‘ನಮ್ಮ ಸಿನಿಮಾ’ ಬ್ಯಾನರ್ ನಡಿ ಅದ್ವೈತ್ ಪ್ರಭಾಕರ್, ಆರ್. ರಾಮಚಂದ್ರ, ಸತ್ಯ ರಾಣಿ ಜಿ. ಮತ್ತು ರಚನಾ ಬಿ. ಹೆಚ್. ನಿರ್ಮಾಣದ ‘ಅನಾವರಣ’ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ‘ಏನಾಗಿದೆ…’ ಎಂಬ ಪ್ರೇಮಗೀತೆಗೆ ಶಶಿಕುಮಾರ್ ಬೆಳವಾಡಿ ಸಾಹಿತ್ಯ ಬರೆದಿದ್ದು, ವಿಶಾಲ್ ಸಿ. ಕೃಷ್ಣ ಟ್ಯೂನ್ ಹಾಕಿದ್ದಾರೆ. ಅರ್ಜುನ್ ಯೋಗಿ, ಸಾರಿಕಾ ರಾವ್ ಹಾಡಿನಲ್ಲಿ ಮಿಂಚಿದ್ದಾರೆ.
‘ಅನಾವರಣ’ ಸಿನಿಮಾದಲ್ಲಿ ಅರ್ಜುನ್ ಯೋಗಿ, ಸಾರಿಕಾ ರಾವ್ ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದು, ಉಳಿದಂತೆ ಗೌರೀಶ್ ಅಕ್ಕಿ, ನಂದ ಗೋಪಾಲ್, ಹೊನ್ನವಳ್ಳಿ ಕೃಷ್ಣ, ರಥ ಸಪ್ತಮಿ ಅರವಿಂದ್, ಕಾಮಿಡಿ ಕಿಲಾಡಿ ಸೂರಜ್, ಸೂರ್ಯ, ಸಂತು, ವಾಣಿ, ರಾಜೇಶ್ವರಿ, ಕಮಲಾ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಫ್ಯಾಮಿಲಿ ಡ್ರಾಮಾ ಜೊತೆಗೆ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಅನಾವರಣ’ ಹರೀಶ್ ಕುಮಾರ್, ಮಂಜುನಾಥ್ ಪಿಳ್ಳಪ್ಪ ಇಬ್ಬರು ಆ್ಯಕ್ಷನ್-ಕಟ್ ಹೇಳಿದ್ದಾರೆ. ವೆಂಕಿ ಸಂಕಲನ, ಶಶಿಕುಮಾರ್ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿದೆ. ಸದ್ಯ ಶೂಟಿಂಗ್ ಮುಗಿಸಿ ಸೆನ್ಸಾರ್ ಅಂಗಳದಲ್ಲಿರುವ ‘ಅನಾವರಣ’ ಸಿನಿಮಾವನ್ನು ಶೀಘ್ರದಲ್ಲಿಯೇ ತೆರೆಗೆ ತರಲು ಚಿತ್ರತಂಡ ಸಿದ್ದತೆ ಮಾಡಿಕೊಳ್ಳುತ್ತಿದೆ.