ಮಂಗಳವಾರ, ಜುಲೈ 1, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Ananth Nag: ಇದು ಎಂಥಾ ಲೋಕವಯ್ಯ ಸಿನಿಮಾಗೆ ಅನಂತ್ ನಾಗ್ ಸಾಥ್ – ಆ.9ಕ್ಕೆ ತೆರೆಗೆ ಬರಲಿದೆ ಚಿತ್ರ..!

Bharathi Javalliby Bharathi Javalli
05/08/2024
in Majja Special
Reading Time: 1 min read
Ananth Nag: ಇದು ಎಂಥಾ ಲೋಕವಯ್ಯ ಸಿನಿಮಾಗೆ ಅನಂತ್ ನಾಗ್ ಸಾಥ್ – ಆ.9ಕ್ಕೆ ತೆರೆಗೆ ಬರಲಿದೆ ಚಿತ್ರ..!

Ananth Nag: ಸಿತೇಶ್ ಸಿ ಗೋವಿಂದ್ ನಿರ್ದೇಶನದ ಇದು ಎಂಥಾ ಲೋಕವಯ್ಯ ಸಿನಿಮಾ  ಬಿಡುಗಡೆಗೆ ಸಜ್ಜಾಗಿದೆ. ಆಗಸ್ಟ್ 9ಕ್ಕೆ ಚಿತ್ರ ತೆರೆಗೆ ಬರುತ್ತಿದ್ದು, ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಅದರ ಭಾಗವಾಗಿ ಎಂಥ ಲೋಕವಯ್ಯ ಸಿನಿಮಾದ ಆಗಮನ ನಿನ್ನ ಆಗಮನ ಹಾಗೂ ಸಂಜೆ ವೇಳೆಗೆ ಎಂಬ ಎರಡು ಹಾಡುಗಳನ್ನು ಅನಾವರಣ ಮಾಡಲಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಹಿರಿಯ ನಟ ಅನಂತ್ ನಾಗ್ ಸಾಂಗ್ ರಿಲೀಸ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದರು.

ಹಿರಿಯ ನಟ ಅನಂತ್ ನಾಗ್ ಮಾತನಾಡಿ, ಇದು ಎಂಥ ಲೋಕವಯ್ಯ ನನ್ನ ಸಿನಿಮಾದ ಜನಪ್ರಿಯ ಹಾಡು. ಆ  ಹಾಡಿನ ಟೈಟಲ್ ಸಿನಿಮಾವಾಗಿದೆ. ಬಹಳ ಸಂತೋಷದಿಂದ ಕಾರ್ಯಕ್ರಮಕ್ಕೆ ಬಂದಿದ್ದೇನೆ.‌ ನಿಮ್ಮ ಬೆಂಬಲದಿಂದ ಈ ಸಿನಿಮಾ ಯಶಸ್ಸು ಗಳಿಸಲಿ, ಜನಪ್ರಿಯವಾಗಲಿ ಎಂದರು. ನಿರ್ದೇಶಕ ಸಿತೇಶ್ ಸಿ ಗೋವಿಂದ್ ಮಾತನಾಡಿ, ಆಗಸ್ಟ್ 9ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಇದು ನನ್ನ ಮೊದಲ ಪ್ರಯತ್ನ. ಈ ಚಿತ್ರದ ಮೂಲಕ ನಿರ್ದೇಶಕನಾಗಿ ಚಿತ್ರಕ್ಕೆ ಎಂಟ್ರಿ ಕೊಡುತ್ತಿದ್ದೇನೆ. ಕಡಿಮೆ ಸಮಯದಲ್ಲಿ 28 ಕಲಾವಿದರು ನಟಿಸಿರುವ ಚಿತ್ರ ಇದು. ಫ್ಯಾಷನೇಟೆಡ್ ಆಗಿ ಸಿನಿಮಾ ಮಾಡಿದ್ದೇನೆ ಎಂದರು.

ಆಗಮನ ನಿನ್ನ ಆಗಮನ ಹಾಡಿಗೆ ರಾಹುಲ್ ಹಜಾರೆ ಹಾಗೂ ದೀಪಾ ಸಿತೇಸ್ ಸಾಹಿತ್ಯ ಬರೆದಿದ್ದು, ರಿತ್ವಿಕ್ ಎಸ್ ಚಂದ್ , ಭದ್ರ ರಾಜಿನ್ ಧ್ವನಿಯಾಗಿದ್ದಾರೆ. ಸಂಜೆ ವೇಳೆಗೆ ಹಾಡಿಗೆ ಸಜೀವ್ ಸ್ಟಾನ್ಲಿ ಕಂಠ ಕುಣಿಸಿದ್ದು, ಕೀರ್ತನ್ ಭಂಡಾರಿ ಹಾಗೂ ಪುಷ್ಪರಾಜ್ ಗುಂಡ್ಯ ಪದ ಪೊಣಿಸಿದ್ದಾರೆ. ಈ ಎರಡು ಗೀತೆಗೆ ರಿತ್ವಿಕ್ ಚಂದ್ ಸಂಗೀತ ಒದಗಿಸಿದ್ದಾರೆ. ಅನುರಾಜ್ ಕಕ್ಯಪದವ್, ಮೈತ್ರಿ, ಮೈಮ್ ರಾಮದಾಸ್, ಗೋಪಿನಾಥ್ ಭಟ್, ಸುಕನ್ಯಾ, ವಿಶ್ವನಾಥ್ ಅಸೈಗೋಳಿ, ಚಂದ್ರಹಾಸ ಉಳ್ಳಾಲ್, ಅರ್ಜುನ್ ಕಜೆ, ಪ್ರೀತಿ ಮುತ್ತಪ್ಪ, ದೀಪಕ್ ರೈ, ಸಂತೋಷ್ ಶೆಣೈ, ಸುಧೀರ್ ರಾಜ್, ಪ್ರಶಾಂತ್ ಜೋಗಿ, ಹರೀಶ್ ಬಂಗೇರ, ಪ್ರಕಾಶ್‌ ತುಮ್ಮಿನಾಡ್‌, ಸೇರಿ ಇನ್ನೂ ಹಲವು ಚಿತ್ರದ ತಾರಾಬಳಗದಲ್ಲಿದ್ದಾರೆ. ಕರ್ನಾಟಕ ಮತ್ತು ಕೇರಳ ಗಡಿಯಲ್ಲಿನ ಹಳ್ಳಿಗಳಲ್ಲಿ ನಡೆಯುವ ಕತೆಯೇ ಇದು ಎಂಥಾ ಲೋಕವಯ್ಯ ಸಿನಿಮಾ. ಈ ಕನ್ನಡ ಚಿತ್ರವನ್ನು ಖ್ಯಾತ ಮಲಯಾಳಂ ನಿರ್ದೇಶಕ ಜಿಯೋ ಬೇಬಿ ಪ್ರಸೆಂಟ್‌ ಮಾಡುತ್ತಿದ್ದಾರೆ. ಕಡ್ಲೆಕಾಯಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಮಂಗಲ್ಪಾಡಿ ನರೇಶ್ ನಾಮದೇವ್ ಶೆಣೈ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Megha Shetty: ಮೆಘಾ ಶೆಟ್ಟಿ ಬರ್ತ್‌ ಡೇಗೆ ಆಪರೇಶನ್ ಲಂಡನ್‌ ಕೆಫೆ ಫಸ್ಟ್‌ ಲುಕ್‌ ರಿಲೀಸ್‌ – ಸದ್ಯದಲ್ಲೇ ಟೀಸರ್‌ ಎಂದ ಚಿತ್ರತಂಡ

Megha Shetty: ಮೆಘಾ ಶೆಟ್ಟಿ ಬರ್ತ್‌ ಡೇಗೆ ಆಪರೇಶನ್ ಲಂಡನ್‌ ಕೆಫೆ ಫಸ್ಟ್‌ ಲುಕ್‌ ರಿಲೀಸ್‌ - ಸದ್ಯದಲ್ಲೇ ಟೀಸರ್‌ ಎಂದ ಚಿತ್ರತಂಡ

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.