Sonali Bendre: 90 ಹಾಗೂ 2000 ಘಟ್ಟದಲ್ಲಿ ಸಿನಿರಸಿಕರನ್ನು ರಂಜಿಸಿದ್ದ ಬಿಟೌನ ಬ್ಯೂಟಿಫುಲ್ ನಟಿ ಸೋನಾಲಿ ಬೇಂದ್ರೆ(Sonali Bendre). ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಈ ಬೆಡಗಿ ಕ್ಯಾನ್ಸರ್ಗೆ ತುತ್ತಾಗಿ ಚಿತ್ರರಂಗದಿಂದ ದೂರ ಉಳಿದಿದ್ರು. ಇದೀಗ ಮತ್ತೆ ಕಂಬ್ಯಾಕ್ ಮಾಡಿರುವ ನಟಿ ತಮ್ಮ ಸಿನಿ ಕೆರಿಯರ್ನಲ್ಲಾದ ಗಿಮಿಕ್ ಒಂದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸೋನಾಲಿ ಬೇಂದ್ರೆ(Sonali Bendre)…ಬಾಲಿವುಡ್ ಅಂಗಳದ ಚೆಲುವೆ. ಕ್ಯಾನ್ಸರ್ಗೆ ತುತ್ತಾದ ಸೋನಾಲಿ ಬದುಕಿ ಬಂದಿದ್ದೆ ರೋಚಕ. ಕ್ಯಾನ್ಸರ್ ಗೆದ್ದು ಬಂದು ಅದರ ಬಗ್ಗೆ ಅರಿವು ಮೂಡಿಸುತ್ತಿರುವ ಈ ನಟಿ ಇದೀಗ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ. ‘ದಿ ಬ್ರೋಕನ್ ನ್ಯೂಸ್2’ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ವೆಬ್ ಸರಣಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಇದೇ ವೇಳೆ ತಾವು ಹೀರೋಯಿನ್ ಆಗಿದ್ದ ಸಮಯದಲ್ಲಿ ನಿರ್ದೇಶಕರು, ನಿರ್ಮಾಪಕರು ಮಾಡುತ್ತಿದ್ದ ಚೀಪ್ ಗಿಮಿಕ್ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ.
ನನ್ನ ಹೆಸರು ಅನೇಕ ಟಾಪ್ ನಟರೊಂದಿಗೆ ತಳುಕು ಹಾಕಿಕೊಂಡಿತ್ತು, ದಿನಕ್ಕೊಂದು ನಟರೊಂದಿಗೆ ರೂಮರ್ ಹಬ್ಬುತ್ತಿತ್ತು. ಇದರಿಂದ ನಾನು ಬೇಸರಗೊಳ್ಳುತ್ತಿದ್ದೆ. ಸುಮ್ಮನೇ ಇಲ್ಲದ ರೂಮರ್ಸ್ ಯಾರು ಮಾಡ್ತಿದ್ದಾರೆ ಎಂದು ಕೆದಿಕಿದಾಗ ನಾನು ನಟಿಸುತ್ತಿದ್ದ ಸಿನಿಮಾದ ನಿರ್ದೇಶಕ, ನಿರ್ಮಾಪಕರೇ ಈ ಕೆಲಸ ಮಾಡುತ್ತಿದ್ದರು. ಇದೆಲ್ಲ ಅವರು ಸಿನಿಮಾ ಬಗ್ಗೆ ಬಝ್ ಸೃಷ್ಟಿಸಲು ಮಾಡುತ್ತಿದ್ದರು. ಈ ರೀತಿಯ ಚೀಪ್ ಗಿಮಿಕ್ ಬೇಸರ ತರಿಸಿತ್ತು ಎಂದು ನೋವು ಹೊರ ಹಾಕಿದ್ದಾರೆ.
49ವರ್ಷದ ಸೋನಾಲಿ(Sonali Bendre) ನಟಿ ಜೊತೆಗೆ ಬರಹಗಾರ್ತಿ ಕೂಡ ಹೌದು, ಫಿಲಂ ಮೇಕರ್ ಗೋಲ್ಡಿ ಬೆಹ್ಲ್ ಅವರನ್ನು ವಿವಾಹವಾಗಿದ್ದಾರೆ. ಸೋನಾಲಿಗೆ ಒಂದು ಮಗುವಿದೆ. 1994ರಿಂದ ಸಿನಿಮಾ ಕೆರಿಯರ್ ಶುರು ಮಾಡಿದ ಸೋನಾಲಿ, ಕನ್ನಡ, ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. 2013ರಿಂದ ಚಿತ್ರರಂಗದಿಂದ ಬ್ರೇಕ್ ಪಡೆದ ನಟಿ ‘ಲವ್ ಯೂ ಹಮೇಶ’ ಸಿನಿಮಾ ಮೂಲಕ ಬಿಟೌನ್ಗೆ ಕಂ ಬ್ಯಾಕ್ ಮಾಡಿದ್ದಾರೆ. ‘ಆಗ್’, ‘ಡರ್’, ‘ಡ್ಯೂಪ್ಲಿಕೇಟ್’, ‘ಮನ್ಮದುಡು’, ‘ಪ್ರೀತ್ಸೆ’ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.