ಬಹುತೇಕ ಹೊಸಬರೇ ಸೇರಿಕೊಂಡು ನಿರ್ಮಿಸಿರುವ ‘ಅಕ್ಷರಾ’ ಎಂಬ ಸಿನಿಮಾವೊಂದು ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ ಸದ್ದಿಲ್ಲದೇ ಸಿನಿಮಾದ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿದೆ.
ನಟ ಪ್ರತಾಪ್ ನಾರಾಯಣ್ ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆೆ ಶುಭಕೋರಿದರು. ಭುವನ್ ಚಂದ್ರ ನಾಯಕರಾಗಿರುವ ಈ ಚಿತ್ರವನ್ನು ಕಿಶೋರ್ ಕುಮಾರ್ ನಿರ್ಮಿಸಿದ್ದಾರೆ. ಎಸ್. ನರೇಂದ್ರ ಬಾಬು ಚಿತ್ರದ ನಿರ್ದೇಶಕರು. ಚಿತ್ರದ ಬಗ್ಗೆೆ ಮಾತನಾಡುವ ಭುವನ್ ಚಂದ್ರ, ‘ನಾನು ಕೋವಿಡ್ ಗೂ ಮುನ್ನ ‘ಕಿಡಿ’ ಎಂಬ ಸಿನಿಮಾದ ಮೂಲಕ ಹೀರೋ ಆಗಿಲಾಂಚ್ ಆಗಿದ್ದೆ. ಅದಾದ ಮೇಲೆ ಒಳ್ಳೆೆಯ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾಗ ‘ಅಕ್ಷರಾ’ ಸಿನಿಮಾ ಸಿಕ್ಕಿತು.
ಇದೊಂದು ನೈಜ ಘಟನೆಯನ್ನೇ ಇಟ್ಟುಕೊಂಡು ಮಾಡಿರುವಂತ ಸಿನಿಮಾ. ನರಬಲಿ ಎಂಬುದು ಈಗಲೂ ನಡೆಯುತ್ತಿದೆ. ಇದೇ ವಿಷಯವನ್ನು ಸಿನಿಮಾದಲ್ಲಿ ಹೇಳಿದ್ದೇವೆ. ನೋಡುಗರಿಗೆ ಇಷ್ಟವಾಗುವಂತೆ ಸಿನಿಮಾ ಮಾಡಿದ್ದೇವೆ’ ಎಂದರು. ನಿರ್ಮಾಪಕ ಕಿಶೋರ್ ಕುಮಾರ್ ತಮ್ಮ ಸಿನಿಮಾ ಕನಸಿನ ಬಗ್ಗೆೆ ಮಾತನಾಡಿದರು. ಭುವನ್ ಚಂದ್ರಗೆ ನಾಯಕಿಯಾಗಿ ಅಲ್ಮಾಸ್ ಮೋಟಿವಾಲ ನಟಿಸಿದ್ದು, ಉಳಿದಂತೆ ರಮೇಶ್ ಪಂಡಿತ್, ಭಜರಂಗಿ ಪ್ರಸನ್ನ, ರಾಜ್ ಉದಯ್, ಕಿಶೋರ್ ಕುಮಾರ್ ತಾರಾಬಳಗದಲ್ಲಿದ್ದಾರೆ. ಸದ್ಯ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ, ಮುಂದಿನ ನವೆಂಬರ್ ಹೊತ್ತಿಗೆ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆ ಹಾಕಿಕೊಂಡಿದೆ.