Kannappa: ಟಾಲಿವುಡ್‌ನಲ್ಲೀಗ ಒಂದಾದ ಮೇಲೆ ಒಂದು ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಸಿನಿಮಾಗಳು ಸೌಂಡ್ ಮಾಡ್ತಿವೆ. ಟಾಲಿವುಡ್ ಸಿನಿಪ್ರಿಯರ ಕ್ರೇಜ಼್ ಹೆಚ್ಚಿಸಿರುವ ಸಿನಿಮಾಗಳ ಸಾಲಲ್ಲಿ ವಿಷ್ಣುಮಂಚು(Vishnu Manchu) ಅಭಿನಯದ ‘ಕಣ್ಣಪ್ಪ’ (Kannappa) ಸಿನಿಮಾ ಕೂಡ ಮುಂಚೂಣಿಯಲ್ಲಿದೆ.
ಸೌತ್ ಸಿನಿ ದಿಗ್ಗಜರ ಸಮಾಗಮ ಚಿತ್ರದಲ್ಲಿರಲಿದೆ ಅನ್ನೋದು ಈ ಚಿತ್ರದ ಹೈಪ್‌ಗೆ ಇರುವ ಮತ್ತೊಂದು ಕಾರಣ. ಮೋಹನ್ ಲಾಲ್, ಮೋಹನ್ ಬಾಬು, ಪ್ರಭಾಸ್(Prabhas), ಶರತ್ ಕುಮಾರ್ ಒಳಗೊಂಡಂತೆ ಬಿಟೌನ್ ಸ್ಟಾರ್ ನಟ ಅಕ್ಷಯ್ ಕುಮಾರ್(Akshay Kumar) ಕೂಡ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಲೇಟೆಸ್ಟ್ ಮಾಹಿತಿ ಪ್ರಕಾರ ಕಣ್ಣಪ್ಪ(Kannappa) ಚಿತ್ರೀಕರಣದಲ್ಲಿ ಭಾಗಿಯಾಗಲು ಅಕ್ಕಿ ಹೈದ್ರಾಬಾದ್‌ಗೆ ಬಂದಿಳಿದಿದ್ದಾರೆ. ಈ ಮೂಲಕ ಮೊದಲ ತೆಲುಗು ಚಿತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.
ನಟ ವಿಷ್ಣುಮಂಚು(Vishnu Manchu) ಭೇಟಿಯಾಗಿ ಅಕ್ಕಿ ಮಾತುಕತೆ ನಡೆಸಿದ್ದಾರೆ. ‘ಕಣ್ಣಪ್ಪ’ ಸಿನಿಮಾದಲ್ಲಿ ಅಕ್ಷಯ್(Akshay Kumar) ಶಿವನ ಪಾತ್ರಕ್ಕೆ ಬಣ್ಣ ಹಚ್ಚುತ್ತಾರೆ ಎಂಬ ವದಂತಿ ಟಾಲಿವುಡ್‌ನಲ್ಲಿ ಕೇಳಿ ಬರ್ತಿದೆ. ಈ ಮೊದಲು ಪ್ರಭಾಸ್ ಶಿವನ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿತ್ತು. ಇದೀಗ ಒಂದಿಷ್ಟು ಬದಲಾವಣೆ ಮಾಡಲು ಚಿತ್ರತಂಡ ಚಿಂತಿಸಿದ್ದು ಶಿವನ ಪಾತ್ರಕ್ಕೆ ಅಕ್ಷಯ್ ಬಣ್ಣ ಹಚ್ಚುತ್ತಾರೆ ಎನ್ನಲಾಗ್ತಿದೆ. ಆದ್ರೆ ಚಿತ್ರತಂಡ ಇದ್ಯಾವುದರ ಬಗ್ಗೆಯೂ ಸ್ಪಷ್ಟನೆ ನೀಡಿಲ್ಲ.
ಫ್ಯಾಂಟಸಿ ಡ್ರಾಮಾ ಸಬ್ಜೆಕ್ಟ್ ಒಳಗೊಂಡ ‘ಕಣ್ಣಪ್ಪ'(Kannappa) ಸಿನಿಮಾ ಸೆಟ್ಟೇರಿದ ದಿನದಿಂದ ಸಖತ್ ಬಝ್ ನಲ್ಲಿದೆ. ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದಲ್ಲಿ ಬರ್ತಿರೋ ಚಿತ್ರದಲ್ಲಿ ‘ಕಣ್ಣಪ್ಪ’ನಾಗಿ ವಿಷ್ಟು ಮಂಚು(Vishnu Manchu) ನಟಿಸುತ್ತಿದ್ದಾರೆ. ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗ್ತಿರೋ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ವಿಷ್ಣು ಮಂಚು ಡ್ರೀಮ್ ಪ್ರಾಜೆಕ್ಟ್ ಇದಾಗಿದ್ದು ಕಣ್ಣಪ್ಪ ಪಾತ್ರಕ್ಕಾಗಿ ಸಖತ್ ಹಾರ್ಡ್ ವರ್ಕ್ ಮಾಡುತ್ತಿದ್ದಾರೆ.