ಭಾನುವಾರ, ಜುಲೈ 6, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಅರ್ಧ ಶತಕ ಬಾರಿಸಿದ ‘ಅಗ್ರಸೇನಾ’; 50 ದಿನಗಳನ್ನು ಫೂರೈಸಿದ ಖುಷಿಯಲ್ಲಿ ಚಿತ್ರತಂಡ!

Vishalakshi Pby Vishalakshi P
22/08/2023
in Majja Special
Reading Time: 1 min read
ಅರ್ಧ ಶತಕ ಬಾರಿಸಿದ ‘ಅಗ್ರಸೇನಾ’; 50 ದಿನಗಳನ್ನು ಫೂರೈಸಿದ ಖುಷಿಯಲ್ಲಿ ಚಿತ್ರತಂಡ!

ಇತ್ತೀಚಿನ ದಿನಗಳಲ್ಲಿ ಕನ್ನಡದ ಒಂದಷ್ಟು ಚಿತ್ರಗಳು ಯಶಸ್ವೀ ಪ್ರದರ್ಶನ‌ ಕಾಣುತ್ತಿವೆ. ಇತ್ತೀಚೆಗೆ ಮುಸ್ತಫಾ ೫೦ ದಿನ ಕಂಡಿತ್ತು. ನಂತರ ಇದೀಗ ಅಗ್ರಸೇನಾ ಚಲನಚಿತ್ರವು ಐವತ್ತು ದಿನಗಳನ್ನು ಪೂರೈಸಿ ಮುನ್ನಡೆದಿದೆ‌. ವೈಷ್ಣವಿ ಮೂವೀಸ್ ಲಾಂಛನದಲ್ಲಿ ಶ್ರೀಮತಿ ಮಮತಾ ಜಯರಾಮರೆಡ್ಡಿ ಅವರು ನಿರ್ಮಿಸಿರುವ ಈ ಚಿತ್ರದ ಐವತ್ತು ದಿನಗಳ ಸಂಭ್ರಮ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಈ ಸಂದರ್ಭದಲ್ಲಿ ನಿರ್ಮಾಪಕ ಜಯರಾಮರೆಡ್ಡಿ, ಮಮತಾ ಜಯರಾಮರೆಡ್ಡಿ, ಚಿತ್ರದ ನಾಯಕ ಅಗಸ್ತ್ಯ ಬೆಳಗೆರೆ, ಮನಮೋಹನ ರೈ, ರಂಜಿತ್, ಶಶಿಧರ ಗೌಡ,ಮೀನಾಕ್ಷಿ, ಮುಂತಾದವರು ಮಾತನಾಡಿ ಯಶಸ್ಸಿನ ಸಂತಸವನ್ನು ಹಂಚಿಕೊಂಡರು.

ನಿರ್ಮಾಕ ಜಯರಾಮರೆಡ್ಡಿ ಮಾತನಾಡಿ ಇವತ್ತಿನ ಸಂತಸಕ್ಕೆ ಕಾರಣರಾದ ಕನ್ನಡ ಪ್ರೇಕ್ಷಕರಿಗೆ ನನ್ನ ಧನ್ಯವಾದಗಳನ್ನು ತಿಳಿಸುತ್ತೇನೆ. ಪರದೆಯ ಹಿಂದೆ ಮುಂದೆ ದುಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ. ಚಿತ್ರದ ಮೇನ್ ವಿಲನ್ ಮನಮೋಹನ್ ರೈ ಅವರ ಅಭಿನಯ ನಿಜಕ್ಕೂ ಅದ್ಭುತ.ಲವರ್ ಬಾಯ್ ಆಗಿ ಅಮರ್, ದಸರಾಬೊಂಬೆ ರಚನಾ ದಶರಥ್ ಅವರ ಅದ್ಭುತ ಅಭಿನಯ ಜೊತೆಗೆ ನಮ್ಮ ಸಿನಿಮಾದ ಜೀವಾಳ ಎನಿಸಿಕೊಂಡಿರುವ ಸಂಗೀತ ನಿರ್ದೇಶಕ ತ್ಯಾಗರಾಜ್ ಅವರ ಕೆಲಸ ಚಿತ್ರದ ಗೆಲುವಿಗೆ ಕಾರಣವಾಗಿದೆ. ಚಿತ್ರದ ಮತ್ತೊಂದು ಹೈಲೈಟ್ ಕೃಷ್ಣಮೂರ್ತಿ ಬೆಳಗೆರೆ ಅವರ ಅದ್ಭುತ ಅಭಿನಯ ಎಂದು ಹೇಳಿದರು.

ನಂತರ ಮಾತನಾಡಿದ ನಿರ್ಮಾಪಕಿ ಮಮತಾ ಜಯರಾಮ ರೆಡ್ಡಿ, ನಮ್ಮ ಸಿನಿಮಾ ಯಶಸ್ಸು ಕಂಡಿದೆ. ಈ ವರ್ಷ ಬಿಡುಗಡೆಯಾದ ೧೫೦ ಸಿನಿಮಾಗಳಲ್ಲಿ ಹೊಸಬರ ಪ್ರಯತ್ನದ ಫಲವಾದ ನಮ್ಮ ಸಿನಿಮಾ ಐವತ್ತು ದಿನದ ಗೆಲುವನ್ನು ಕಂಡಿದೆ ಎಂದರು. ನಟ ಅಗಸ್ತ್ಯ ಬೆಳಗೆರೆ ಮಾತನಾಡಿ, ನಮ್ಮ ಚಿತ್ರ ಜೂನ್ ೨೩ಕ್ಕೆ ಬಿಡುಗಡೆಯಾಗಿತ್ತು. ಚಿತ್ರದ ಯಶಸ್ಸಿಗೆ ಪ್ರತಿಯೊಬ್ಬರೂ ನೀಡಿದ ಸಹಕಾರವೇ ಕಾರಣ, ನಾಲ್ಕು ವರ್ಷ ತಪಸ್ಸು ಮಾಡಿ ಈ ಸಿನಿಮಾ ಮಾಡಿದ್ದೇನೆ.ಸಂಗೀತ‌ ನಿರ್ದೇಶಕ, ಛಾಯಾಗ್ರಾಹಕ ಸೇರಿದಂತೆ ಪ್ರತಿಯೊಬ್ಬರ ಶ್ರಮ ಚಿತ್ರದ ಗೆಲುವಿಗೆ ಕಾರಣವಾಗಿದೆ. ನಿರ್ಮಾಪಕರು ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿದ್ದಾರೆ. ನಮ್ಮನ್ನೆಲ್ಲ ಇಲ್ಲಿವರೆಗೆ ಕರೆದುಕೊಂಡು ಬಂದಿದ್ದಾರೆ ಎಂದು ಹೇಳಿದರು . ಕಾರಣಾಂತರಗಳಿಂದ ನಾಯಕ ಅಮರ್ ವಿರಾಜ್ ಬಂದಿರಲಿಲ್ಲ. ಅನಾರೋಗ್ಯದ ಕಾರಣ ನಿರ್ದೇಶಕ ಮುರುಗೇಶ್ ಕಣ್ಣಪ್ಪ ಕೂಡ ಬಂದಿರಲಿಲ್ಲ, ಆದರೆ ಅವರು ವಿಡಿಯೋ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು. ವೇದಿಕೆಮೇಲೆ ಚಿತ್ರದಲ್ಲಿ ದುಡಿದ ಕಲಾವಿದ, ತಂತ್ರಜ್ಞರಿಗೆ ಸ್ಮರಣ ಫಲಕಗಳನ್ನು ವಿತರಿಸಲಾಯಿತು.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
`ಕಿಚ್ಚ-46′ ಸಿನಿಮಾದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ; ವೈರಲ್ ಆಯ್ತು ಸ್ಟಾರ್ ಕಾಸ್ಟ್ ಫೋಟೋ!

`ಕಿಚ್ಚ-46' ಸಿನಿಮಾದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ; ವೈರಲ್ ಆಯ್ತು ಸ್ಟಾರ್ ಕಾಸ್ಟ್ ಫೋಟೋ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.