‘ದಂತಕಥೆ’ ಎಂಬುದು ಜಾನಪದ ಸಾಹಿತ್ಯದ ಪ್ರಕಾರವಾಗಿದ್ದು, ಇತಿಹಾಸದಲ್ಲಿ ನಡೆದ ಘಟನೆಯನ್ನು, ನಂಬಲಸಾಧ್ಯವಾದ ವಿಷಯಗಳನ್ನೊಳಗೊಂಡಿರುತ್ತದೆ. ‘ಕಾಂತಾರ’ದ ನಂತರ ಸ್ಯಾಂಡಲ್ ವುಡ್ ನಲ್ಲಿ ಇನ್ನೊಂದು ಅಂಥದ್ದೇ ‘ದಂತಕಥೆ’ ಜನ್ಮತಾಳುತ್ತಿದೆ.
ರಘು ಮುಖರ್ಜಿ ಹಾಗೂ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಯಶಾ ಶಿವಕುಮಾರ್ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಚನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾವನ್ನು ‘ಹಲ್ಮಿಡಿ ಪ್ರೊಡಕ್ಷನ್’ ಹಾಗೂ ‘ಜನರತ್ನ ಪ್ರೊಡಕ್ಷನ್’ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಈಗಾಗಲೇ ‘ದಂತಕಥೆ’ ಸಿನಿಮಾದ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇತ್ತೀಚೆಗೆ ಸಿನಿಮಾದ ಟೈಟಲ್ ಪೋಸ್ಟರ್ ಕ್ರೇಜಿಸ್ಟಾರ್ ಬಿಡುಗಡೆಯಾಯಿತು. ನಟ ಕಂ ನಿರ್ದೇಶಕ ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇನ್ನು ಈ ಬಿಡುಗಡೆಯಾಗಿರುವ ‘ದಂತಕಥೆ’ ಸಿನಿಮಾದ ಟೈಟಲ್ ಪೋಸ್ಟರಿನಲ್ಲಿ, ‘ಇನ್ವೆಸ್ಟಿಗೇಷನ್ ಶುರು’ ಎನ್ನುವ ಸಾಲಿದ್ದು, ಸಿನಿಮಾ ತುಂಬಾ ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರಲಿದೆ ಎಂಬುದು ಚಿತ್ರತಂಡದ ಮಾತು.