ಏಪ್ರಿಲ್ 14 ಯಶ್ 19 ಸಿನಿಮಾ ಆಗುತ್ತಾ? ಆಗೇ ಆಗುತ್ತೆ ಎನ್ನುವ ನಿರೀಕ್ಷೆಯ ಜೊತೆಗೆ ಆಗ್ಲೇಬೇಕು ಎನ್ನುವ ಒತ್ತಾಯ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳದ್ದು. ಅಷ್ಟಕ್ಕೂ, ಏಪ್ರಿಲ್ 14ರಂದೇ ಯಶ್ 19 ಸಿನಿಮಾ ಅನೌನ್ಸ್ ಮೆಂಟ್ ಬಗ್ಗೆ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಳ್ಳೋದಕ್ಕೆ ಕಾರಣ ಕೆಜಿಎಫ್ ಚಾಪ್ಟರ್ 2 ರಿಲೀಸ್ ಆದ ದಿನ ಅದು. ಬಹುಷಃ ಆ ದಿನ ಕೆಜಿಎಫ್ ಮಾಲೀಕರ ಜೊತೆ ಮುಂದಿನ ಸಿನಿಮಾ ಘೋಷಣೆ ಮಾಡಬಹುದು ಅಥವಾ ಬೇರೆ ಸಾರಥಿ ಜೊತೆ ಕೈ ಜೋಡಿಸಿರೋ ಬಗ್ಗೆ ಸುದ್ದಿ ಕೊಡಬಹುದು ಎನ್ನುವ ಕೌತುಕದೊಂದಿಗೆ ರಾಕಿಭಾಯ್ ಬಣದ ಜೊತೆಗೆ ಇಡೀ ಚಿತ್ರಜಗತ್ತೇ ಎದುರುನೋಡ್ತಿದೆ
ಕೆಜಿಎಫ್ 3 ಯಾವಾಗ ಅನ್ನೋದಕ್ಕಿಂತ ಹೆಚ್ಚಾಗಿ ಯಶ್ 19 ಸಿನಿಮಾ ಯಾವುದಾಗಲಿದೆ ಅನ್ನೋದು ಮಿಲಿಯನ್ ಡಾಲರ್ ಸ್ವರೂಪ ಪಡೆದಿದೆ. ಮಾನ್ ಸ್ಟರ್ ಮುಂದಿನ ಸಿನಿಮಾದ ಬಗ್ಗೆ ಚಿತ್ರ ಪ್ರೇಮಿಗಳು ನೂರೆಂಟು ನಿರೀಕ್ಷೆ ಇಟ್ಕೊಂಡು ಕಾಯ್ತಿದ್ದಾರೆ. ಜಗದಗಲದ ನಿಮ್ಮ ನಿರೀಕ್ಷೆಯನ್ನ ಫುಲ್ ಫಿಲ್ ಮಾಡೋದಕ್ಕೆ ನಂಗೆ ಕೊಂಚ ಟೈಮ್ ಬೇಕು. ಅಲ್ಲಿವರೆಗೂ ನಿಮ್ಮ ಪ್ರೀತಿ ಮತ್ತು ತಾಳ್ಮೆಯೇ ನನಗೆ ಹುಟ್ಟುಹಬ್ಬದ ಉಡುಗೊರೆ ಅಂತೇಳಿದ್ದ ಅಣ್ತಮ್ಮ, ಏಪ್ರಿಲ್ 14ರಂದು ಅಧಿಕೃತವಾಗಿ ಹೊಸ ಸಿನಿಮಾ ಘೋಷಣೆ ಮಾಡ್ತಾರಾ? ಚಿತ್ರ ಪ್ರೇಮಿಗಳ ಕಾತುರಕ್ಕೆ ಬಿಗ್ ಬ್ರೇಕ್ ಹಾಕ್ತಾರಾ? ಸದ್ಯಕ್ಕೆ ಉತ್ತರವಿಲ್ಲ. ಆದರೆ, ವಿಶ್ವ ಸಿನಿದುನಿಯಾವನ್ನ ಥಂಡಾ ಹೊಡಿಸೋಕೆ ಸೆಲ್ಫ್ ಮೇಡ್ ಷೆಹಜಾದ ಪ್ರಯತ್ನ ನಿರಂತರವಾಗಿ ನಡೀತಿರೋದಂತೂ ಸತ್ಯ
ಇನ್ನೂ ಕೆಜಿಎಫ್ ಮೂಲಕ ಇಂಟರ್ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿರೋ ರಾಕಿಂಗ್ ಸ್ಟಾರ್ ಯಶ್ ಮುಂದಿನ ಗುರಿ ಏನು? ಅವರ ಟಾರ್ಗೆಟ್ ಏನು ಅನ್ನೋದು ನಿಗೂಢವಾಗಿ ಉಳಿದಿದೆ. ಫಸ್ಟ್ ಗೋಲ್ ಸೆಟ್ ಮಾಡಬೇಕು. ಆ ಗೋಲ್ ಬಗ್ಗೆ ಕೇಳಿದ್ರೇನೇ ಎಲ್ಲರು ಅಚ್ಚರಿ ಪಡಬೇಕು ಎನ್ನುವ ಯಶ್, ಯಾವ ಗೋಲ್ ಸೆಟ್ ಮಾಡಿದ್ದಾರೋ ಗೊತ್ತಿಲ್ಲ. ಆದರೆ, ಇಂಟರ್ ನ್ಯಾಷನಲ್ ಆ್ಯಕ್ಷನ್ ಕೊರಿಯಾಗ್ರಫರ್ ಗಳನ್ನ ಮತ್ತು ಡೈರೆಕ್ಟರ್ ಗಳನ್ನ ಭೇಟಿ ಮಾಡಿದ್ದಾರೆ. ಹಾಲಿವುಡ್ ಟೆಕ್ನಿಷಿಯನ್ಸ್ ಜೊತೆ ಕೈ ಜೋಡಿಸೋ ಕುತೂಹಲ ಮೂಡಿಸಿದ್ದಾರೆ. ಇದರ ಮಧ್ಯೆ ಕೆಲವೊಂದು ಸಂದರ್ಶನಗಳಲ್ಲಿ ಮಾತನಾಡ್ತಾ, ಹಸಿದ ಹೆಬ್ಬುಲಿಗಳ ಜೊತೆ ಕೆಲಸ ಮಾಡೋದಕ್ಕೆ ಎದುರುನೋಡ್ತಿದ್ದಾನೆ ಅಂತ ಹೇಳಿಕೊಂಡಿದ್ದಾರೆ. ಹೀಗಾಗಿ, ಬಜಾರ್ ನಲ್ಲಿ ಕೇಳಿಬರ್ತಿರೋ ಸುದ್ದಿ ನಿಜವಾಗಬಹುದು ಅಂತ ಫ್ಯಾನ್ಸ್ ಹಾಗೂ ಸಿನಿಪಂಡಿತರು ಲೆಕ್ಕಚ್ಚಾರ ಹಾಕ್ತಿದ್ದಾರೆ.
ಅಷ್ಟಕ್ಕೂ ಕೆಜಿಎಫ್ ಹೀರೋ ಕಾಲ್ ಶೀಟ್ ಯಾರಿಗೆ ಸಿಕ್ಕಿದೆ, ಯಶ್ ಯಾರ ಜೊತೆ ಕೈ ಜೋಡಿಸಿದ್ದಾರೆ ಅನ್ನೋ ಪ್ರಶ್ನೆಗೆ ಉತ್ತರವಂತೂ ಸಿಕ್ಕಿಲ್ಲ. ಆದರೆ, ಕಾಶ್ಮೋರ ಸಿನಿಮಾ ಖ್ಯಾತಿಯ ಗೋಕುಲ್, ಇರುಂಬುತಿರೈ ಸಿನಿಮಾದ ನಿರ್ದೇಶಕ ಮಿತ್ರನ್, ದಂಗಲ್ ಡೈರೆಕ್ಟರ್ ನಿತೀಶ್ ತಿವಾರಿ ಹೆಸರು ಕೇಳಿಬರ್ತಿದೆ. ಎನಿವೇ ಒಂದು ವರ್ಷವೇ ಕಾದು ಕುಳಿತಿದ್ದೀರಿ. ಇನ್ನೆರಡು ದಿನ ಕಳೆದರೆ ಏಪ್ರಿಲ್ 14ನ ವೆಲ್ ಕಮ್ ಮಾಡಿಕೊಳ್ತೀರಿ. ಆ ದಿನ ಅಣ್ತಮ್ಮ ಹಬ್ಬದೂಟ ಹಾಕ್ತಾರಾ ? ಹೊಸ ಸಿನಿಮಾ ಅನೌನ್ಸ್ ಮಾಡ್ತಾರಾ ಕಾದುನೋಡೋಣ