ಕಾಲಿವುಡ್ ಸ್ಟಾರ್ ಧನುಷ್ ಸದ್ಯ ಹೆಚ್ಚೆಚ್ಚು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಸೌತ್, ಬಾಲಿವುಡ್, ಹಾಲಿವುಡ್ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ವಿಭಿನ್ನ ಪಾತ್ರಗಳನ್ನು ಮಾಡಿ ಎಲ್ಲಾ ಪಾತ್ರಗಳಲ್ಲೂ ಸೈ ಎನಿಸಿಕೊಂಡಿದ್ದಾರೆ. ತಮ್ಮ ಸಿನಿ ಕರಿಯರ್‌ನ 50 ನೇ ಸಿನಿಮಾ ಸ್ವಲ್ಪ ಡಿಫರೆಂಟಾಗಿರಲಿ ಎಂದು ಅವರೇ ಕಥೆ ಬರೆದು ನಿರ್ದೇಶನ ಮಾಡಿರುವ ‘D50’ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಲುಕ್ ಡಿಫರೆಂಟಾಗಿದ್ದು ಸಿನಿ ಜಗತ್ತಲ್ಲಿ ಸಂಚಲನ ಸೃಷ್ಟಿಸಿದೆ.
ಈ ಬಹುನಿರೀಕ್ಷಿತ ಸಿನಿಮಾಗೆ ಧನುಷ್ ಜೊತೆ ನಾಯಕಿಯಾಗಿ ಅನಿಕಾ ಸುರೇಂದ್ರನ್ ನಟಿಸುತ್ತಿದ್ದಾರೆ. ಅನಿಕಾ ಸುರೇಂದ್ರನ್ 2007 ರಲ್ಲಿ ಮಲಯಾಳಂ ಚಿತ್ರರಂಗಕ್ಕೆ ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದರ ನಂತರ ಅವರು ಅನೇಕ ಚಿತ್ರಗಳಲ್ಲಿ ನಟಿಸಿದರು. 2014 ರಲ್ಲಿ, ಅನಿಕಾ ಅಜಿತ್ ಅಭಿನಯದ `ಎನ್ನೈ ಅರಿಂದಾಳ್’ ಚಿತ್ರದಲ್ಲಿ ಅಜಿತ್ ಅವರ ಮಗಳಾಗಿ ಅಭಿನಯಿಸಿದ್ದರು. ಇದು ದೊಡ್ಡ ಮಟ್ಟದ ಸಕ್ಸಸ್, ಹೆಸರನ್ನು ತಂದು ಕೊಟ್ಟಿತು. ಈ ಚಿತ್ರದ ನಂತರ ಅನಿಕಾಗೆ ತಮಿಳಿನಲ್ಲಿ ಹಲವು ಸಿನಿಮಾ ಅವಕಾಶಗಳು ಬಂದವು. ನಟಿ ಅನಿಕಾ ಈಗ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಆರಂಭಿಸಿದ್ದಾರೆ.
‘ಬುಟ್ಟ ಬೊಮ್ಮ’ ಅನಿಕಾ ನಾಯಕಿಯಾಗಿ ನಟಿಸಿದ ಮೊದಲ ಚಿತ್ರ. ಇದು ಮಲಯಾಳಂನ ಹಿಟ್ ರೊಮ್ಯಾಂಟಿಕ್ ಚಿತ್ರ ಕ್ಯಾಪೆಲ್ಲಾದ ತೆಲುಗು ರಿಮೇಕ್ ಇದಾಗಿದೆ. ಅನಿಕಾ ನಾಯಕಿಯಾಗಿ ನಟಿಸಿದ ಮೊದಲ ಮಲಯಾಳಂ ಚಿತ್ರ ಓ ಮೈ ಡಾರ್ಲಿಂಗ್. ಚಿತ್ರದಲ್ಲಿ ಮೆಲ್ವಿನ್ ಜಿ ಬಾಬುಗೆ ಜೋಡಿಯಾಗಿ ಅನಿಕಾ ನಟಿಸಿದ್ದಾರೆ.
ಈಗ ಧನುಷ್‌ಗೆ ನಾಯಕಿಯಾಗುವ ಮೂಲಕ ಅನಿಕಾ, ಸಿನಿಮಾ ಬಗೆಗಿನ ನಿರೀಕ್ಷೆ ಹೆಚ್ಚಿಸಿದ್ದಾರೆ. ಸಿನಿಮಾದಲ್ಲಿ ಅವರ ಪಾತ್ರಕ್ಕೆ ಪ್ರಾಮುಖ್ಯತೆಯಿದೆ ಎನ್ನಲಾಗಿದೆ. ವಿಭಿನ್ನ ಪಾತ್ರದ ಮೂಲಕ ನಟಿ ಅನಿಕಾ ತೆರೆಯ ಮೇಲೆ ಮಿಂಚಲಿದ್ದಾರೆ. ಧನುಷ್-ಅನಿಕಾ ಇಬ್ಬರ ಕೆಮಿಸ್ಟ್ರಿ ಹೇಗೆ ಮೂಡಿ ಬರಲಿದೆ ಎಂಬುದರ ಬಗ್ಗೆ ಅಭಿಮಾನಿಗಳು ಕಾತರರಾಗಿದ್ದಾರೆ.