Allu Arjun: ಟಾಲಿವುಡ್ ಅಂಗಳದಲ್ಲಿ ಕ್ರೇಜ಼್ ಸೃಷ್ಟಿಸಿರುವ ಸಿನಿಮಾವಂದ್ರೆ ಸದ್ಯದ ಮಟ್ಟಿಗೆ ಅದು ‘ಪುಷ್ಪ2’(Pushpa2). ಅಲ್ಲು ಅರ್ಜುನ್(Allu Arjun) – ಸುಕುಮಾರ್(Sukumar) ಕ್ರೇಜಿ಼ ಕಾಂಬಿನೇಶನ್ ಹಾಗೂ ‘ಪುಷ್ಪ’ ಸಿನಿಮಾ ಗೆಲುವು ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚು ಮಾಡಿದೆ. ಇದೀಗ ಲೇಟೆಸ್ಟ್ ಸಮಾಚಾರವೊಂದು ಹೊರಬಿದ್ದಿದ್ದು, ಸುದ್ದಿ ಕೇಳಿ ಸ್ಟೈಲಿಶ್ ಸ್ಟಾರ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಟೀಸರ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದೆ ‘ಪುಷ್ಪ2’(Pushpa2). ಆಗಸ್ಟ್‌ನಲ್ಲಿ ತೆರೆ ಕಾಣಲು ರೆಡಿಯಿರುವ ಈ ಸಿನಿಮಾದ ಬ್ಯುಸಿನೆಸ್ ಈಗಾಗಲೇ ಶುರುವಾಗಿದೆ. ‘ಪುಷ್ಪ2’(Pushpa2) ಹಿಂದಿ ಡಬ್ಬಿಂಗ್ ರೈಟ್ಸ್ ದಾಖಲೆ ಮೊತ್ತಕ್ಕೆ ಸೇಲ್ ಆಗಿದ್ದು, ಐಕಾನ್ ಸ್ಟಾರ್ ಟಾಲಿವುಡ್‌ನಲ್ಲಿ ಹೊಸ ದಾಖಲೆ ಬರೆಯಲು ಹೊರಟಿದ್ದಾರೆ.
ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಬರೊಬ್ಬರು 300 ಕೋಟಿಗೆ ಸೇಲ್ ಆಗಿದೆ. ಈ ಮೂಲಕ ಅಲ್ಲು ಅರ್ಜುನ್ ಸಿನಿ ಕೆರಿಯರ್‌ನಲ್ಲೇ ಹಾಗೂ ಟಾಲಿವುಡ್ ಇಂಡಸ್ಟ್ರಿಯ್ಲಲೇ ಅತಿ ಹೆಚ್ಚು ಮೊತ್ತಕ್ಕೆ ಡಬ್ಬಿಂಗ್ ರೈಟ್ಸ್ ಸೇಲ್ ಆದ ಸಿನಿಮಾ ಖ್ಯಾತಿ ‘ಪುಷ್ಪ2’(Pushpa2) ಸಿನಿಮಾದ್ದಾಗಿದೆ. ಮ್ಯೂಸಿಕ್ ರೈಟ್ಸ್ ಹಾಗೂ ಓಟಿಟಿ ರೈಟ್ಸ್ ಕ್ರಮವಾಗಿ 80 ಹಾಗೂ 100 ಕೋಟಿಗೆ ಮಾರಾಟವಾಗಿದೆ ಎನ್ನಲಾಗ್ತಿದೆ. ಟಿವಿ ರೈಟ್ಸ್ ‘ಸ್ಟಾರ್ ಮಾ’ ಟಿವಿ ಪಾಲಾಗಿದ್ದು ಎಷ್ಟು ಮೊತ್ತಕ್ಕೆ ಅನ್ನೋದು ಇಲ್ಲಿಯವರೆಗೆ ರಿವೀಲ್ ಆಗಿಲ್ಲ.
ಒಟ್ನಲ್ಲಿ, ರಿಲೀಸ್‌ಗೂ ಮುನ್ನವೇ ‘ಪುಷ್ಪ2’(Pushpa2) ಬಾಕ್ಸ್‌ಆಫೀಸ್ ರೂಲ್ ಮಾಡೋದಕ್ಕೆ ಶುರು ಇಟ್ಟಿರೋದಂತೂ ಸತ್ಯ. ಅಲ್ಲು ಅರ್ಜುನ್(Allu Arjun), ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಜೋಡಿಯ ಈ ಚಿತ್ರ ಆಗಸ್ಟ್ 15ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ.