Akshay Kumar: ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್(Akshay Kumar) ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಬಡೇ ಮಿಯಾನ್ ಚೋಟೆ ಮಿಯಾನ್ʼ(Bade Miyan Chote Miyan). ಏಪ್ರಿಲ್ 10ರಂದು ಬಿಡಯಗಡೆಯಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗಳಿಕೆ ಕಾಣುತ್ತಿಲ್ಲ. ಬಿಗ್ ಬ್ರೇಕ್‌ಗಾಗಿ ಕಾಯುತ್ತಿರುವ ಅಕ್ಕಿಗೆ ಸೋಲು ಬೆನ್‌ಬಿಡದೇ ಕಾಡುತ್ತಿದೆ.
ಅಲಿ ಅಬ್ಬಾಸ್ ಜಾಫರ್ ನಿರ್ದೇಶನದಲ್ಲಿ ಮೂಡಿ ಬಂದ ಬಿಗ್ ಬಜೆಟ್ ಸಿನಿಮಾ ‘ಬಡೇ ಮಿಯಾನ್ ಚೋಟೆ ಮಿಯಾನ್’(Bade Miyan Chote Miyan)ಚಿತ್ರ. 350 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಚಿತ್ರದಲ್ಲಿ ಅಕ್ಷಯ್ ಕುಮಾರ್(Akshay Kumar), ಟೈಗರ್ ಶ್ರಾಫ್(Tiger Shroff) ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದ ಚಿತ್ರ ಬಿಟೌನ್ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿಲ್ಲ. ಮೊದಲೆರಡು ದಿನಗಳಲ್ಲಿ ಅಂದುಕೊಂಡಷ್ಟು ಗಳಿಕೆ, ಪ್ರತಿಕ್ರಿಯೆ ಎರಡೂ ಸಿಕ್ಕಿಲ್ಲ. ಇದ್ರಿಂದ ಅಕ್ಷಯ್ ಸಿನಿಮಾ ಮತ್ತೆ ಸೋಲಿನ ದವಡೆಯಲ್ಲಿ ಸಿಲುಕಿದೆ.
ಸೌತ್ ಅಂಗಳದಲ್ಲೂ ಈ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಬಂದಿಲ್ಲ. ಪೃಥ್ವಿರಾಜ್ ಸುಕುಮಾರ್ ಅಭಿನಯದ ‘ಆಡು ಜೀವಿತಂ’(Aadujeevitham) ಸಿನಿಮಾ ಮುಂದೆ ಅಕ್ಷಯ್ ಸಿನಿಮಾ ಮಂಕಾಗಿದ್ದು, ಸೌತ್ ಬೆಲ್ಟ್‌ನಲ್ಲೂ ಕಲೆಕ್ಷನ್ ಡಲ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ಈ ಸಿನಿಮಾದಲ್ಲೂ ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ಬ್ಯಾಡ್ ಲಕ್ ಮುಂದುವರೆದಿದೆ. ಮಿಷನ್ ರಾಣಿಗಂಜ್, ಸೆಲ್ಪಿ, ರಕ್ಷಾಬಂಧನ್, ಸಾಮ್ರಾಟ್ ಪೃಥ್ವಿರಾಜ್, ಬಚ್ಚನ ಪಾಂಡೆ ಸಿನಿಮಾಗಳ ಸಾಲು ಸೋಲುಗಳು ಅಕ್ಷಯ್(Akshay kumar) ಜೋಳಿಗೆಯಲ್ಲಿವೆ. ‘ಬಡೇ ಮಿಯಾನ್ ಚೋಟೇ ಮಿಯಾನ್’ ಅಕ್ಷಯ್‌ಗೆ ಬಿಗ್ ಬ್ರೇಕ್ ನೀಡುವ ಲೆಕ್ಕಾಚಾರವಿತ್ತು ಆದ್ರೀಗ ಅದೂ ಸುಳ್ಳಾಗಿದೆ.