Amitabh Bachchan: ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಕಲ್ಕಿ’(Kalk2898). ಕೇವಲ ಪ್ರಭಾಸ್ ಇದ್ದಾರೆ ಅನ್ನೋ ಕಾರಣಕ್ಕೆ ಮಾತ್ರ ಈ ಸಿನಿಮಾ ಸುದ್ದಿಯಲ್ಲಿಲ್ಲ. ಇಂಡಿಯನ್ ಸೂಪರ್ ಸ್ಟಾರ್ ಬಿಗ್ ಬಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್(Kamal Haasan), ದೀಪಿಕಾ ಪಡುಕೋಣೆ(Deepika Padukone)ಒಳಗೊಂಡ ದಿಗ್ಗಜರ ಸಮಾಗಮವಿರುವ ಸಿನಿಮಾವಿದು. ಬಿಡುಗಡೆಗೆ ಸಜ್ಜಾಗಿರುವ ಚಿತ್ರದ ‘ಅಶ್ವತ್ಥಾಮ’ ಲುಕ್ ರಿವೀಲ್ ಮಾಡಿದೆ ಚಿತ್ರತಂಡ.
ಅಮಿತಾಬ್ ಬಚ್ಚನ್(Amitabh Bachchan) ‘ಕಲ್ಕಿ’(Kalk2898) ಸಿನಿಮಾದಲ್ಲಿ ‘ಅಶ್ವತ್ಥಾಮ’ನ ಅವತಾರ ತಾಳಿದ್ದಾರೆ. ಚಿತ್ರತಂಡ ಅಶ್ವತ್ಥಾಮ ಲುಕ್ ರಿವೀಲ್ ಮಾಡಿದೆ. ಟೀಸರ್ ತುಣುಕಲ್ಲಿ ಬಿಗ್ ಬಿ ಕಂಡು ಥ್ರಿಲ್ ಆಗಿದೆ ಸಿನಿ ಲೋಕ. ಯಂಗ್ ಲುಕ್‌ನಲ್ಲಿ ಕಾಣಿಸಿಕೊಂಡ ಅಮಿತಾಬ್ ನೋಡಿ ಬೆರಗಾಗಿದ್ದಾರೆ ಅಭಿಮಾನಿಗಳು. ಇದೆಲ್ಲಾ ಸಾಧ್ಯವಾಗಿದ್ದು ‘ಡಿ ಏಜಿಂಗ್’ ಟೆಕ್ನಾಲಜಿ ಮೂಲಕ. ಈ ಟೆಕ್ನಾಲಜಿ ಬಳಸಿ ಅಮಿತಾಬ್‌ರನ್ನು ಚಿರ ಯುವಕನನ್ನಾಗಿ ತೋರಿಸಲಾಗಿದೆ. ಸದ್ಯ ಈ ಟೀಸರ್ ಟ್ರೆಂಡಿಂಗ್‌ನಲ್ಲಿ ‘ನಂಬರ್ ಒನ್’ನಲ್ಲಿದೆ. ಇದರ ಜೊತೆಗೆ ‘ಕಲ್ಕಿ’(Kalk2898) ಮೇಲಿನ ನಿರೀಕ್ಷೆಯೂ ಹೆಚ್ಚಾಗಿದೆ.
‘ಕಲ್ಕಿ’ಯಲ್ಲಿ ಪ್ರಭಾಸ್(Prabhas) ಬೈರವ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಆರು ಸಾವಿರ ವರ್ಷಗಳ ಹಿಂದಿನ ಕಥೆಗೆ ಸಿನಿಮ್ಯಾಟಿಕ್ ರೂಪ ನೀಡ ಹೊರಟಿದ್ದಾರೆ ನಿರ್ದೇಶಕ ನಾಗ್ ಅಶ್ವಿನ್(Nag Ashwin). ದಿಶಾ ಪಟಾನಿ, ದೀಪಿಕಾ ಪಡುಕೋಣೆ(Deepika Padukone) ‘ಕಲ್ಕಿ’ಯಲ್ಲಿ ಬಣ್ಣ ಹಚ್ಚಿದ್ದಾರೆ. ಬಹು ತಾರಾಗಣದ ಈ ಚಿತ್ರವನ್ನು 600 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ವೈಜಯಂತಿ ಮೂವೀಸ್ ಬ್ಯಾನರ್‌ನಡಿ ಸಿನಿಮಾ ನಿರ್ಮಾಣವಾಗಿದ್ದು, ಮೇ 9ಕ್ಕೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.