Salman Khan: ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್. ಎಲ್ಲಾ ಭಾಷೆಯಲ್ಲೂ ಕಮಾಲ್ ಮಾಡಿರುವ ಬಿಗ್ ಬಾಸ್ ಹಿಂದಿಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿಕೊಂಡಿದೆ. ಹಿಂದಿ ಬಿಗ್‌ಬಾಸ್ ಎಂದರೆ ಅದೇನೋ ಒಂದು ಕ್ಯೂರಿಯಾಸಿಟಿ ಇದ್ದೇ ಇರುತ್ತೆ. ಅದು ಅಲ್ಲಿ ನಡೆಯುವ ಜಗಳಕ್ಕೋ, ಸ್ಪರ್ಧಿಗಳ ಅವತಾರಕ್ಕೋ, ಸಲ್ಮಾನ್ ಖಾನ್ ಕಾರಣಕ್ಕೋ ಗೊತ್ತಿಲ್ಲ. ಸಲ್ಮಾನ್ ಖಾನ್(Salman Khan) ನಿರೂಪಣೆಯಲ್ಲಿ ಮೂಡಿ ಬರುವ ಬಿಗ್‌ಬಾಸ್ ಈ ಬಾರಿ ಸಲ್ಲು ಇಲ್ಲದೇ ಪ್ರಸಾರಗೊಳ್ಳಲಿದೆ. ಹಾಗಾದ್ರೆ ಬ್ಯಾಡ್ ಬಾಯ್ ಜಾಗಕ್ಕೆ ಬರುವವರ್ಯಾರು ಅನ್ನೋದೇ ಎಲ್ಲರ ಕುತೂಹಲ.
ಬಿಟೌನ್‌ನಲ್ಲಿ ಬಿಗ್‌ಬಾಸ್ ಓಟಿಟಿ ಸೀಸನ್ ಆರಂಭವಾಗಿದೆ. ಪ್ರತಿ ಬಾರಿ ತಮ್ಮ ವಿಭಿನ್ನ ನಿರೂಪಣೆ, ಮ್ಯಾನರಿಸಂನಿಂದ ಬಿಗ್‌ಬಾಸ್ ವೇದಿಕೆಯ ರಂಗು ಹೆಚ್ಚಿಸುತ್ತಿದ್ದ ಸಲ್ಲು(Salman Khan) ಈ ಬಾರಿ ಓಟಿಟಿ ನಿರೂಪಣೆಯಿಂದ ಹಿಂದೆ ಸರಿದಿದ್ದಾರೆ. ಸಿನಿಮಾ ಹಾಗೂ ಪರ್ಸನಲ್ ಕಮಿಟ್‌ಮೆಂಟ್‌ನಿಂದ ಸಲ್ಮಾನ್ ಖಾನ್ ನಿರೂಪಣೆ ಮಾಡದಿರಲು ತೀರ್ಮಾನಿಸಿದ್ದಾರೆ. ಸಲ್ಲು ಅಭಿಪ್ರಾಯವನ್ನು ಗೌರವಿಸಿರುವ ಪ್ರೊಡಕ್ಷನ್ ಹೌಸ್ ಸಲ್ಲು ಜಾಗಕ್ಕೆ ಮತ್ತೊಬ್ಬ ಬಿಟೌನ್ ಸ್ಟಾರ್ ನಟನನ್ನು ಕರೆತರಲು ತೀರ್ಮಾನಿಸಿದೆ. ಆ ನಟ ಬೇರಾರು ಅಲ್ಲ ಎವರ್‌ಗ್ರೀನ್ ಅನಿಲ್ ಕಪೂರ್(Anil Kapoor).
ಹೌದು, ಬಿಗ್‌ಬಾಸ್ ಓಟಿಟಿ ಮೂರನೇ ಸೀಸನ್ ನಿರೂಪಕನಾಗಿ ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್(Anil Kapoor) ಕಾಣಿಸಿಕೊಳ್ಳುತ್ತಿದ್ದಾರೆ. ಜೂನ್‌ನಲ್ಲಿ ಒಟಿಟಿ ಸೀಸನ್ ಆರಂಭಗೊಳ್ಳಲಿದ್ದು ಸಲ್ಮಾನ್ ಜಾಗಕ್ಕೆ ಅನಿಲ್ ಕಪೂರ್‌ರನ್ನು ಕರೆತರಲಾಗಿದೆ. ಮೊದಲ ಬಾರಿ ಬಿಗ್ ಬಾಸ್ ನಿರೂಪಣೆ ಮಾಡುತ್ತಿರುವ ಅನಿಲ್ ಸಖತ್ ಎಕ್ಸೈಟ್ ಆಗಿದ್ದು, ಈಗಾಗಲೇ ಈ ಬಗ್ಗೆ ಸ್ಟಡಿ ನಡೆಸುತ್ತಿದ್ದು, ಶೋಗೆ ಹೊಸ ಟಚ್ ಕೊಡಲು ಕಾತುರರಾಗಿದ್ದಾರಂತೆ. ಸಲ್ಮಾನ್ ನಿರೂಪಣೆಯಲ್ಲಿ ಬಿಗ್‌ಬಾಸ್ ಅಪ್ಪಿಕೊಂಡಿದ್ದ ಅಭಿಮಾನಿಗಳು ಅನಿಲ್ ಕಪೂರ್ ಹೋಸ್ಟ್‌ಗೆ ಯಾವ ರೀತಿ ಪ್ರತಿಕ್ರಿಯೆಸುತ್ತಾರೆ ಕಾದು ನೋಡ್ಬೇಕು.