Puneeth Rajkumar: ಕರ್ನಾಟಕ ರತ್ನ, ಪವರ್ ಸ್ಟಾರ್, ಅಭಿಮಾನಿಗಳ ಪ್ರೀತಿಯ ಅಪ್ಪು ಪುನೀತ್ ರಾಜ್ ಕುಮಾರ್(Puneeth Rajkumar). ಅಪ್ಪು ಅಗಲಿಕೆ ಎಂದಿಗೂ ಮಾಸದ ನೋವು. ಅಂತೆಯೇ ಅವರು ಜೀವಂತ ಇದ್ದಾಗ ಮಾಡಿದ ಕಾರ್ಯ ಎಂದಿಗೂ ಮರೆಯದ ಕಾಣಿಕೆ. ಇಂತಹ ಅಪ್ಪು ಜಾತಿ ಧರ್ಮ ಮೀರಿದ ವ್ಯಕ್ತಿತ್ವವನ್ನು ಹೊಂದಿದ್ರು ಅನ್ನೋದಕ್ಕೆ ವೈರಲ್ ಆಗಿರೋ ಆಡಿಯೋ ಸಾಕ್ಷಿಯಾಗಿದೆ.
ಇಂದು ರಂಜಾನ್ ಹಬ್ಬ ಮುಸ್ಲಿಂ ಬಾಂದವರ ಈ ಹಬ್ಬದ ದಿನವೇ ಅಪ್ಪು(Appu) ಆಡಿಯೋ ಒಂದು ವೈರಲ್ ಆಗಿದೆ. ಬಡ ಮುಸ್ಲಿಂ ಬಾಂದವರಿಗೆ ಊಟ ಏರ್ಪಾಡುವಂತೆ ಮಾತನಾಡಿದ ಆಡಿಯೋ ಇದಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆಡಿಯೋ ಕೇಳಿ ಅಪ್ಪು ವ್ಯಕ್ತಿತ್ವದ ಬಗ್ಗೆ ಕೊಂಡಾಡುತ್ತಿದ್ದಾರೆ. ಧರ್ಮದ ಎಲ್ಲೆ ಮೀರಿದ ಮನಸ್ಸು ಎಂದು ಹೊಗಳುತ್ತಿದ್ದಾರೆ. ವೈರಲ್ ಆಡಿಯೋ ಸಖತ್ ಶೇರ್ ಆಗುತ್ತಿದ್ದು ಕಮೆಂಟ್ಗಳ ಸುರಿಮಳೆಯಾಗುತ್ತಿದೆ.
ಅಪ್ಪು(Appu)ಅಗಲಿಕೆ ನಂತರ ಇಂತಹ ನೂರಾರು ಆಡಿಯೋಗಳು ಮುನ್ನೆಲ್ಲೆಗೆ ಬಂದು ವೈರಲ್ ಆಗಿವೆ. ಅಪ್ಪು ಸಹಾಯ ಹಸ್ತ ಚಾಚಿದ್ದು ಯಾರಿಗೂ ತಿಳಿಯುತ್ತಿರಲಿಲ್ಲ. ಯಾರಿಗೂ ತಿಳಿಯದಂತೆ ನೆರವು ನೀಡುತ್ತಿದ್ರು. ಕಾರಣ ಸಹಾಯ ಮಾಡಿ ಅದನ್ನು ಪ್ರಚಾರ ಮಾಡಿಕೊಳ್ಳೋ ಮನಸ್ಥಿತಿ ಅವರದ್ದಾಗಿರಲಿಲ್ಲ. ಆದರೆ ಅವರ ಅಗಲಿಕೆ ನಂತರ ಇದೆಲ್ಲ ಬೆಳಕಿಗೆ ಬರುತ್ತಿದ್ದು, ಅಪ್ಪು ವ್ಯಕ್ತಿತ್ವದ ಮೇಲಿನ ಅಭಿಮಾನ ಅಭಿಮಾನಿಗಳಲ್ಲಿ ಇನ್ನೂ ಹೆಚ್ಚುತ್ತಿದೆ.