Anupama Parameswaran: ಮಲಯಾಳಂ ಬ್ಯೂಟಿ ಅನುಪಮಾ ಪರಮೇಶ್ವರನ್(Anupama Parameswaran) ಖ್ಯಾತಿ ‘ಟಿಲ್ಲು ಸ್ಕ್ವೇರ್’ ಸಿನಿಮಾ ನಂತರ ಹೆಚ್ಚಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ‘ಟಿಲ್ಲು ಸ್ಕ್ವೇರ್’ ಕಲೆಕ್ಷನ್ ವಿಚಾರದಲ್ಲೂ ರೆಕಾರ್ಡ್ ಮಾಡಿದೆ. ಈ ಸಿನಿಮಾ ಮೂಲಕ ಪ್ರೇಮಂ ಬ್ಯೂಟಿ ಭೇಡಿಕೆಯೂ ಹೆಚ್ಚಾಗಿದ್ದು, ಇದೀಗ ಹೊಸ ಸಿನಿಮಾದ ಟೈಟಲ್ ಹಾಗೂ ಕಾನ್ಸೆಪ್ಟ್ ವಿಡಿಯೋ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಚಿತ್ರಕ್ಕೆ ‘ಪರದಾ’(Paradha) ಎಂದು ಟೈಟಲ್ ಇಡಲಾಗಿದೆ.
ಸೌತ್ ಬ್ಯೂಟಿ ಸಮಂತ(Samantha) ಹಾಗೂ ಖ್ಯಾತ ನಿರ್ದೇಶಕರಾದ ರಾಜ್(Raj) & ಡಿಕೆ(DK) ಅನುಪಮ ಪರಮೇಶ್ವರನ್ ಹೊಸ ಸಿನಿಮಾದ ಟೈಟಲ್ ಹಾಗೂ ಕಾನ್ಸೆಪ್ಟ್ ವಿಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ‘ಪರದಾ’(Paradha) ಚಿತ್ರದಲ್ಲಿ ಮತ್ತೊಂದು ಡಿಫ್ರೆಂಟ್ ರೋಲ್‌ನಲ್ಲಿ ಅನುಪಮಾ ಪರಮೇಶ್ವರ್ ಕಾಣಿಸಿಕೊಂಡಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದಿದ್ದೆ ಅದರಂತೆ ಪರದಾ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ನಿಮ್ಮ ಮುಂದೆ ಬಂದಿದ್ದೇನೆ ಎಂದು ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ. ಟಿಲ್ಲು ಸ್ಕ್ವೇರ್‌ನಲ್ಲಿ ಬೋಲ್ಡ್ ಹಾಗೂ ಗ್ಲಾಮರಸ್ ಅವತಾರ ತಾಳಿದ್ದ ಮಲಯಾಳ ಚೆಲುವೆ ಈ ಚಿತ್ರದಲ್ಲಿ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
‘ಸಿನಿಮಾ ಬಂದಿ’ ಖ್ಯಾತಿಯ ನಿರ್ದೇಶಕ ಪ್ರವೀಣ್ ಕಂಡ್ರೇಗುಲ್ಲ(Praveen Kandregula) ಕಥೆ ಚಿತ್ರಕಥೆ ಬರೆದು ‘ಪರದಾ’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಗೋಪಿ ಸುಂದರ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಅನುಪಮಾ ಪರಮೇಶ್ವರನ್(Anupama Parameswaran) ಜೊತೆಗೆ ಹೃದಯಂ ಖ್ಯಾತಿಯ ದರ್ಶನಾ ರಾಜೇಂದ್ರನ್, ಸಂಗೀತ ಕೂಡ ಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.