೊತೆಜೊತೆಗೆ ಬುಲ್‍ಬುಲ್ ಬೆಡಗಿ ರಚಿತರಾಮ್‍ನ ಕಣ್ಮುಂದೆ ತಂದುಕೊಂಡಿರ್ತೀರಿ. ಆದರೆ, ನಾವು ಹೇಳಲಿಕ್ಕೆ ಹೊರಟಿರುವುದು ಕನ್ನಡದ ಗುಳಿಕೆನ್ನೆ ಚೆಲುವೆ ರಚಿತರಾಮ್ ಬಗ್ಗೆ ಅಲ್ಲ ಬದಲಾಗಿ ಕನ್ನಡತಿಯೇ ಆಗಿರುವ, ತೆಲುಗು, ತಮಿಳು, ಮಲೆಯಾಳಂ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿರುವಂತಹ ನಟಿ ರಚಿತ ಮಹಾಲಕ್ಷ್ಮಿ ಬಗ್ಗೆ, ಹೌದು, ರಚಿತ ಮಹಾಲಕ್ಷ್ಮಿ ಹೆಸರಿಗೆ ತಕ್ಕಂತೆ ನೋಡಲಿಕ್ಕೆ ಮಹಾಲಕ್ಷ್ಮಿಯಂತೆ ಇದ್ದಾರೆ. ತಮ್ಮ ಸಹಜ ಸೌಂದರ್ಯದಿಂದ, ಸುಂದರ ನಗುವಿನಿಂದ, ಅದ್ಭುತ ಅಭಿನಯದಿಂದ ನೋಡುಗರ ಮನಸೂರೆಗೊಂಡಿರುವ ಈಕೆ, ಎದೆಮೇಲೆ ಗೂಬೆ ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.
ಏನು ಗೂಬೆ ಟ್ಯಾಟೂನಾ? ಗೂಬೆ ಅಪಶಕುನಾ ಅಲ್ವೇನ್ರಿ? ಹೀಗಂತ ನೀವು ನಾಲಿಗೆ ಅಲ್ಲಾಡಿಸಬಹುದು. ಎಲ್ಲಾಬಿಟ್ಟು ಈ ನಟಿ ಗೂಬೆನಾ ಯಾಕಪ್ಪ ಎದೆಮೇಲೆ ಅಚ್ಚೊತ್ತಿಸಿಕೊಂಡಳು ಅಂತ ಪ್ರಶ್ನೆನೂ ಮಾಡಬಹುದು. ಆದರೆ, ಅದ್ಯಾವುದಕ್ಕೂ ಆಕಿ ಕಡೆಯಿಂದ ಸದ್ಯಕ್ಕಂತೂ ಉತ್ತರ ಸಿಗಲ್ಲ. ಆದರೆ, ಎದೆ ಮೇಲೆ ಗೂಬೆ ಪಕ್ಷಿನಾ ಕೆತ್ತಿಸಿಕೊಂಡಿರುವ ಪಾರಿಜಾತ ಚೆಲುವೆ, ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಅಪ್‍ಲೋಡ್ ಮಾಡುವುದರ ಜೊತೆಗೆ ಒಂದು ಸಾಲು ಗೀಚಿದ್ದಾಳೆ. ಗಾಯದ ಗುರುತುಗಳನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತಿದೆ ಮತ್ತು ಏಕಾಂತವನ್ನು ಅಪ್ಪಿಕೊಳ್ಳುತ್ತಿದೆ ಅಂತೇಳಿ ಗೂಬೆ ಟ್ಯಾಟೂ ಹಾಕಿಸಿಕೊಂಡಿರುವುದಕ್ಕೆ ಕಾರಣ ಏನೆಂದು ತಿಳಿಸಿದ್ದಾಳೆ.
ಅಂದ್ಹಾಗೇ ಈ ಗೂಬೆ ಬಗ್ಗೆ ಶಕುನ ಶಾಸ್ತ್ರದಲ್ಲಿ ನಾನಾ ರೀತಿಯ ಉಲ್ಲೇಖಗಳಿವೆ. ಗೂಬೆ ಬಗ್ಗೆ ಒಬ್ಬೊಬ್ಬರು ಒಂದು ರೀತಿಯಾಗಿ ಹೇಳಿರುವುದನ್ನ ನೋಡಬಹುದು. ಗೂಬೆನಾ ಶುಭ ಎನ್ನುವ ವರ್ಗವೂ ಇದೆ, ಅಶುಭ ಎಂದು ಟೀಕಿಸುವ ಗುಂಪು ಇದೆ. ಗೂಬೆ ಕೇವಲ ಒಂದು ಪಕ್ಷಿ ಅಲ್ಲ, ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗಿದೆ. ಗೂಬೆ ಸಂಪತ್ತಿನ ಸಂಕೇತವೆಂತಲೂ ಹೇಳಲಾಗ್ತಿದೆ. ಅಷ್ಟಕ್ಕೂ, ನಟಿ ರಚಿತ ಮಹಾಲಕ್ಷ್ಮಿಯವರು ಗೂಬೆ ಟ್ಯಾಟೂನ ಹಾಕಿಸಿಕೊಂಡಿದ್ದು ಸಂಪತ್ತಿನ ವೃದ್ದಿಗಾಗಿನಾ ಅಥವಾ ಶುಭ ಸಂಕೇತವಾಗಿ ನನ್ನೊಟ್ಟಿಗೆ ಇರಲಿ ಎನ್ನುವ ಕಾರಣಕ್ಕಾಗಿನಾ ಎಂಬುದು ತಿಳಿದಿಲ್ಲ. ಆದರೆ, ನಟಿ ಎದೆ ಮೇಲೆ ಗೂಬೆ ಹಚ್ಚೆ ನೋಡಿದವರು ಮಾತ್ರ ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.
ಅಲ್ಲಾರೀ, ಯಾರ್ಯಾರೋ ಏನೇನೋ ಅಚ್ಚೆ ಹಾಕಿಸಿಕೊಳ್ತಾರೆ ನೀವೇನ್ರಿ ಗೂಬೆನಾ ಎದೆ ಮೇಲೆ ಹಾಕಿಸಿಕೊಂಡಿದ್ದೀರಿ? ಹೀಗಂತ ಕಾಮೆಂಟ್ ಮಾಡುವ ನೆಟ್ಟಿಗರು ಇದ್ದಾರೆ. ಬೇರೆ ಎಲ್ಲೂ ಜಾಗ ಸಿಗಲಿಲ್ಲವಾ ಬೇಬಿ ಅಂತ ಕಿಚಾಯಿಸುವವರು ಇದ್ದಾರೆ. ಆದರೆ. ಅವರ ಫ್ಯಾನ್ಸ್ ಮಾತ್ರ, ಅಕ್ಕ ನೀವು ಅತ್ಯಂತ ಶಕ್ತಿಶಾಲಿ ಮಹಿಳೆ. ರಿಯಲ್ ವಾರಿಯರ್ ಅಂದರೆ ನೀವೇ. ಕಾನ್ಫಿಡೆನ್ಸ್ ಗೆ ನೀವು ಇನ್ನೊಂದು ಹೆಸರು ಎಂದ್ರೂ ತಪ್ಪಾಗಲಿಕ್ಕಿಲ್ಲ. ಎನಿವೇ, ಕೀಪ್ ರಾಕಿಂಗ್ ಅಂಡ್ ಶೈನಿಂಗ್ ಅಂತ ರಚಿತಾಗೆ ಬೆಂಬಲ ಸೂಚಿಸುತ್ತಿದ್ದಾರೆ. ಕೆಲವರು ಈ ಟ್ಯಾಟೂ ಅದೃಷ್ಟಕ್ಕೋಸ್ಕರ ಹಾಕಿಸಿಕೊಂಡಿದ್ದೀರೋ ಅಥವಾ ಅವಕಾಶಕ್ಕೋಸ್ಕರ ಕೆತ್ತಿಸಿಕೊಂಡಿರೋ ಅಂತ ಕುಹುಕವಾಡ್ತಿದ್ದಾರೆ. ಈ ಮಧ್ಯೆ ನಮ್ಮ ಪೋಲಿ ಪಡ್ಡೆಹೈಕ್ಳು ಆ ಗೂಬೆಗಿರುವ ಅದೃಷ್ಟ ನಮಗಿಲ್ಲವಲ್ಲರೋ? ಇದ್ದಿದ್ದರೆ ರಚ್ಚು ಎದೆ ಮೇಲೆ ಚಿತ್ತಾರವಾಗುವ ಅವಕಾಶ ಸಿಗ್ತಿತ್ತು ಅಂತ ಮೀಸೆಮರೆಯಲ್ಲಿ ನಗುತ್ತಿದ್ದಾರೆ.
ಎನಿವೇ ಪಬ್ಲಿಕ್ ಫಿಗರ್ ಗಳಾದ್ಮೇಲೆ ಪಾಸಿಟೀವ್ ಅಂಡ್ ನೆಗೆಟೀವ್ ಕಾಮೆಂಟ್ಸ್ ಬಂದೇ ಬರುತ್ತೆ. ಎಲ್ಲವನ್ನೂ ಸಮನಾಗಿ ಸ್ವೀಕರಿಸುತ್ತಾ ಮುಂದೆ ನಡೆಯುತ್ತಿರಬೇಕು. ಅದೇ ದಾರಿಯಲ್ಲಿ ನಟಿ ರಚಿತ ಮಹಾಲಕ್ಷ್ಮಿ ಹೆಜ್ಜೆ ಹಾಕುತ್ತಿದ್ದಾರೆ. ಮೂಲತಃ ಬೆಂಗಳೂರಿನವರಾದ ರಚಿತಾ, ಮೇಘ ಮಂಡಲ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟರು. ನಂತ್ರ ತೆಲುಗು, ತಮಿಳು, ಮಲೆಯಾಳಂ ಧಾರಾವಾಹಿಗಳಲ್ಲಿ ಮಿಂಚಿ ಜನಪ್ರಿಯರಾಗಿದ್ದಾರೆ. ಸರವಣನ್ ಮೀನಚ್ಚಿ ಸೀರಿಯಲ್‍ನ ಮೀನಚ್ಚಿ ಪಾತ್ರ ರಚಿತಾಗೆ ಬಹುದೊಡ್ಡ ಹೆಸರು ತಂದುಕೊಡ್ತು.
ಕನ್ನಡದ ಪಾರಿಜಾತ, ಎದ್ದೇಳು ಮಂಜುನಾಥ-2, ರಂಗನಾಯಕ ಸಿನಿಮಾದಲ್ಲಿ ಬಣ್ಣ ಹಚ್ಚುವ ಅವಕಾಶ ಸಿಗ್ತು. ತಮಿಳು ಬಿಗ್‍ಬಾಸ್ ಸೀಸನ್ 6ರ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶಿಸಿದ ರಚಿತಾ, 91 ದಿನಗಳ ಕಾಲ ಅರಮನೆಯಲ್ಲಿದ್ದು ಎಲ್ಲರನ್ನೂ ರಂಜಿಸಿದ್ದರು. ಅಲ್ಲಿಂದ ಅಭಿಮಾನಿ ಬಳಗ ಇನ್ನೂ ದೊಡ್ಡದಾಯ್ತು. ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್ ಗಟ್ಟಲೇ ಫಾಲೋಯರ್ಸ್ ಹುಟ್ಟಿಕೊಂಡರು. ರಚಿತಾ ಮಾನವೀಯ ಗುಣಕ್ಕೆ ಮನಸೋತ ಫ್ಯಾನ್ಸ್ ಆರಾಧಿಸುವುದಕ್ಕೆ ಶುರುಮಾಡಿದರು. ಈಗ ರಚಿತಾಗೆ ಅವರೇ ಬೆನ್ನೆಲುಬಾಗಿ ನಿಂತಿದ್ದಾರೆ. ಆಕೆಯ ಕಷ್ಟಕ್ಕೆ, ನೋವಿಗೆ ಸ್ಪಂಧಿಸುತ್ತಿದ್ದಾರೆ. `ಒಂದೇ ಒಂದು ಕಣ್ಣಬಿಂದು ಜಾರಿದರೇ ನಮ್ಮಾಣೆ ಎನ್ನುತ್ತಾ, ಆಕೆಯ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಬ್ಯಾಟ್ ಬೀಸುತ್ತಾ ಬಲವಾಗಿ ನಿಂತಿದ್ದಾರೆ. ಕನ್ನಡತಿ ರಚಿತಾ ಬೆಳಿಬೇಕು, ಆಕೆ ಸದಾ ನಗುತ್ತಿರಬೇಕು ಅಂತ ಬಯಸ್ತಿದ್ದಾರೆ. ಇದಕ್ಕಿಂತ ಒಬ್ಬ ನಟಿಗೆ ಇನ್ನೇನು ಬೇಕು ಹೇಳಿ