ಸೌತ್ ಸುಂದರಿ ಸಮಂತಾ ಸ್ನಾಯುಸೆಳೆತದಿಂದ, ಕೈ ಕಾಲು ಉರಿ ಹೊಡೆತದಿಂದ ಬಳಲಿ ನಿಧಾನವಾಗಿ ಚೇತರಿಸಿಕೊಳ್ತಿದ್ದಾರೆ. ಈ ಮಧ್ಯೆ ರಣವಿಕ್ರಮನ ರಾಣಿ ಆದಾಶಮಾ ಚರ್ಮದ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ಪೋಸ್ಟ್ ಹಾಕಿದ್ದಾರೆ. ಕೈ ಮೈಯೆಲ್ಲಾ ಕೆಂಪಾಗಿ, ಬೊಬ್ಬೆ ಬಂದಿರುವುದನ್ನ ನೋಡಿ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಅಷ್ಟಕ್ಕೂ, ಇದೇನು ಗಂಭೀರವಾದ ಚರ್ಮದ ಖಾಯಿಲೆ ಅಲ್ಲವಾದರೂ ಕಿರಿಕಿರಿ ಮಾತ್ರ ಭಯಾನಕವಾಗಿರುತ್ತೆ. ಹೀಗಾಗಿ, ನಟಿ ಆದಾಶರ್ಮಾ ಆಯುವೇರ್ದಿಕ್ ಟ್ರೀಟ್‍ಮೆಂಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ ಆದಷ್ಟು ಬೇಗ ಚಿಕಿತ್ಸೆ ಪಡೆದು ಗುಣಮುಖರಾಗುವುದಾಗಿ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ.
ಅಷ್ಟಕ್ಕೂ, ನಟಿ ಆದಾಶರ್ಮಾಗೆ ಕಾಣಿಸಿಕೊಂಡಿರುವುದು ಉರ್ಟೇರಿಯಾ ಎಂಬ ಚರ್ಮದ ಸಮಸ್ಯೆ. ಇದನ್ನ ಜೇನುಗೂಡು ಸಮಸ್ಯೆ ಎಂದು ಕೂಡ ಕರೆಯುತ್ತಾರೆ. ಇದು ಚರ್ಮದ ಮೇಲೆ ಊದಿಕೊಂಡ ಕೆಂಪು ಅಥವಾ ಚರ್ಮದ ಬಣ್ಣದ ಉಬ್ಬುಗಳು ಕಾಣಿಸಿಕೊಳ್ಳುತ್ತವೆ. ತುರಿಕೆಯಿಂದ ಪ್ರಾರಂಭವಾಗಿ ಸುಡುವುದು ಹಾಗೂ ಚರ್ಮದ ಹಾನಿಗೆ ಕಾರಣವಾಗಬಹುದು. ಸಾಮಾನ್ಯವಾಗಿ ಇದು ಕೈಗಳು, ಮುಖ, ತುಟಿ, ಕಿವಿಗಳು, ಗಂಟಲು ಅಥವಾ ನಾಲಿಗೆ ಸೇರಿದಂತೆ ದೇಹದ ಯಾವ ಭಾಗದಲ್ಲಾದರೂ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ತನ್ನಿಂದ ತಾನೇ ಕಣ್ಮರೆಯಾದರೆ, ಕೆಲವೊಮ್ಮೆ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಮಳೆಗಾಲದ ಸಮಯವಾದ್ದರಿಂದ ಇಂತಹ ಚರ್ಮಕ್ಕೆ ಸಂಬಂಧಪಟ್ಟ ಕಾಯಿಲೆಗಳು ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ಕೈ ಕಾಲು ಮುಖಗಳಲ್ಲಿ ಅತಿಯಾದ ತುರಿಕೆಯ ಅನುಭವವಾದರೆ ಆದಷ್ಟು ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಎಂದು ತಜ್ಞರು ಎಚ್ಚರಿಸುತ್ತಾರೆ.
ನಟಿ ಆದಾಶರ್ಮಾ ಕನ್ನಡದಲ್ಲಿ ಅಪ್ಪು ಜೊತೆ ರಣವಿಕ್ರಮ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಹಿಂದಿ, ತೆಲುಗು ಸಿನಿಮಾರಂಗದಲ್ಲಿ ಸಕ್ರಿಯವಾಗಿರುವ ಆದಾ,`ದಿ ಕೇರಳ ಸ್ಟೋರಿ’ ಮೂಲಕ ಜನಪ್ರಿಯತೆ ಗಳಿಸಿದ್ದರು. ಈಗ ಸಾಲು ಸಾಲು ಅವಕಾಶಗಳು ಆದಾರನ್ನ ಅರಸಿಕೊಂಡು ಬರುತ್ತಿದ್ದು, ಸದ್ಯ ‘ಕಮಾಂಡೋ’ ಸರಣಿ ಬಿಡುಗಡೆಗೆ ಸಿದ್ಧವಾಗಿದೆ. ಇದರ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಪ್ರಮೋಷನ್ ಟೈಮ್‍ನಲ್ಲಿ ಸ್ಟೇಜ್ ಮೇಲೆ ಕುಸಿದು ಬಿದ್ದು ಆಸ್ಪತ್ರೆ ಸೇರಿದ್ದರು.