Tamannah Bhatia: ಸೌತ್ ಮಿಲ್ಕಿ ಬ್ಯೂಟಿ ತಮ್ಮನ್ನಾ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಒಡೆಲಾ-2’(Odela2) ಮುಹೂರ್ತ ಆಚರಿಸಿಕೊಂಡು ಶೂಟಿಂಗ್ ಅಂಗಳದಲ್ಲಿ ಬ್ಯುಸಿಯಾಗಿರುವ ಸಿನಿಮಾ ತಂಡವೀಗ ತಮನ್ನಾ(Tamannah Bhatia) ಕ್ಯಾರೆಕ್ಟರ್ ವಿಡೀಯೋ ಬಿಡುಗಡೆ ಮಾಡಿದೆ. ಚಿತ್ರಕ್ಕಾಗಿ ತಮನ್ನಾ ಎತ್ತಿರುವ ನಯಾ ಅವತಾರ ಕಂಡು ಅಭಿಮಾನಿಗಳು, ಸಿನಿಮಂದಿ ಸಖತ್ ಥ್ರಿಲ್ ಆಗಿದ್ದಾರೆ.
ತಮನ್ನಾ ಭಾಟಿಯಾ(Tamannah Bhatia) ‘ಒಡೆಲಾ-2’(Odela2) ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದು, ಚಿತ್ರೀಕರಣ ಒಡೆಲಾ ಹಳ್ಳಿಯಲ್ಲಿ ಬಿಡುವಿಲ್ಲದೆ ನಡೆಯುತ್ತಿದೆ. ಚಿತ್ರಕ್ಕಾಗಿ ದುಬಾರಿ ವೆಚ್ಚದಲ್ಲಿ ಬೃಹತ್ ಸೆಟ್ ನಿರ್ಮಾಣ ಕೂಡ ಮಾಡಲಾಗಿದೆ. ತಮನ್ನಾ ತಮ್ಮ ಸಿನಿ ಕೆರಿಯರ್‌ನಲ್ಲೇ ವಿಶೇಷ ಪಾತ್ರ, ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಇದಾಗಿದೆ. ಮಿಲ್ಕಿ ಬ್ಯೂಟಿ ಪಾತ್ರದ ಪರಕಾಯ ಪ್ರವೇಶ ಮಾಡುತ್ತಿರುವ ವೀಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿ ಥ್ರಿಲ್ ನೀಡಿದೆ. ಬೋಲ್ಡ್ ಆಗಿ ಸೊಂಟ ಬಳುಕಿಸುತ್ತಿದ್ದ ಮಿಲ್ಕಿ ಬ್ಯೂಟಿ ‘ಶಿವ ಶಕ್ತಿ’ಯಾಗಿ ಅವತಾರ ತಾಳುತ್ತಿರುವ ಈ ವೀಡಿಯೋ ತುಣುಕು ನೋಡಿದ ಎಂತವರಿಗಾದರೂ ಥ್ರಿಲ್ ಆಗಲಿದೆ.
ʼಶಿವ ಶಕ್ತಿ ಕ್ಯಾರೆಕ್ಟರ್ ಪರಿಚಯಿಸುವ ಈ ವೀಡಿಯೋ ಸಖತ್ ವೀವ್ಸ್ ಜೊತೆಗೆ ವೈರಲ್ ಕೂಡ ಆಗ್ತಿದೆ. ತಮ್ಮನ್ನಾ(Tamannah Bhatia) ಈ ಹಿಂದೆ ಕಾಣಸಿಗದ ಡಿವೋಶನಲ್ ರೋಲ್‌ನಲ್ಲಿ ನಟಿಸುತ್ತಿದ್ದು, ಶಿವ ಶಕ್ತಿ ಪಾತ್ರದಲ್ಲಿ ಅವರ ಲುಕ್, ಗೆಟಪ್ ಎಲ್ಲರನ್ನೂ ಬೆರಗುಗೊಳಿಸಿದೆ. ಇದು ಮಿಲ್ಕಿ ಬ್ಯೂಟಿನಾ ಅನ್ನುವಷ್ಟು ಪಾತ್ರದ ಆಳಕ್ಕೆ ಇಳಿದಿದ್ದಾರೆ. ಡಿ.ಮಧು ನಿರ್ಮಾಣದಲ್ಲಿ ಮೂಡಿ ಬರ್ತಿರುವ ಈ ಚಿತ್ರ ‘ಒಡೆಲಾ ರೈಲ್ವೇ ಸ್ಟೇಷನ್’ ಸೀಕ್ವೆಲ್ ಆಗಿದೆ. ಅಶೋಕ್ ತೇಜ(Ashok Teja) ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡಿಗ ವಸಿಷ್ಠ ಸಿಂಹ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಜನೀಶ್ ಲೋಕನಾಥ್(Ajaneesh Loknath) ಸಂಗೀತ ಚಿತ್ರಕ್ಕಿದೆ.