ಬಾಲಿವುಡ್ ಕ್ಯೂಟಿ ಪೈ ಆಲಿಯಾ ಮದುವೆಗೂ ಮುನ್ನ ಹಲವು ನಟರ ಜೊತೆಗೆ ಡೇಟಿಂಗ್ ನಲ್ಲಿದ್ದರು ಎಂಬ ರೂಮರ್ಸ್ ಗಳಿದ್ದವು. ಕೊನೆಗೆ ಆಲಿಯಾ ಭಟ್ ತಾವು ಪ್ರೀತಿಸಿದ ಹುಡುಗ ಬಾಲಿವುಡ್ ನ ಖ್ಯಾತ ನಟ ರಣಬೀರ್ ಕಪೂರ್ ಜೊತೆ ಸಪ್ತಪದಿ ತುಳಿದರು. ಸದ್ಯ ರಾಜಿ, ಪರ್ಸನಲ್ ಲೈಫ್ ಅಂಡ್ ಪ್ರೊಫೆಷನಲ್ ಲೈಫ್ನ ಈಸಿಯಾಗಿ ಬ್ಯಾಲೆನ್ಸ್ ಮಾಡ್ತಿದ್ದಾರೆ. ತಾಯ್ತನದ ಸುಂದರ ಕ್ಷಣಗಳನ್ನ ಕಳೆಯೋದ್ರ ಜೊತೆಗೆ ಸಿನಿಮಾದಲ್ಲೂ ತೊಡಗಿಸಿಕೊಳ್ತಿದ್ದಾರೆ. ಈ ನಡುವೆ ಆಲಿಯಾ ಕುರಿತಾಗಿ ಶಾಕಿಂಗ್ ವಿಚಾರವೊಂದು ವೈರಲ್ ಆಗಿದೆ. ಅದು ಎರಡನೇ ಮದುವೆ ವಿಚಾರ. ಅದ್ರಲ್ಲೂ ಈ ವಿಚಾರ ಎತ್ತಿದ್ದೇ ಆಲಿಯಾಳನ್ನು ಮಗಳಂತೆ ಕಾಣುವ ಕರಣ್ ಜೋಹರ್
ಯಸ್, ಆಲಿಯಾ ಭಟ್ಗೆ ಎರಡು ಮದುವೆಯಾಗಿದೆ ಅಂತೆ . ಒಂದು ವಾರದೊಳಗೆ ಆಲಿಯಾ ಎರಡು ಮದುವೆಯಾಗಿದ್ದಾರೆ ಎಂದು ಕರಣ್ ಜೋಹರ್ ಹೇಳಿದ್ದಾರೆ. ಆಲಿಯಾ ಹಾಗೂ ರಣಬೀರ್ ಮದುವೆಯಾಯಿತು. ಅದಾಗಿ ನಾಲ್ಕು ದಿನದ ನಂತರ ಆಲಿಯಾ ಹಾಗೂ ರಣವೀರ್ ಮದುವೆಯಾಗಿದೆ ಎಂದು ಕರಣ್ ಹೇಳಿಕೆ ಕೊಟ್ಟಿದ್ದಾರೆ. ಅರ್ರೇ ಹೌದಾ? ಈ ಸುದ್ದಿ ನಿಜಾನಾ ಅಂತ ಶಾಕ್ ನಲ್ಲಿದ್ದ ಆಲಿಯಾ ಅಭಿಮಾನಿಗಳಿಗೆ ಮುಂದೆ ಮಾತನಾಡಿದ ಕರಣ್ ಟೆನ್ಷನ್ ಕಡಿಮೆ ಮಾಡಿದ್ದಾರೆ. ಅಂದ್ಹಾಗೇ, ಆಲಿಯಾ ರೀಲ್ ಹಾಗೂ ರಿಯಲ್ ಲೈಫ್ ಸೇರಿ ಎರಡು ಬಾರಿ ಮದುವೆಯಾದರು. ರಣಬೀರ್ ಕಪೂರ್ ಜೊತೆಗಿನ ಮದುವೆಗೆ ಆಲಿಯಾ ಹಚ್ಚಿದ್ದ ಮೆಹಂದಿಯೇ ರೀಲ್ ಮದುವೆಗೂ ಇತ್ತು. ನಾವು ಆ ಮೆಹಂದಿಯನ್ನೇ ಸ್ವಲ್ಪ ಡಾರ್ಕ್ ಮಾಡಿದೆವು ಎಂದಿದ್ದಾರೆ.
ಒಟ್ನಲ್ಲಿ ಈ ಸುದ್ದಿ ಕೇಳಿ ಬಿಟೌನ್ ಬ್ಯೂಟಿ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಂತೂ ನಿಜ. ಯಾಕಂದ್ರೆ, ಬಿಟೌನ್ ಅಂಗಳದಲ್ಲಿ ಸದ್ದಿಲ್ಲದೇ ಮದುವೆಯಾಗೋದು, ಗದ್ದಲವಿಲ್ಲದೇ ದಾಂಪತ್ಯ ಮುರಿದು ಬೀಳೋದು ಕಾಮನ್ ಆಗ್ಬಿಟ್ಟಿದೆ. ಎನಿವೇ, ರಣಬೀರ್- ಅಲಿಯಾ ಭಟ್ ಚೆನ್ನಾಗಿದ್ದಾರೆ. ಅವರಿಬ್ಬರ ದಾಂಪತ್ಯಕ್ಕೆ ಸಾಕ್ಷಿಯಾಗಿ ಮುದ್ದುಮಗಳ ಆಗಮನವಾಗಿದೆ. ಸಂಸಾರ ಹಾಗೂ ಸಿನಿಮಾವನ್ನ ಸರಿಯಾಗಿ ತೂಗಿಸಿಕೊಂಡು ಹೋಗ್ತಿರೋ ಆಲಿಯಾ ಭಟ್, ‘ಗಂಗೂಬಾಯಿ ಕಾಥಿಯವಾಡಿ’ ಚಿತ್ರದ ನಂತರ ‘ರಾಕಿ ಮತ್ತು ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರಕ್ಕೆ ಬಣ್ಣ ಹಚ್ಚಿದ್ರು. ಬಾಲಿವುಡ್ ಮ್ಯಾಚೋಮ್ಯಾನ್ ರಣವೀರ್ ಸಿಂಗ್ಗೆ ಜೋಡಿಯಾದರು. ಕರಣ್ ಜೋಹರ್ ಈ ಸಿನಿಮಾ ನಿರ್ದೇಶನ ಮಾಡಿದ್ದು, ಜುಲೈ 28ರಂದು ಈ ಚಿತ್ರ ತೆರೆಕಂಡಿದೆ.
`ಗಲ್ಲಿಭಾಯ್’ ಚಿತ್ರದ ನಂತರ ರಣವೀರ್ ಹಾಗೂ ಆಲಿಯಾ ಜೋಡಿ ಮತ್ತೆ ಒಂದಾಗಿದ್ದು, ಬೆಳ್ಳಿತೆರೆ ಮೇಲೆ ಮೋಡಿ ಮಾಡ್ತಿದ್ದಾರೆ`ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ಸದ್ಯ ಭರ್ಜರಿಯಾಗಿ ಓಡುತ್ತಿದೆ. ಸಿನಿಮಾ ಈಗಾಗಲೇ 100 ಕೋಟಿಯ ಕ್ಲಬ್ ಸೇರಿದೆ ಎನ್ನುತ್ತಿದ್ದಾರೆ ಟ್ರೇಡ್ ಎಕ್ಸ್ಪರ್ಟ್ಸ್. ಈ ಮೂಲಕ ಇವರಿಬ್ಬರ ಕಾಂಬಿನೇಷನ್ ಸ್ಕ್ರೀನ್ ಮೇಲೆ ಧಮಾಕಾ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.