ಪುಷ್ಪರಾಜ್ ಉರುಫ್ ಅಲ್ಲು ಅರ್ಜುನ್ (AlluArjun) ಪ್ಯಾನ್ ಇಂಡಿಯಾ ಹಾರ್ಟ್‌ಥ್ರೋಬ್ ಅನ್ನೋದು ನಿಮಗೆಲ್ಲ ಗೊತ್ತೆಯಿದೆ. ಪುಷ್ಪ ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಆಗಿರೋ ಅಲ್ಲು ಅರ್ಜುನ್ (AlluArjun) ಇದೀಗ ಪುಷ್ಪ ಪಾರ್ಟ್-2 ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಹೈದ್ರಬಾದ್ನಲ್ಲಿ ಪುಷ್ಪರಾಜ್ ಹಾಗೂ ಶ್ರೀವಲ್ಲಿ ಮದುವೆ ಸೀಕ್ವೆನ್ಸ್ ಚಿತ್ರೀಕರಣ ನಡೆಯುತ್ತಿದ್ದು, ಶೂಟಿಂಗ್ ಮಧ್ಯೆ ಅಲ್ಲು ಅರ್ಜುನ್ (AlluArjun) ಆರ್‌ಟಿಓ ಆಫೀಸ್‌ಗೆ ಭೇಟಿಕೊಟ್ಟಿದ್ದಾರೆ. ಏಕಾಏಕಿ ಬನ್ನಿ ಆರ್‌ಟಿಓ ಆಫೀಸ್‌ಗೆ ವಿಸಿಟ್ ಮಾಡಿದ್ದು ಹಲವು ಅನುಮಾನಕ್ಕೆ ಕಾರಣವಾಗಿತ್ತು. ಇದೀಗ ಅಸಲಿ ಮ್ಯಾಟರ್ ರಿವೀಲ್ ಆಗಿದೆ. ಬನ್ನಿ ಇಂಟರ್‌ನ್ಯಾಷನಲ್ ಡ್ರೈವಿಂಗ್ ಲೈಸೆನ್ಸ್ ಪಡೆಯೋದಕ್ಕೋಸ್ಕರ ಹೈದ್ರಬಾದ್ ಆರ್‌ಟಿಓ ಆಫೀಸ್‌ಗೆ ಎಂಟ್ರಿಕೊಟ್ಟಿದ್ದರಂತೆ.
ಅಷ್ಟಕ್ಕೂ, ಈ ಲೈಸೆನ್ಸ್ ಪಡೆಯೋಕೆ ಕಾರಣ ಪುಷ್ಪ 2 (Pushpa-2) ಸಿನಿಮಾದ ಶೂಟಿಂಗ್ ಎಂದು ಹೇಳಲಾಗುತ್ತಿದೆ. ಸದ್ಯ ಇಂಡಿಯಾದಲ್ಲೇ ಚಿತ್ರೀಕರಣ ಮಾಡುತ್ತಿರುವ ಚಿತ್ರತಂಡ ಮುಂದಿನ ದಿನಗಳಲ್ಲಿ ಚೀನಾಗೆ ಹಾರಲಿದೆಯಂತೆ. ಅಲ್ಲಿ ಈ ಲೈಸೆನ್ಸ್ ಉಪಯೋಗಕ್ಕೆ ಬರಲಿದೆಯಂತೆ. ಈ ಕಾರಣದಿಂದಾಗಿಯೇ ಅಲ್ಲು ಅರ್ಜುನ್ (AlluArjun) ಆರ್.ಟಿ.ಓ ಆಫೀಸಿಗೆ ತೆರಳಿ, ಪರವಾನಗಿ ಪತ್ರ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ. ಅಂದ್ಹಾಗೇ, ಪುಷ್ಪ-2 ಚಿತ್ರದಲ್ಲಿ ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್‌ಗಳಿದ್ದು, ಹೊರದೇಶದಲ್ಲಿ ಚೇಸಿಂಗ್ ಸನ್ನಿವೇಶಗಳನ್ನ ಸೆರೆಹಿಡಿಯುವಾಗ ಕಲಾವಿದರ ಬಳಿ ಇಂಟರ್‌ನ್ಯಾಷನಲ್ ಡ್ರೈವಿಂಗ್ ಲೈಸೆನ್ಸ್ ಕಡ್ಡಾಯವಾಗಿರಲೇಬೇಕಂತೆ. ಹೀಗಾಗಿ, ಬನ್ನಿ ಈ ಲೈಸೆನ್ಸ್ ಪಡೆದುಕೊಂಡಿದ್ದಾರಂತೆ. ಇತ್ತೀಚೆಗೆ ವೈಸಾಗ್‌ನಲ್ಲಿ ಪುಷ್ಪ-2 ಚಿತ್ರೀಕರಣ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪುಷ್ಪರಾಜ್ (AlluArjun) ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಅಲ್ಲಿನ ಜನತೆ ತೋರಿಸಿದ ಪ್ರೀತಿಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಶರಣು ಶರಣೆಂದಿದ್ದರು.
ನಿಮಗೆಲ್ಲ ಗೊತ್ತಿರೋ ಹಾಗೇ ಪುಷ್ಪ-2(Pushpa-2) ಚಿತ್ರದ ರಿಲೀಸ್ ಡೇಟ್ ಫಿಕ್ಸಾಗಿದೆ. ಆಗಸ್ಟ್ 15ಕ್ಕೆ ಪ್ಯಾನ್ ವರ್ಲ್ಡ್ ತುಂಬೆಲ್ಲಾ ರಿಲೀಸ್ ಮಾಡೋದಕ್ಕೆ ಮೈತ್ರಿ ಮೂವೀ ಮೇಕರ್ಸ್ ಟೀಮ್ ಸಕಲ ತಯ್ಯಾರಿ ಮಾಡಿಕೊಳ್ತಿದೆ. ಇತ್ತ ನಿರ್ದೇಶಕ ಸುಕುಮಾರ್, ಪುಷ್ಪ ದಿ ರೈಸ್ ಗಿಂತ, ಪುಷ್ಪ ದಿ ರೂಲ್‌ನ ಬಿಗ್ಗರ್ ಅಂಡ್ ಬೆಟರ್ ಆಗಿ ಕಟ್ಟಿಕೊಡೋದಕ್ಕೆ ಕಣ್ಣಿಗೆ ಎಣ್ಣೆಬಿಟ್ಕೊಂಡು ಕೆಲಸ ಮಾಡ್ತಿದ್ದಾರೆ. ಆದಷ್ಟು ಬೇಗ ಟಾಕಿಪೋಶನ್ ಮುಗಿಸಿ, ಐಟಂ ಸಾಂಗ್ ಕ್ಯಾಪ್ಟರ್ ಮಾಡಲು ರೆಡಿಯಾಗ್ತಿದ್ದಾರೆ. ಈ ಬಾರಿ ಪುಷ್ಪ ಅಖಾಡದಲ್ಲಿ ಕುಣಿಯೋದಕ್ಕೆ ಬಿಟೌನ್ ಬೆಡಗಿ ಜಾಹ್ನವಿ ಕಪೂರ್‌ನ (Janhvi Kapoor) ಅಪ್ರೋಚ್ ಮಾಡಿರುವ ಸುದ್ದಿ ಕೇಳಿಬಂದಿದೆ. ಯಂಗ್ ಟೈಗರ್ ಜೂ.ಎನ್‌ಟಿಆರ್ ದೇವರ ನಂತರ ಮೆಗಾಪ್ರಿನ್ಸ್ ರಾಮ್‌ಚರಣ್ ತೇಜಾ ನಟನೆಯ ಆರ್-16 ಸಿನಿಮಾಗೆ ಎಂಟ್ರಿಕೊಟ್ಟಿರುವ ದಢಕ್ ಬ್ಯೂಟಿ, ಪುಷ್ಪರಾಜ್ ಜೊತೆ ಲೆಗ್ ಶೇಕ್ ಮಾಡ್ತಾಳಾ? ಊಂ ಅಂಟಾವ ಮಾವ ಅಂತ ಸೌತ್ ಸುಂದರಿ ಸಮಂತಾ ಕುಣಿದ್ಹಂಗೆ ಪುಷ್ಪರಾಜ್ ಜೊತೆ ಎಕ್ಕಮಕ್ಕಾ ಕುಣಿದು ಕಿಕ್ಕೇರಿಸ್ತಾಳಾ ಕಾದುನೋಡಬೇಕು.