ನಮ್ಮಲ್ಲಿ ಎಂಎಸ್‌ಐಎಲ್ ಮರಳ ಚೀಲಗಳು ಬೇಜಾನ್ ನ್ಯೂಸ್ ಮಾಡಿದರೆ ಜರ್ಮನಿಯಲ್ಲೂ ‘ಮರಳು’ ಸುದ್ದಿ ಮಾಡುತ್ತಿದೆ. ಆದರೆ ಅಲ್ಲಿ ಮನೆ ಕಟ್ಟಲು ಮರಳು ಬಳಸುತ್ತಿಲ್ಲ. ಮನಸ್ಸು ಕಟ್ಟಲು ಮರಳು ಬಳಸಲಾಗುತ್ತಿದೆ. ಹೌದು! ಅಲ್ಲಿನ ೨೦೦ ಶಾಲೆಗಳಲ್ಲಿ ಈ ಮರಳುಳ್ಳ ವೆಸ್ಟ್ಸ್ ಬಳಸುತ್ತಿವೆ. ಈ ನಡುವಂಗಿಗಳಲ್ಲಿ ಸುಮಾರು ೧.೨ ಕೆ.ಜಿ.ಗಳಿಂದ ೬ ಕೆ.ಜಿ.ಗಳವರೆಗೆ ಮರಳು ತುಂಬಿರಲಾಗುತ್ತದೆ. ಎಲ್ಲಾದ್ರೂ ಮಣ್ಣು ಹೊರಕ್ಕೆ ಹೋಗು ಅಂತಾರಲ್ಲಾ ಹಾಗಾ ಅಥವಾ ಮಕ್ಕಳಿಗೆ ‘ಮರಳು’ ಹೊರುವ ಶಿಕ್ಷೆಯೇ. ಇಲ್ಲ. ಹಲವು ಮಕ್ಕಳು ‘ಅತಿ ಕಾರ್ಯಕ್ಷಮತೆ-ಗಮನಕೊರತೆ’ ಅಂದರೆ ಂಣಣeಟಿಣioಟಿ ಜeಜಿiಛಿiಣ hಥಿಠಿeಡಿಚಿಛಿಣiviಣಥಿ ಜisoಡಿಜeಡಿ (ಂಆಊಆ), ಕಾಯಿಲೆಯಿಂದ ಚಡಪಡಿಸುತ್ತಿದ್ದಾರೆ. ಅಂಥಹ ಮಕ್ಕಳಿಗೆ ಹೀಗೆ ಮರಳು ನಿಲುವಂಗಿ ಧರಿಸಿದಲಿಓದಿನತ್ತ ಆಸಕ್ತಿ ಸೆಳೆಯಲು ಸಹಕಾರಿಯಂತೆ.
ದೇವರಾಣಿಗ್ಲೂ ಬಹುದೊಡ್ಡ ಸಮಸ್ಯೆಯಲ್ಲ. ಹಲವಷ್ಟು ಮಕ್ಕಳಲ್ಲಿ ಅತಿಯಾದ ಚಟುವಟಿಕೆಗಳಿರುತ್ತವೆ. ನಿಜಕ್ಕೂ ಅವರಿಗೊಲಿದ ಪ್ರತಿಭೆಯೇ ಸರಿ. ಆದರೆ ಅವರು ಒಂದು ವಿಷಯದತ್ತ ಕೆಲವು ನಿಮಿಷಗಳಿಗೂ ಗಮನ ಕೊಡಲಾರರು. ಪಾಠದ ವಿಷಯಕ್ಕೆ ಬಂದಾಗ ಆಟಕ್ಕೆ, ಆಟದಲ್ಲಿದ್ದಾಗ ಕೆಲವೇ ಕ್ಷಣದ ನಂತರ ತುಂಟಾಟಕ್ಕೆ, ಮತ್ತೊಂದೆರಡು ಕ್ಷಣದ ತರುವಾಯ ಇನ್ನೋನೋ ಚಟುವಟಿಕೆಯಲ್ಲಿ ತೊಡಗುವುದು ಮಾಡುತ್ತಾರೆ. ಹೀಗಾದಲ್ಲಿ ಅವರ ಓದಿಗೆ ಕಷ್ಟವೆಂದು ಭಾವಿಸಿ ಜರ್ಮನಿ ಶಾಲೆ ಹೀಗೆ ಮರಳು ಹೊರಸಲು ಹೊರಟಿದೆ. ನಿಜಕ್ಕೂ ಇದರಿಂದ ಪ್ರಯೋಜನವಾಗುತ್ತದೆಯೇ? ಮನೋ ವಿಜ್ಞಾನಿಗಳಲ್ಲಿ ಏಕಾಭಿಪ್ರಾಯವಿಲ್ಲ. ಕೆಲವು ಪೋಷಕರು ಮರಳ ನಡುವಂಗಿಯ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ಸುದ್ದಿ ಓದುವ ವೇಳೆಗೆ ಅಂಗಿಗಳಿಗೆ ನಿಷೇಧ ಬಿದ್ದರೂ ಅಚ್ಚರಿಯಿಲ್ಲ. ನಮ್ಮ ಶಾಲೆಗಳವರಿಗೆ ಈ ಸಂಗತಿ ತಿಳಿದರೆ? ಕಡ್ಡಾಯಗೊಳಿಸಿ ಪೋಷಕರಿಗೆ ಜೋಬಿಗೆ ಭಾರ ಮಕ್ಕಳಿಗೆ ಮೈ ಭಾರ ಮಾಡಲಿದ್ದಾರೆ.
ಕಲೆಯ ಕಲೆ!
ಟೀ ಬಿದ್ದ ಕಲೆ ಸುಲಭವಾಗಿ ಹೋಗಲ್ಲ ಅಂತಾರೆ. ಹಿಂಡಿ ಎಸೆದ ಪುಟ್ಟ ಟೀ ಚೀಲ ತ್ಯಾಜ್ಯವಾದೀತು. ಇನ್ನೂ ಹೆಚ್ಚೆಂದರೆ ಮತ್ತೊಮ್ಮೆ ಅದರಲ್ಲಿ ಚಹಾಪುಡಿ ತುಂಬಿ ಬಳಸಬಹುದು. ಅದೆಲ್ಲವೂ ಸಾಮಾನ್ಯ ಜ್ಞಾನವಾದೀತು. ಆದರೆ, ಕಲಾವಿದೆ ರುಬಿ ಸಿಲಿವೊಯಸ್ ಟೀ ಚೀಲಗಳ ಮೇಲೆ ಚಿತ್ರ ಬಿಡಿಸಿದ್ದಾಳೆ. ಒಂದಿಕ್ಕಿಂತ ಒಂದು ಚಂದವಾಗಿವೆ. ೩ ವರ್ಷಗಳ ಹಿಂದೆ ರುಬಿ ‘೩೬೩ ಡೇಸ್ ಆಫ್ ಟಿ’ ಎಂಬ ಟಿ ಬ್ಯಾಗ್‌ಗಳ ಮೇಲೆ ಚಿತ್ರಗಳನ್ನು ಬಿಡಿಸುವ ಯೋಜನೆ ರೂಪಿಸಿದಳು. ಸತತ ೩೬೩ ದಿನಗಳ ಕಾಲ ಚಿತ್ರ ಬಿಡಿಸಿದಳು. ಅವಳ ಗೆಳೆಯ/ಗೆಳತಿಯರೆಲ್ಲಾ ವಿವಿಧ ಅಳತೆಯ ಟೀ ಬ್ಯಾಗ್‌ಗಳನ್ನು ಕಳುಹಿಸಿಕೊಟ್ಟರು. ಎಲ್ಲತರ ಮೇಲೆ ಚಿತ್ರ ಬಿಡಿಸಿಟ್ಟಳು. ಆನಂತರ ೨೦೧೬-೨೦೧೭ರಲ್ಲೂ ಜಪಾನ್, ಫ್ರಾನ್ಸ್‌ಗಳೆಲ್ಲಾ ೫೨ ವೀಕ್ಸ್ ಟೀ, ೨೬ ಡೇಸ್ ಆಪ್ ಟಿ… ಎಂದೆಲ್ಲಾ ಹಲವು ದೇಶಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದಳು. ಜನಾಪೇಕ್ಷೆಯ ಟೀ ಸಂಚಿಗಳ ಮೇಲೆ ಕಲೆ ಅರಳಿಸಿದಳು.
ಏನು ಪುಗಸಟ್ಟೆ ನಾ? ಲೊಟ್ಟೆ…! ೧೭೫, ೨೦೦, ೩೦೦ ಹೀಗೆ ಧಾರಣೆ ಇಟ್ಟಿದ್ದಾಳೆ. ಟೀ-ನೂ ಇವಳದ್ದಲ್ಲ. ಟೀ ಬ್ಯಾಗ್ ಇವಳದ್ದಲ್ಲ ಥಟಕಿನ ಟೀ ಚೀಲಗಳ ಮೇಲೆ ಚಿತ್ರ ಬಿಡಿಸಿ ಬೇಜಾನ್ ಹಣ ಗಬರಿದ್ದಾಳೆ ರುಬಿ. ಕಸವಾಗಬೇಕಿದ್ದ ಟಿ. ಬ್ಯಾಗ್‌ಗಳ ಮೇಲಿನ ಕಲೆ ಅರಳಿಸಿದ ಕಲೆಗಾತಿ ರುಬಿ ಅಮೆರಿಕದ ನ್ಯೂಯಾರ್ಕ್ ಮೂಲದವಳು. ಕೊಳ್ಳೋರು ಇರೋವರೆಗೂ ಕಲೆ ಅರಳಿಸೋರು ಇದ್ದೇ ಇರ್ತಾರೆ ಅಲ್ವಾ? ಚರ್ಮತ್ಕಾರಿ
ನಾಕಾರು ಕಿಂಗ್ ಸೈಜ್ ಕ್ಲಿಪ್‌ಹಾಕಿ ಹಿಡಿದು ಜಗ್ಗಿದರೂ ಈತ ‘ಕಿಟಾರ್’ ಕಿರುಚಿಕೊಳ್ಳುವುದಿಲ್ಲ. ಚೀತ್ಕರಿಸುವುದಿಲ್ಲ. ಏಕಕಾಲಕ್ಕೆ ದೇಹದ ವಿವಿಧ ಭಾಗಗಳಲ್ಲಿ ಚರ್ಮ ಹಿಡಿದೆಳೆದರೂ ನೋವು-ಬಾವು ಎನ್ನುವುದಿಲ್ಲ…. ಮೌನವಾಗಿ ಅತ್ತು ಬೇನೆ ನೀಗಿಕೊಳ್ಳುವುದಿಲ್ಲ. ಕೆನ್ನೆಯ ಚರ್ಮ ೨-೩ ಇಂಚು ಎಳೆದರು ನೋವೆನ್ನುವುದಿಲ್ಲ. ಕುತ್ತಿಗೆ ಚರ್ಮ ಹಿಡಿದು, ಈತ ಮೂತಿ ಮುಚ್ಚಿಕೊಳ್ಳುವ ರೀತಿ ಸೂಪರ್. ಹೊಟ್ಟೆಯ ಮೇಲಿನ ಜೋತು ಬಿದ್ದ ಚರ್ಮದಿಂದ ಹೊಕ್ಕಳು ಮುಚ್ಚಿಕೊಳ್ಳುತ್ತಾನೆ… ದೇಹದ ಮೇಲು ಭಾಗ ಮಾತ್ರವಲ್ಲದೆ, ಮೊಣಕಾಲ ಕೆಳಗಿನ ಚರ್ಮ ಹಿಡಿದು ಮೇಲಕ್ಕೆ ಎತ್ತುತ್ತಾನೆ…
ತನ್ನ ಚರ್ಮವನ್ನು ಹಿಡಿದೆಳೆಯಲು ಯಾರಿಗೆ ಬೇಕಿದ್ದರು ಅವಕಾಶ ಮಾಡಿಕೊಡುತ್ತಾನೆ. ಹೀಗೆಲ್ಲಾ ಮಾಡುತ್ತಲೇ ಅಷ್ಟಾವಕ್ರನ ಅಪರಾವತಾರಿ ನಗುತ್ತಿರುತ್ತಾನೆ. ಈತನ ಚರ್ಮದ ಮರ್ಮ ತಿಳಿದಿಲ್ಲ. ವಿಜ್ಞಾನಕ್ಕೆ ಈತ ವಿಸ್ಮಯ. ಆದರೆ ಇವನಿಂದಿಲ್ಲ ಮನುಕುಲಕ್ಕೆ ಅಪಾಯ. ಇವನ ಚರ್ಮಹಿಗ್ಗಾಟವನ್ನು ‘ಗಿನ್ನೀಸ್’ನ ಮಂದಿ ದಾಖಲೆ ಮಾಡಿಕೊಂಡಿದ್ದಾರೆ. ಈ ಚರ್ಮಚಮತ್ಕಾರಿಯ ಗ್ಯಾರಿ ಸ್ಟ್ರೆಚ್ ಟರ್ನರ್ ಆಸ್ಟ್ರೇಲಿಯದಲ್ಲಿ ಕಾಣಲು ಸಾಧ್ಯ.
ಒಂದು ಕಾಲಕ್ಕೆ ಸರ್ಕಸ್ ಕಂಪೆನಿಯೊಂದರಲ್ಲಿ ಕಲಾವಿದನಾಗಿದ್ದ. ಲಂಡನ್‌ನನ ಪ್ರತಿಷ್ಠಿತ ರಾಯಲ್ ಕಾಲೇಜ್‌ನ ವಿಶೇಷ ವ್ಯಕ್ತಿಗಳ ವಿಭಾಗದ ಸದಸ್ಯನಾಗಿದ್ದು ಅಲ್ಲಿ ಪ್ರದರ್ಶನ ನೀಡುತ್ತಿದ್ದಾನೆ.
ಹಳ್ಳಕ್ಕಿಳಿಸುವ ತಂತ್ರಜ್ಞಾನ!
ತಂತ್ರಜ್ಞಾನವಷ್ಟೇ ನಂಬಿದರೆ ಹಳ್ಳ ಹಿಡಿಬೇಕಾದೀತು. ಸಾಮಾನ್ಯ ಜ್ಞಾನದೊಂದಿಗೆ ವಿಜ್ಞಾನವಿದ್ದಲ್ಲಿ ಮಾತ್ರ ಅಜ್ಞಾನ ನೀಗೀತು. ಸುಜ್ಞಾನ ಅರಳೀತು… ಪರತತ್ವದೊಂದಿಗೆ ಪ್ರಪಂಚ ಜ್ಞಾನದ ಈ ನೀತಿ ಪಾಠ ಏಕೆಂದರೆ… ಟೆಕ್ ಅವಲಂಬಿತ ಮೂರು ಆದ್ಮಿಗಳು ಕಾರ್ ಏರಿ ಅಮೆರಿಕದ ನಾರ್ತ್ ಈಸ್ಟ್ರನ್ ರಾಜ್ಯ ವೆರ್‍ಮೋಟ್‌ಗೆ ತೆರಳುತ್ತಿದ್ದರು. ಹಳ್ಳಿಗರನ್ನು ಹಾದಿ ಹೋಕರನ್ನು ಕೇಳಿಕೊಂಡು ತೆರಳಬಹುದಿತ್ತು. ಆದರೆ ಜಿಪಿಎಸ್ ತಂತ್ರಜ್ಞಾನದ ಮ್ಯಾಪ್ ಹಾಕಿಕೊಂಡು ತೆರಳಿದರು. ಗೂಗಲ್ ‘ಅವರಿಗೆ ನೇರವಾಗಿ ತೆರಳಿ ದೋಣಿ ತಂಗುವ ಜಾಗದಲ್ಲಿ ಇಳಿಯಿರಿ’ ಎಂದು ಸೂಚಿಸಿತು. ಆಗಲೂ ಈ ‘ಮುಗ್ಗರು ಮೂರ್ಖರಿಗೆ ತಲೆ ಓಡಲೇ ಇಲ್ಲ.
ಜಿಪಿಎಸ್ ಸೂಚನೆಯಂತೆ ಕಾರಿನಲ್ಲಿಯೇ ತೆರಳಿದರು. ಅದು ಐಸ್ ತುಂಬಿದ ಕೆರೆಯಾಗಿತ್ತು. ನೀರಿಗಿಳಿದ ಮೇಲೆ ಡ್ರೈವರ್‌ಗೆ ನೀರಿಗಿಳಿದಿರುವ ಬಗೆಗೆ ಜ್ಞಾನೋದಯವಾಯಿತು!. ಹಿಮಗಡ್ಡೆಗಳಿದ್ದ ಕಾರಣ ಕಾರು ಮುಳಗಲಿಲ್ಲ. ಮೂವರು ಅಪಾಯದಿಂದ ಪಾರಾದರು. ಇದು ಇದೇ ಜನವರಿ ೨೦೧೮ರ ನ್ಯೂಸ್ ಆದರೆ ಮೇ ೨೦೧೬ರಲ್ಲಿ ಕೆನಡಾದ ೨೩ರ ಯುವತಿ ಜಿಪಿಎಸ್ ತಂತ್ರಜ್ಞಾನ ಅವಲಂಬಿಸಿ ಯಡವಟ್ಟು ಮಾಡಿಕೊಂಡಿದ್ದಳು. ಅವಳಿಗೂ ಹಿಮದ ಗಡ್ಡೆಯೇ ಜೀವನಕೊಟ್ಟಿತ್ತು. ೨೦೧೧, ೨೦೧೨ರಲ್ಲೂ ಜಿಪಿಎಸ್ ತಂತ್ರಜ್ಞಾನ ನಂಬಿ ಹಳ್ಳಕ್ಕಿಳಿದವರಿದ್ದಾರೆ. ಸಂಶೋಧನೆ: ಮುಂದುವರೆದ ದೇಶಗಳಲ್ಲೂ ನಮ್ಮಂತೆಯೇ ರಸ್ತೆಯ ಅಂಚಿನಲ್ಲಿರುವ ಕೆರೆಗಳಿಗೆ ಬೇಲಿ, ಅಥವಾ ಗೋಡೆ ನಿರ್ಮಿಸುವುದಿಲ್ಲ!
ಈ ಮಣ್ಣು ಚೆನ್ನಾ…
‘ಅಯ್ಯಾ… ಲೇಯ್… ನಿನ್ ಬಾಯಿಗೆ ಮಣ್ಣು ಹಾಕ’ ಎಂದರೆ ಕೋಪ ಬರುವುದು ಸಹಜ. ಆದರೆ ನಮ್ಮ ಕರುನಾಡಿನ ಫಕೀರಪ್ಪ ಹುನಗುಂದಿಗೆ ಕೋಪ ಬಾರದು. ಏಕೆಂದರೆ ಈತ ತಿನ್ನುವುದು ಮಣ್ಣನ್ನೇ. ಅದರ ಹೊರತಾಗಿ ಇಟ್ಟಿಗೆ, ಕಲ್ಲಿನಚೂರು, ಕಲ್ಲಿದ್ದಲು ಇವನ ಆಹಾರ. ಚಿಕನ್-ಮಟನ್ ಕೂಡ ‘ಒಲ್ಲೆ’ ಎನ್ನುತ್ತಾನೆ. ೧೦ ವರ್ಷದ ಬಾಲಕನಾಗಿದ್ದಾಗ ಶುರುವಾದ ಚಾಳಿ ೩೧ ದಾಟಿದರೂ ಮಣ್ಣಿನ ಮೋಹ ತಗ್ಗಿಲ್ಲ. ಇವನ ತಾಯಿ ಅನ್ನ, ಚಿಕನ್ -ಮಟನ್ ಕೊಟ್ಟರೂ ಬೇಡವೆನ್ನುತ್ತಾನೆ. ತಣ್ಣನೆಯ ಐಸ್‌ಕ್ರೀಂಗೂ ಈತ ಅಪೇಕ್ಷೆ ಪಡುವುದಿಲ್ಲ. ಉದರ ಬೇನೆಯಾಗಲಿ, ಹಲ್ಲಿನ ಸಮಸ್ಯೆಯಾಗಲಿ ಕಾಡಿಲ್ಲ. ವಿಜ್ಞಾನಕ್ಕೆ ಸವಾಲಾಗಿದ್ದಾನೆ.
ಈ ದೇಶದಲ್ಲಿ ಯಾರ್‍ಯಾರೋ ನಾನು ಮಣ್ಣಿನ ಮಗ ಎಂದು ಹೇಳಿಕೊಳ್ಳುತ್ತಾರೆ. ಆದರೆ ಇವನೇ ಅಸಲಿ. ಉಳಿದವರೆಲ್ಲಾ ನಕಲಿಯಲ್ಲವೇ? ತಲೆ ಹರಟೆ ಎಲ್ಲಾ ಬೇಡ ವಿಜ್ಞಾನ ಏನನ್ನುತ್ತದೆ? ‘ಪಿಕಾ’ ಎಂಬ ಮಾನಸಿಕ ಸಮಸ್ಯೆಯಾಗಿದ್ದು ಪೌಷ್ಟಿಕಾಂಶಗಳ ಕೊರತೆಯಿರುವ ವಸ್ತುಗಳನ್ನು ತಿನ್ನಲು ಅಪೇಕ್ಷೆ ಪಡುತ್ತಾರಂತೆ. ಇಂತಹವರಿಗೆ ಚಿಕಿತ್ಸೆ ಸುಲಭವಲ್ಲ. ತೊಂದರೆ ಏನೂ ಕಾಡದ ಕಾರಣ ಹಿತವಾಗಿದ್ದಾನೆ ಫಕೀರಪ್ಪ – ಇರಲಿ ಬಿಡಿ… ಕೂಲಿ, ಕಟ್ಟಡ ಕಾರ್ಮಿಕನಾಗಿರುವ ಫಕೀರಪ್ಪ ಗದಗ ಜಿಲ್ಲೆಯ ನಿವಾಸಿಯಾಗಿದ್ದು ಕರುನಾಡಿನ ಮಣ್ಗುಣ ಸಾರುತ್ತಿದ್ದಾನೆ. ‘ಈ ಮಣ್ಣು ಚೆನ್ನಾ… ಈ ಮಣ್ಣು ಚಿನ್ನಾ…’ ಹಾಡು ಇವನ ಮೆಚ್ಚಿನ ಗೀತೆಯಾಗಿರಬಹುದು!
ಟರ್ಟಲ್ ಟ್ಯಾಕ್ಸಿ….
ಜಪಾನಿಯರಿಗೆ ಆಮೆಯೇ ಮಾದರಿ. ನಿಧಾನವೇ ಪ್ರಧಾನ ಎನ್ನುತ್ತಿದ್ದಾರೆ. ಎಲ್ಲಾ ದಾನಗಳಲ್ಲೂ ನಿಧಾನವೇ ಶ್ರೇಷ್ಠ ಎಂಬುದು ಕುಬ್ಬಜ್ಜ ಜಪಾನಿಯರ ನಂಬಿಕೆ. ಪ್ರಗತಿ ಎಂದರೆ ವೇಗ. ಅದರಲ್ಲೂ ರಾಕೆಟ್ ವೇಗದಲ್ಲಿ ಚಲಿಸಬೇಕು. ಅಂತಿರುವಾಗ ಆಮೆ ವೇಗದಲ್ಲಿ ಚಲಿಸುವ ಟರ್ಟಲ್ ಟ್ಯಾಕ್ಸಿಯನ್ನು ರಸ್ತೆಗೆ ಇಳಿಬಿಡಲಾಗಿದೆ. ತುರ್ತು ಸೇವೆ ಬಯಸುವವರಿಗೆ ಲಭ್ಯವಾಗುವುದಿಲ್ಲ. ಮಂದಗತಿಯಲ್ಲಿ ಸಾಗುವರಿಗೆ ಮಂದಹಾಸ ಮೂಡಿಸುತ್ತದೆ. ೨೦೧೩ರ ಡಿಸೆಂಬರ್ ತಿಂಗಳಲ್ಲಿ ಜಪಾನ್‌ನ ಓಕಾಹಾಮದಲ್ಲಿ ಓಟ ಆರಂಭಿಸಿತು. ಇಂದಿಗೂ ಇದರ ಸೇವೆ ಹಿಂಪಡೆದಿಲ್ಲ. ಬದಲಿಗೆ ಪ್ರತಿ ನಿತ್ಯ ಇದರ ಬಳಕೆ ಹೆಚ್ಚುತ್ತಲೇ ಇದ್ದು, ಪ್ರಸಿದ್ಧಿ ಏರುಗತಿಯಲ್ಲಿದೆ. ಹಿರಿಯರು, ಗರ್ಭಿಣಿಯರು, ರೋಗಿಗಳು, ಪ್ರವಾಸಿಗರಿಗೆ ಅಚ್ಚು ಮೆಚ್ಚು.
ಈ ಆಮೆ ಟ್ಯಾಕ್ಸಿ ಏರಿದ ತಕ್ಷಣ ಅಲ್ಲಿರುವ ‘ಯುಕುರಿ’ ಬಟನ್ ಒತ್ತಬೇಕು. ಅಂದರೆ ನಿಧಾನವಾಗಿ ಚಲಿಸು ಎಂದು ಡ್ರೈವರ್‌ಗೆ ಸೂಚನೆಯದು. ಅದನ್ನು ಆತ ಕಟ್ಟುನಿಟ್ಟಾಗಿ ಪಾಲಿಸುತ್ತಾನೆ. ಈ ಆಮೆ ವೇಗ ಎಷ್ಟಿರುತ್ತದೆಂದರೆ ಸಾಕ್ಷಾತ್ ಆಮೆಯೇ ನಾಚಿಕೊಳ್ಳುವಷ್ಟು ನಿಧಾನವಾಗಿರುತ್ತದೆ. ಈ ಕಾರಣಕ್ಕಾಗಿಯೇ ಇದು ಫೇಮಸ್ ಆಗಿರಬೇಕು. ‘ಅತಿ ವೇಗ-ತಿಥಿ ಬೇಗ’ ಎಂಬ ಮಾತು ಬದಲಿಸಿ ‘ಆಮೆ ವೇಗ – ಪ್ರಸಿದ್ಧಿ ಬೇಗ’ ಎಂದು ಟಿ.ಟಿ. ಡ್ರೈವರ್‌ಗಳು ಹೇಳಿಕೊಳ್ಳುತ್ತಿರಬಹುದು. ನಮ್ಮ ಬೆಂಗಳೂರಿನ ವಾಹನದಟ್ಟಣೆಯೂ ನಮ್ಮನ್ನು ಇದೇ ಸ್ಪೀಡಿನಲ್ಲಿ ಸಾಗುವಂತೆ ಮಾಡುತ್ತಿದೆಯಲ್ಲವೇ? ಬಲಗಾಲಿಟ್ಟು ಬೆಟ್ಟ ಏರು…
ನಾವು … ತಿರುಪತಿ, ಮಾದೇಶ್ವರ, ಮುಂತಾದ ಬೆಟ್ಟ ಏರುವಾಗ ಬಲಗಾಲಿಟ್ಟು ಬೆಟ್ಟ ಏರುತ್ತೇವೆ. ನಾರ್ವೆ ಜನರೂ ಅಷ್ಟೇ ರೀ… ಒಂದು ವೇಳೆ ಸೈಕಲ್‌ನಲ್ಲಿ ಬಂದರೆ? ಅವರೂ ಅಷ್ಟೇ…ಬಲಗಾಲಿಟ್ಟೇ ಹೋಗಬೇಕು. ರಿಯಲಿ? ಒಂದರ್ಥದಲಿ ಹೌದು. ವಿವರ ಇಲ್ಲಿದೆ…ನಾರ್ವೆಯಲ್ಲಿ ಸೈಕಲ್ ಲಿಫ್ಟ್ ಆರಂಭವಾಗಿದೆ. ಟ್ರಾಂಪೆ ಹೆಸರಿನ ಟ್ರಾಕ್‌ನ ಮೇಲೆ ಬಲಗಾಲಿಟ್ಟು ಸೈಕಲ್ ಏರಿದರೆ ಏರುಹಾದಿಯನ್ನು ಸುಲಭವಾಗಿ, ಶೀಘ್ರವಾಗಿ ತಲುಪಬಹುದು. ಸೈಕಲೊ ಕೇಬಲ್ ಎಂಬ ಅಡ್ಡ ಹೆಸರೂ ಇದಕ್ಕುಂಟು. ಸೀಟಿನ ಮೇಲೆ ಕೂತು ಹ್ಯಾಂಡಲ್ ಹಿಡಿದು ಬಲಗಾಲನ್ನು ಟ್ರಾಂಪೆ ಮೇಲಿಟ್ಟರೇ ವಿದ್ಯುತ್ ಚಾಲಿತ ಮೋಟರ್ ಜರ್ರನೆ ಕರೆದೊಯ್ಯುತ್ತದೆ.
ಅಯ್ಯೊ ಶಾಕ್ ಹೊಡೆಯಲ್ವಾ? ಇಲ್ರೀ… ಹಾಗೆಲ್ಲಾ ಏನೂ ಆಗೋದಿಲ್ಲ. ಆ ಎಲ್ಲಾ ಭದ್ರತೆಯನ್ನು ಅಳೆದು/ತೂಗಿಯೇ ಇದನ್ನು ಆವಿಷ್ಕಾರ ಮಾಡಿದ್ದಾರೆ. ಬೆಟ್ಟ ಏರಿದ ದಣಿವಿರದು. ಶೇ. ೨೦ರಷ್ಟು ಕಸರತ್ತು ಮಾತ್ರವೇ ಆಗಲಿದೆ. ಅಂದಹಾಗೆ ನಾರ್ವೆಯ ಈ ಟ್ರಾಂಪೆಯ ಉದ್ದ ೧೩೦ ಮೀಟರ್. ಟ್ರೊಂಡ್ಲೆಮ್ ಪ್ರದೇಶದಲ್ಲಿದೆ. ಇದು ಪ್ರಯೋಗ. ಮುಂದೆ ಕಡಿದಾದ ‘ಅಪ್’ಗಳಿರುವ ಜಾಗದಲ್ಲಿ ಬಲಪಾದವಿಡುತ್ತಾ ಸಾಗುವಂತೆ ಮಾಡಲು ಅಲ್ಲಿನ ಸರ್ಕಾರ ಚಿಂತಿಸುತ್ತಿದೆ. ಒಟ್ಟಿನಲ್ಲಿ ಇದೊಂದು ‘ಬಲ’ವಾದ ನಿರ್ಧಾರ ಎನ್ನುಬಹದು. ಅಲ್ಲಿನ ಸರ್ಕಾರವನ್ನು ‘ಬಲ’ ಪಂಥೀಯರ ಸರ್ಕಾರ ಎನ್ನಲು ಯಾವುದೇ ಅಡ್ಡಿಯಿಲ್ಲ. ‘ಬಲಗಾಲಿಟ್ಟು ಒಳಗೆ ಬಾ’ ಎಂದ ದಿನೇಶ್‌ಬಾಬು ಎಸ್.ನಾರಾಯಣ್ ಜೋಡಿ-ಈ ಸೈಕಲೊ ಕೇಬಲ್ ಕಂಡಿದ್ದರೇ ‘ಬಲಗಾಲಿಟ್ಟು ಬೆಟ್ಟ ಏರು’ ಎಂಬ ಚಿತ್ರ ನಿರ್ಮಿಸುತ್ತಿದ್ದರೋ ಏನೋ?!
ಜೈಲೂಟ
ನಮ್ಮಲ್ಲಿ ಇಂದಿರಾ ಕ್ಯಾಂಟೀನ್, ರಮ್ಯಾ ಕ್ಯಾಂಟೀನ್, ಅಪ್ಪಾಜಿ ಕ್ಯಾಂಟೀನ್, ಯಡಿಯೂರಪ್ಪ ಕ್ಯಾಂಟೀನ್‌ಗಳ ಸುಗ್ಗಿಯೇ ಇದೆ! ಆದರೆ ನವದೆಹಲಿಯಲ್ಲಿ ಜೈಲೂಟ ಗಟ್ಟಿ. ಏಷ್ಯಾದ ಅತಿ ದೊಡ್ಡ ತಿಹಾರ್ ಜೈಲಿನ ಆವರಣದಲ್ಲಿ ಚಪಾತಿ, ದಾಲ್, ರಸಂ, ಅನ್ನ ಇವೆಲ್ಲವೂ ಲಭ್ಯ. ಖೈದಿಗಳಿಗಾ…? ಅಲ್ಲ. ಪ್ರವಾಸಿಗರಿಗೆ. ಹೋಗ್ರೀ ಜೈಲಿಗೆ ಪ್ರವಾಸ ಹೋಗಲು ನಾವೇನು ಕಟ್ಟಾ, ರೆಡ್ಡಿ-ಯೆಡ್ಡಿಗಳಾ? ಕಿಂಡಲ್ ಮಾಡ್ತಾ ಇದ್ದೀರಾ? ದೇವರಾಣೆ ಸತ್ಯ ರೀ…ನಿಗದಿತ ಶುಲ್ಕ ಪಾವತಿಸಿದರೆ ಜೈಲೂಟ ಗ್ಯಾರಂಟಿ. ಮ್ಯಾನೇಜರ್ ಮಾತ್ರ ಪೊಲೀಸ್‌ಪೇದೆ. ಕ್ಲೀನರ್, ಸಪ್ಲೈಯರ್, ಬಾಣಸಿಗ ಎಲ್ಲರೂ ಖೈದಿಗಳೇ ಆಗಿದ್ದಾರೆ. ಹಾಗೆಂದು ಇವರು ವರಟಾಗಿ ವರ್ತಿಸುವುದಿಲ್ಲ. ಮೃದು ಹಾಗೂ ಸೌಮ್ಯ ಸ್ವಭಾವ ಕೂಡ ಹಲವರನ್ನು ಆಕರ್ಷಿಸುತ್ತಿದೆ. ೪ ವರ್ಷಗಳು ಸಂದು ಹೋಗಿದೆ. ವ್ಯಾಪಾರ ಜೋರಾಗಿದೆ.
ರುಚಿ-ಶುಚಿ ಎರಡೂ ಇಲ್ಲುಂಟು. ‘ಖೈದಿಯ ಕೈ ಚಳಕ-ಬಾಯೆಲ್ಲಾ ಪುಳಕ!’ ಗಾದೆ ಸೃಷ್ಟಿಯಾಗುವಂತೆ ಮಾಡಿದೆ ನವದೆಹಲಿಯ ತಿಹಾರ್‌ನ ಈ ಆಹಾರ್. ಎಲ್ಲಾ ಓ.ಕೆ. ತಿಹಾರ್‌ನ ಆಹಾರವೇಕೆ ತಿನ್ನಬೇಕು? ಕತ್ತಲ ಲೋಕದಿಂದ ಬೆಳಕಿನತ್ತ ಹೆಜ್ಜೆ ಹಾಕಲು ಬಯಸುವವರಿಗೆ ಒಂದು ರೀತಿಯಲ್ಲಿ ಇದು ತರಬೇತಿಯ ಶಾಲೆಯಿದ್ದಂತೆ. ಇಂತಹ ಜೈಲು ಹಕ್ಕಿಗಳಿಗೆ ಉತ್ತೇಜನ ನೀಡಲು ಹಲವರು ಇಲ್ಲಿ ಆಹಾರ ಸೇವಿಸುತ್ತಾರೆ.ಇನ್ನು ಕೆಲವರಿಗೆ ಇದು ಪ್ರಸಾದವಂತೆ. ಈ ಆಹಾರ ತಿಂದರೆ ಈ ಜೈಲಿಗೆ ‘ಶಿಕ್ಷಾರ್ಥಿ’ಯಾಗಿ ಈ ಕಡೆ ಬರುವ ಪ್ರಮೇಯವೇ ಬರದು ಎನ್ನುವುದು ಅಲ್ಲಿನವರ ನಂಬಿಕೆಗಳಲ್ಲಿ ಒಂದು. ಜೈಲಿನ ಹಾದಿಯಲ್ಲಿರುವ ನಮ್ಮ ಸಚಿವರುಗಳು/ಶಾಸಕರುಗಳನ್ನು ಅಲ್ಲಿಗೆ ಕಳುಹಿಸಿ ಸತ್ಯಾಸತ್ಯತೆ ಪರೀಕ್ಷಿಸಬಹುದಲ್ಲವೇ?!
ತೋಯದ ವಸ್ತ್ರ
ಈ ಬಟ್ಟೆಗೆ ಧೂಳು ಸೊಂಕದು. ಕಸ ತಾಕದು. ಕೋಲ, ಟೀ, ಸುರಿದರೂ ಕರೆಯಾಗದು. ನೀರೆರಚಿದರೆ ಹೀರಿಕೊಳ್ಳದು. ಬಿಸಿ ಬಿಸಿ ಶಾಖದ ಆವಿಯಲ್ಲಿಟ್ಟರೂ ಒದ್ದೆಯಾಗದು. ಏನದು? ಪ್ಲಾಸ್ಟಿಕ್ ಬಟ್ಟೆ. ಅಲ್ಲವೇ ಅಲ್ಲ. ಕಾಟನ್ ಬಟ್ಟೆ. ಆಸ್ಟ್ರೇಲಿಯದ ಮೆಲ್ಬೋರ್‍ನ್‌ನ ಥ್ರೆಡ್ ಸ್ಮಿತ್ ಕಂಪೆನಿಯ ಉತ್ಪನ್ನವಿದು. ಶೇ. ೧೦೦ರಷ್ಟು ಹತ್ತಿಯಿಂದ ‘ಕ್ಯಾವಲೀರ್’ ಹೆಸರಿನ ಅಂಗಿಗಳನ್ನು ಮಾಡಿದ್ದಾರೆ. ಹೈಡ್ರೋ ಫೋಬಿಕ್ ನ್ಯಾನೋ ತಂತ್ರಜ್ಞಾನದಿಂದ ಈ ಬಟ್ಟೆಗಳನ್ನು ಸಿದ್ದಪಡಿಸಲಾಗಿದೆ. ಹೈಡ್ರೋ ಫೋಬಿಕ್ ಇರುವ ಕಾರಣ ಈ ಬಟ್ಟೆ ಧೂಳು, ನೀರು ಎರಡನ್ನೂ ಪ್ರತಿಫಲಿಸುತ್ತದೆ. ಏನನ್ನೂ ಹೀರಿಕೊಳ್ಳದು.
ವಿಶ್ವದ ಮೊದಲ ಹೈಡ್ರೋ ಫೋಬಿಕ್ ನ್ಯಾನೋ ಬಟ್ಟೆ ಎಂಬ ಹೆಗ್ಗಳಿಕೆ ಇದಕ್ಕೆಯಿದೆ. ಸದ್ಯದಲ್ಲಿಯೇ ವಿಶ್ವ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ನಮ್ಮಲ್ಲೂ ಇಂತಹ ಬಟ್ಟೆ ಮಾರುಕಟ್ಟೆಗೆ ಬಂದರೇ? ಬೇಡ ರೀ… ಪಾಪ! ವಾಶಿಂಗ್ ಮೆಶಿನ್ ತಯಾರಿಕಾ ಕಂಪೆನಿಗಳನ್ನು ಮುಚ್ಚಬೇಕಾಗುತ್ತದೆ. ಸೋಪ್ ವ್ಯಾಪಾರದಲ್ಲಿ ಕುಂಠಿತವಾಗುತ್ತದೆ…ಅದೆಲ್ಲಕ್ಕಿಂತಲೂ ಮಿಗಿಲಾಗಿ ನಮ್ಮ ಲೋಕಲ್ ಕಾಮಣ್ಣರಿಗೆ ನಿರಾಸೆಯಾಗುತ್ತದೆ. ಏಕೆಂದರೆ ಮಾದಕ ನಟಿ ಇದನ್ನು ತೊಟ್ಟು ನೀರಿಗಿಳಿದರೂ ಒದ್ದೆಯಾಗದ ಕಾರಣ ಮೈ ಮಾಟ ಕಾಣದು…! ಇಷ್ಟೆಲ್ಲಾ ಬೇಕಾ?!ಕೂಡಲೇ ಇದರ ಮಾರಟಕ್ಕೆ ನಮ್ಮ ದೇಶದಲ್ಲಿ ನಿಷೇಧ ಹೇರುವುದು ಒಳಿತು!
ನೆಟಿಕೆ ತೆಗಿಯಿರಿ ಪರವಾಗಿಲ್ಲ…
ಕೆಲವರು ನೆಟಿಕೆ ತೆಗೆಯುತ್ತಲೇ ಮೇಲೆಳುತ್ತಾರೆ. ಇನ್ನು ಕೆಲವರು ಎದ್ದು ನಿಂತ ನಂತರ ಲಟ ಪಟ ನಟಿಕೆ ತೆಗೆಯುತ್ತಾರೆ. ಲಟಿಕೆ ತೆಗೆದರೆ ಶಬ್ಧ ಬರುವುದೇಕೆ? ಪದೇ ಪದೇ ನೆಟಿಕೆ ತೆಗೆದರೆ ಸಂಧಿವಾತ ಬರುತ್ತದೆಯೇ? ಇದನ್ನು ಪರೀಕ್ಷಿಸಲೆಂದೆ ಡೊನಾಲ್ಡ್ ಅಂಗರ್ ಎಂಬ ವೈದ್ಯ ಹಲವು ವರ್ಷಗಳ ಕಾಲ ತನ್ನ ಎಡಗೈಯ ಬೆರಳುಗಳ ನಟಿಕೆ ತೆಗೆಯುತ್ತಿದ್ದ. ೬೦ ವರ್ಷಗಳ ಬಳಿಕೆ ಪರೀಕ್ಷಿಸಿದಾಗ ಅಂತಹ ಸಂಧಿವಾತ (ಆಸ್ಟಿಯೋ ಪೋರೋಸಿಸ್ ಅಥವಾ ಆರ್ಥರೈಟಿಸ್) ಯಾವುದೂ ಇಲ್ಲವೆಂಬ ಮಾಹಿತಿ ಲಭ್ಯವಾಯಿತು. ಈತನ ಸಂಶೋಧನೆ ೨೦೦೯ರಲ್ಲಿ ಬಹಿರಂಗವಾದಾಗ ‘ಇಗ್ನೋಬೆಲ್’ ಎಂದು ಗೇಲಿ ಮಾಡಲಾಯಿತು. ೬ ವರ್ಷಗಳ ನಂತರ ಅಂದರೆ ೨೦೧೫ರಲ್ಲಿ ಮತ್ತೊಂದು ಪ್ರಯೋಗ ನಡೆಯಿತು.
ಎಂಆರ್‌ಐ ಸ್ಕ್ಯಾನಿಂಗ್ ಸ್ಕ್ಯಾನಿಂಗ್‌ನಡಿ ನಟಿಕೆ: ಮೂಳೆಗಳ ನಡುವೆ ನಟಿಕೆ ಶಬ್ಧ ಹೇಗೆ ಬರುತ್ತದೆ? ಎನ್ನುವುದನ್ನು ಅರಿಯುವುದೇ ಈ ಪ್ರಯೋಗದ ಮುಖ್ಯ ಉದ್ದೇಶವಾಗಿತ್ತು. ಎರಡು ಮೂಳೆಗಳು ದೂರಾದಾಗ ಸೈನೋವಿಯಲ್ ದ್ರವದ ಒತ್ತಡದಲ್ಲಾಗುವ ಏರುಪೇರಿನಿಂದಾಗಿ ಅದರಲ್ಲಿರುವ ಅನಿಲಗಳು ಬೇರ್ಪಟ್ಟು ಸಣ್ಣ ಸಣ್ಣ ಗುಳ್ಳೆಗಳನ್ನು ಸೃಷ್ಟಿಸುತ್ತವೆ. ಅದೇ ನೆಟಿಕೆಯ ಮೂಲವಯ್ಯ ಎಂಬ ಸಂಗತಿ ಹೊರ ಬಿದ್ದಿದೆ. ಉತ್ಸಾಹ, ಉಲ್ಲಾಸ ತರುವುದಾದರೆ ಮೂಳೆ ಸವೆತವಾಗಲಿದೆ ಎನ್ನುವ ಭಯಬಿಟ್ಟು ಆಗಾಗ ಹಿತವೆನಿಸುವಂತೆ ನೆಟಿಕೆ ತೆಗೆಯಿರಿ. ಮೂಳೆ ಮುರಿದು ಬರುವಂತೆ ಕೆಲವರು ನಟಿಕೆ ತೆಗೆಯುತ್ತಾರಲ್ಲಾ ಇದು ಒಳೆಯದೇ? ಹೌದು…ಆದರೆ….ವೈದ್ಯರಿಗೆ!