ಸ್ಯಾಂಡಲ್ವುಡ್ ಅಂಗಳದಲ್ಲಿ ಶ್ಯಾನೆ ಟಾಪಾಗಿರೋ ಚೆಲುವೆ ಅಂತಾನೇ ಫೇಮಸ್ ಆಗಿರೋ ನಟಿ ಅದಿತಿ ಪ್ರಭುದೇವ ಅಮ್ಮನಾಗ್ತಿರುವ ವಿಚಾರ ನಿಮಗೆ ಗೊತ್ತೆಯಿದೆ. ಚೊಚ್ಚಲ ಕಂದಮ್ಮನ ನಿರೀಕ್ಷೆಯಲ್ಲಿರೋ ಬೆಣ್ಣೆನಗರಿಯ ಬೆಡಗಿಗೆ ಅದ್ದೂರಿಯಾಗಿ ಸೀಮಂತಶಾಸ್ತ್ರ ನೆರವೇರಿಸಿದ್ದಾರೆ. ಹಸಿರು ಹಾಗೂ ಕೆಂಪು ಮಿಶ್ರಿತ ಸೀರೆಯುಲ್ಲಿ ಅದಿತಿ ಮಿಂಚಿದರೆ, ಅವರ ಪತಿ ಯಶಸ್ ಪಾಟ್ಲಾ ವೈಟ್ ಶೇರ್ವಾನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಫೋಟೋಗಳನ್ನ ನಟಿ ಅದಿತಿ ಹಂಚಿಕೊಂಡಿದ್ದು, ಅಭಿಮಾನಿಗಳು ಸೇರಿದಂತೆ ಸೆಲೆಬ್ರಿಟಿಗಳು ಕೂಡ ಈ ಮುದ್ದಾದ ಜೋಡಿಗೆ ಶುಭಹಾರೈಸ್ತಿದ್ದಾರೆ.
ಕಳೆದ ವರ್ಷ ನವೆಂಬರ್ 28ರಂದು ಅದಿತಿ ಹಾಗೂ ಯಶಸ್ ಜೋಡಿಯಾದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಇವರಿಬ್ಬರ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಅದಿತಿ ಮದುವೆಗೆ ಯಶ್ ಮತ್ತು ರಾಧಿಕಾ ದಂಪತಿ ಸೇರಿದಂತೆ ಹಲವು ಕಲಾವಿದರು ಭಾಗಿಯಾಗಿ ಹೊಸ ಜೋಡಿಗೆ ಶುಭಕೋರಿದ್ದರು. ಈ ವರ್ಷದ ಆರಂಭದಲ್ಲಿ ನಟಿ ತಾವು ತಾಯಿಯಾಗುತ್ತಿರುವ ಸಿಹಿಸುದ್ದಿ ಹಂಚಿಕೊಂಡಿದ್ದರು. ʻಸಂಬಂಧಗಳಲ್ಲಿ ಶ್ರೇಷ್ಠವಾದದ್ದು , ಹುಟ್ಟಿದಾಗಿನಿಂದ ಸಾಯುವವರೆಗೂ ಪ್ರತಿಯೊಂದು ನೋವು ನಲಿವಿನಲ್ಲೂ ನಮ್ಮ ಬಾಯಿಂದ ಬರುವ ಏಕೈಕ ಪದ “ಅಮ್ಮ”. ಜೀವನದಲ್ಲಿ ಪ್ರತಿಯೊಬ್ಬರೂ ಪ್ರೀತಿಯಿಂದ ಗೌರವದಿಂದ ಕಾಣುವ ಸಂಬಂಧ “ಅಮ್ಮ”. ಪ್ರತಿಕ್ಷಣ ನಮಗಾಗಿ ಮಿಡಿಯುವ ಜೀವ “ಅಮ್ಮ” . 2024 ಕ್ಕೆ ನಾನು ” ಅಮ್ಮ” ಈ ರೀತಿ ತಮ್ಮ ಸೋಷಿಯಲ್ ಪುಟದಲ್ಲಿ ಬರೆಯುವ ಮೂಲಕ ಸಂತಸದ ವಿಚಾರವನ್ನ ಶೇರ್ ಮಾಡಿಕೊಂಡಿದ್ದರು. ಇದೀಗ ಅದ್ದೂರಿಯಾಗಿ ಸೀಮಂತ ಶಾಸ್ತ್ರ ನೆರವೇರಿಸಿಕೊಂಡು ಆ ಫೋಟೋಗಳನ್ನ ತಮ್ಮ ಅಭಿಮಾನಿಗಳ ಮುಂದೆ ಹರವಿಟ್ಟಿದ್ದಾರೆ.
ಅದಿತಿಯ ಮೂಲ ದಾವಣಗೆರೆ ಅಲ್ಲಿಂದ ಬಣ್ಣದ ಲೋಕದ ಕನಸೊತ್ತು ಬೆಂಗಳೂರಿಗೆ ಬಂದವರು. ಆರಂಭದಲ್ಲಿ ಕಿರುತೆರೆಗೆ ಎಂಟ್ರಿಕೊಟ್ಟು ಕರುನಾಡಿನ ತುಂಬೆಲ್ಲಾ ಮನೆಮಾತಾದ ಈ ಚೆಲುವೆ, ಧೈರ್ಯಂ ಸಿನಿಮಾದ ಮೂಲಕ ಬಿಗ್ ಸ್ಕ್ರೀನ್ಗೆ ಗ್ರ್ಯಾಂಡ್ ಎಂಟ್ರಿಕೊಟ್ಟರು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನ ಮಾಡಿ ಸ್ಯಾಂಡಲ್ವುಡ್ ಅಂಗಳದಲ್ಲಿ ಶೈನ್ ಆದ ಬೆಣ್ಣೆನಗರಿಯ ಈ ಬೊಂಬೆ, ಕರಿಯರ್ ಉತ್ತುಂಗದಲ್ಲಿರುವಾಗಲೇ ವೈಯಕ್ತಿಕ ಬದುಕಿನ ಕಡೆಗೂ ಗಮನ ಹರಿಸಿದರು. ಕುಟುಂಬಸ್ಥರು ತೋರಿಸಿದ ಹುಡುಗನ ಜೊತೆಗೆ ಹಸೆಮಣೆ ಏರಿದರು. ಒಟ್ನಲ್ಲಿ ಪರ್ಸನಲ್ ಲೈಫ್ ಅಂಡ್ ಪ್ರೊಫೆಷನ್ ಲೈಫ್ನ ಬ್ಯಾಲೆನ್ಸ್ ಮಾಡಿದ ಅದಿತಿ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ದಿಲ್ಮಾರ್, 5ಡಿ, ಅಂದೊಂದಿತ್ತು ಕಾಲ, ಮಾಫಿಯಾ, ಮ್ಯಾಟ್ನಿ, ಛೂ ಮಂತರ್, ಅಲೆಕ್ಸಾ ಚಿತ್ರಗಳಲ್ಲಿ ಬಜಾರ್ ಹುಡುಗಿ ಬ್ಯಾಂಗ್ ಮಾಡಿದ್ದಾರೆ. ಬಹುಷಃ ಆ ಎಲ್ಲಾ ಸಿನಿಮಾಗಳು ಈ ವರ್ಷ ಒಂದರ ನಂತರ ಒಂದು ತೆರೆಗೆ ಬರುವ ಸಾಧ್ಯತೆಯಿದೆ.