Tamannah Bhatia: ‘ಜೈಲರ್’ ಸಿನಿಮಾ ‘ಕಾವಲಯ್ಯ’ ಹಾಡಿಗೆ ಬೆಲ್ಲಿ ಕುಣಿಸಿ, ಪಡ್ಡೆ ಹುಡುಗರ ನಿದ್ದೆ ಕದ್ದ ಮಿಲ್ಕಿ ಬ್ಯೂಟಿಗೆ ಬೆಳ್ಳಂಬೆಳಿಗ್ಗೆ ಬ್ಯಾಡ್ ನ್ಯೂಸ್ ಬಂದಿದೆ. ಮಹಾರಾಷ್ಟ್ರ ಸೈಬರ್ ಸೆಲ್ ಸಮನ್ಸ್ ನೀಡಿದೆ. ವಿಚಾರಣೆಗೆ ಬರುವಂತೆ ಬುಲಾವ್ ನೀಡಿದೆ. ಸದ್ಯ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಮಿಲ್ಕಿ ಬ್ಯೂಟಿ ಏನ್ ಮಾಡಿದ್ಲಪ್ಪ ಅಂತ ಗೂಗಲ್ ಮಾಡ್ತಿದ್ದಾರೆ.
ಇದಕ್ಕೆಲ್ಲಾ ಕಾರಣ ಐಪಿಎಲ್.. ಹೌದು, ತಮನ್ನಾ ಭಾಟಿಯಾ(Tamannah Bhatia) ಐಪಿಎಲ್ ಫೈರ್ ಪ್ಲೇ ಆಪ್ ನಲ್ಲಿ ಕಾನೂನು ಬಾಹಿರವಾಗಿ ಐಪಿಎಲ್ 2023ರ ಆಟವನ್ನು ನೇರ ಪ್ರಸಾರವನ್ನು ಮಾಡಿದ್ದರಂತೆ. ಇದರಿಂದ ದೈತ್ಯ ವೈಯಕಾಂ ಸಂಸ್ಥೆಗೆ ಕೋಟಿ ಕೋಟಿ ಲಾಸ್ ಆಗಿದೆ. ಆದ್ರಿಂದ ತಮನ್ನಾ ಭಾಟಿಯಾ ವಿರುದ್ದ ವಯಾಕಾಂ ಸಂಸ್ಥೆ ಸೈಬರ್ ಕ್ರೈಂನಲ್ಲಿ ದೂರು ದಾಖಲು ಮಾಡಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಿಲ್ಕಿ ಬ್ಯೂಟಿಗೆ ಸಮನ್ಸ್ ನೀಡಲಾಗಿದೆ. ಏಪ್ರಿಲ್ 29ರಂದು ವಿಚಾರಣೆಗೆ ಹಾಜರಾಗಲು ತಿಳಿಸಿದೆ. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಟ ಸಂಜಯ್ ದತ್ತ್(Sanjay Dutt)ಗೂ ಕೂಡ ಸಮನ್ಸ್ ನೀಡಲಾಗಿತ್ತು. ಏಪ್ರಿಲ್ 23ಕ್ಕೆ ವಿಚಾರಣೆಗೆ ಹಾಜರಾಗಬೇಕಿತ್ತು. ವಿದೇಶದಲ್ಲಿರುವ ಕಾರಣ ಸಂಜು ಬಾಬಾ ವಿಚಾರಣೆಗೆ ಹಾಜರಾಗಿಲ್ಲ. ಕಳೆದ ವರ್ಷ ವೈಯಕಾಂ ಸಂಸ್ಥೆ ಫೈರ್ ಪ್ಲೇ ಆಪ್‌ನಿಂದ ತಮಗಾಗುತ್ತಿರುವ ನಷ್ಟದ ಬಗ್ಗೆ ಧಾವೇ ಹೂಡಿತ್ತು. ಕಾನೂನು ಬಾಹಿರವಾಗಿ ಐಪಿಎಲ್ ಕ್ರಿಕೆಟ್ ಆಟವನ್ನು ನೇರ ಪ್ರಸಾರ ಮಾಡುತ್ತಿದ್ದು ಸುಮಾರು 100 ಕೋಟಿ ಲಾಸ್ ಆಗಿರುವ ಬಗ್ಗೆ ಕಂಪ್ಲೆಂಟ್ ಲಾಡ್ಜ್ ಮಾಡಿತ್ತು. ಜೊತೆಗೆ ಇದರ ರಾಯಭಾರಿಯಾಗಿರುವ ತಮನ್ನ(Tamannah Bhatia), ರ್ಯಾಪರ್ ಬಾದ್‌ಷಾ, ಜಾಕ್ವೆಲಿನ್ ಫರ್ನಾಡಿಸ್, ಸಂಜಯ್ ದತ್ ಸೇರಿದಂತೆ ಹಲವು ನಟ-ನಟಿಯರ ಮೇಲೆ ಸೈಬರ್ ಕ್ರೈಂನಲ್ಲಿ ದೂರು ನೀಡಿತ್ತು. ಈ ದೂರಿನ ನಿಮಿತ್ತ ಫೈರ್ ಪ್ಲೇ ಉದ್ಯೋಗಿಯನ್ನು ಕಳೆ ವರ್ಷ ಬಂಧಿಸಲಾಗಿದೆ.