Ram Charan: ಟಾಲಿವುಡ್ ಮಗದೀರ, ಗ್ಲೋಬಲ್ ಸ್ಟಾರ್ ರಾಮ್ ಚರಣ್(Ram Charan) ಆರ್‌ಆರ್‌ಆರ್(RRR) ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಮಾಡಿದ್ದಾರೆ. ಶಂಕರ್ ನಿರ್ದೇಶನದ ಗೇಮ್ ಚೇಂಜರ್(Game Changer) ಮೂಲಕ ಬೆಳ್ಳಿ ತೆರೆಮೇಲೆ ಕಮಾಲ್ ಬರಲು ರೆಡಿಯಾಗಿರುವ ಚೆರ್ರಿ ಮುಂದಿನ ಸಿನಿಮಾದ ಲೇಟೆಸ್ಟ್ ಅಪ್ಡೇಟ್ ಹೊರ ಬಿದ್ದಿದೆ.
ಆರ್‌ಆರ್‌ಆರ್(RRR) ಸಿನಿಮಾ ಮೂಲಕ ರಾಮ್ ಚರಣ್ ಲಕ್ ಬದಲಾಗಿದೆ. ಗ್ಲೋಬಲ್ ಲೆವೆಲ್‌ನಲ್ಲಿ ಮಗದೀರನ ಖ್ಯಾತಿ ಹೆಚ್ಚಿದೆ. ಅವರ ಸಿನಿಮಾಗಳತ್ತ ಜನ ಕ್ಯೂರಿಯಾಸಿಟಿಯಿಂದ ನೋಡುತ್ತಿದ್ದಾರೆ. ಸದ್ಯ ಗೇಮ್ ಚೇಂಜರ್ ಶೂಟಿಂಗ್ ಮುಗಿಸಿರುವ ರಾಮ್ ಚರಣ್ ಬುಚ್ಚಿ ಬಾಬು ನಿರ್ದೇಶನದ ಸಿನಿಮಾದತ್ತ ಗಮನ ಹರಿಸಿದ್ದಾರೆ. ಈ ಚಿತ್ರದ ಪ್ರಧಾನ ಅಪ್ಡೇಟ್ ಹೊರ ಬಿದ್ದಿದೆ. ಚೆರ್ರಿ 16ನೇ ಸಿನಿಮಾ ಇದಾಗಿದ್ದು, ಮೊದಲ ಬಾರಿ ಆಸ್ಕರ್ ವಿನ್ನರ್, ಭಾರತೀಯ ಚಿತ್ರರಂಗದ ಸಂಗೀತ ದಿಗ್ಗಜ ಎ. ಆರ್. ರೆಹಮಾನ್(A.R.Rahman) ರಾಮ್ ಚರಣ್ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈ ಸುದ್ದಿ ಮೆಗಾ ಫ್ಯಾಮಿಲಿಯ ಭಕ್ತಗಣವನ್ನು ಸಂತೃಪ್ತಿಗೊಳಿಸಿದೆ. ಈಗಾಗಲೇ ಮೂರು ಸಾಂಗ್‌ಗಳಿಗೆ ರೆಹಮಾನ್ ಫ್ರೆಶ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚು ಮಾಡಿದೆ.
ಉಪ್ಪೇನ ಖ್ಯಾತಿಯ ಬುಚ್ಚಿ ಬಾಬು ಸಿನಿಮಾದಲ್ಲಿ ಮೆಗಾ ಪವರ್ ಸ್ಟಾರ್ ನಾಯಕಿಯಾಗಿ ಬಿಟೌನ್ ಚೆಲುವೆ ಜಾನ್ವಿ ಕಪೂರ್(Janhvi kapoor) ನಟಿಸುತ್ತಿದ್ದಾರೆ. ಗೇಮ್ ಚೇಂಜರ್ ಶೂಟಿಂಗ್ ಮುಗಿಸಿರುವ ರಾಮ್ ಚರಣ್ ಇದೇ ತಿಂಗಳಲ್ಲಿ ಬುಚ್ಚಿ ಬಾಬು ತಂಡವನ್ನು ಸೇರಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಸ್ಪೋರ್ಟ್ಸ್ ಮೆನ್ ಆಗಿ ಚೆರ್ರಿ ಬಣ್ಣ ಹಚ್ಚುತ್ತಿದ್ದಾರೆ.