ಕೆಜಿಎಫ್ ನಂತರ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮಿರೋ ಹೊಂಬಾಳೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಸಿನಿಮಾ ನಿರ್ಮಿಸ್ತಿರೋದು ನಿಮಗೆಲ್ಲ ಗೊತ್ತೆಯಿದೆ. ಸಲಾರ್ ಸೀಕ್ವೆಲ್, ರಘುತಾತ, ಟೈಸನ್ ಜೊತೆ ಹಲವು ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಗೆ ಕೈ ಹಾಕಿರೋ ಹೊಂಬಾಳೆ, ಕನ್ನಡದಲ್ಲಿ ಯುವ, ಭಘೀರ ಚಿತ್ರಕ್ಕೆ ಬಂಡವಾಳ ಹೂಡಿದೆ. ಇದೀಗ ಆ್ಯಕ್ಷನ್ ಪ್ರಿನ್ಸ್ ಗೆ ಸಿನಿಮಾ ಮಾಡಲು ಹೊರಟಿರೋ ಸುದ್ದಿಯೊಂದು ಗಾಂಧಿನಗರದಲ್ಲಿ ಜೋರಾಗಿ ಕೇಳಿಬರುತ್ತಿದೆ.
ಸ್ಯಾಂಡಲ್‌ವುಡ್‌ನ ಬಹದ್ದೂರ್ ಗಂಡು, ಬೆಂಕಿ ಚೆಂಡು ಅಂತನೇ ಖ್ಯಾತಿ ಪಡೆದಿರೋ ಧ್ರುವ ಸರ್ಜಾ, ಮಾರ್ಟಿನ್ ಹಾಗೂ ಕೆಡಿ ಚಿತ್ರಗಳ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗುವತ್ತ ಹೊರಟು ನಿಂತಿದ್ದಾರೆ. ಇದೇ ಹೊತ್ತಿಗೆ ಪ್ರತಿಷ್ಠಿತ ಹೊಂಬಾಳೆ ಸಂಸ್ಥೆ ಭರ್ಜರಿ ಹೀರೋಗೆ ಅದ್ದೂರಿ ಸಿನಿಮಾ ಮಾಡೋದಕ್ಕೆ ಮುಂದಾಗಿರೋ ಸುದ್ದಿ ಬಿಗ್ ಬ್ರೇಕಿಂಗ್ ನ್ಯೂಸ್ ಆಗಿದೆ. ಈಗಾಗಲೇ, ಧ್ರುವ ಸರ್ಜಾ ಜೊತೆ ಮೊದಲ ಹಂತದ ಮಾತು-ಕತೆ ಮುಗಿಸಿದೆಯಂತೆ. ಫಸ್ಟ್ ಮೀಟಿಂಗ್‌ನಲ್ಲಿ ಒಂದಿಷ್ಟು ವಿಚಾರಗಳನ್ನ ಫೈನಲ್ ಮಾಡಿರುವ ನಿರ್ಮಾಣ ಸಂಸ್ಥೆ ಈಗ ಮುಂದುವರಿದ ಭಾಗದ ಕೆಲಸಗಳಲ್ಲಿ ಬ್ಯೂಸಿಯಾಗಿರೋದಾಗಿ ಸುದ್ದಿ ಹೊರಬಿದ್ದಿದೆ.
ಇಂಟ್ರೆಸ್ಟಿಂಗ್ ಅಂದರೆ, ಹೊಂಬಾಳೆ ಜೊತೆಗಿನ ಅದ್ದೂರಿ ಹೀರೋ ಸಿನಿಮಾಗೆ ಮಫ್ತಿ ಖ್ಯಾತಿಯ ನರ್ತನ್ ಹೆಸರು ಕೇಳಿಬರುತ್ತಿದೆ. ಸದ್ಯ ನರ್ತನ್, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಜೊತೆ ಭೈರತಿ ರಣಗಲ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಮಫ್ತಿ ಸಿನಿಮಾದ ಪ್ರೀಕ್ವೆಲ್ ಇದಾಗಿರೋದ್ರಿಂದ ಈ ಚಿತ್ರದ ಮೇಲೆ ನಿರೀಕ್ಷೆ ಬಾನೆತ್ತರದಲ್ಲಿದೆ. ಹೀಗಿರುವಾಗಲೇ, ನರ್ತನ್ ಹೆಸರು ಬೆಂಕಿಚೆಂಡಿನ ಪ್ರಾಜೆಕ್ಟ್ ಜೊತೆ ಸೇರಿಕೊಂಡಿದೆ. ಇತ್ತ ಭೈರತಿ ರಣಗಲ್ ಬಳಿಕ ರಾಮ್ ಚರಣ್ ಜೊತೆಗೆ ಸಿನಿಮಾ ಮಾಡ್ತಾರೆ ಅನ್ನೊ ಟಾಕ್ ಇದೆ.. ಆದ್ರೆ ಇನ್ನೂ ಅನೌನ್ಸ್ ಆಗಿಲ್ಲ. ಹಾಗೇನಾದ್ರು ನರ್ತನ್ ರಾಮ್‌ಚರಣ್ ಸಿನಿಮಾ ಮಾಡಿದ್ರೆ ಪ್ಲಾನ್ ಬಿಗೆ ಹೊಂಬಾಳೆ ರೆಡಿಯಾಗ್ತಿದೆ. ಜೂನಿಯರ್ ಎನ್‌ಟಿಆರ್ ಜೊತೆಗೆ ಸದ್ಯ ದೇವರ ಕೆಲಸ ಮುಗಿಸಿರುವ ಕೊರಟಾಲ ಶಿವ ಜೊತೆ ಕೂಡ ಸಿನಿಮಾ ಮಾಡುವ ತಯಾರಿಯೂ ಆಗ್ತಿದೆ. ದೇವರ ಮುಗಿದ್ಮೇಲೆ ಧ್ರುವ ಜೊತೆ ಶಿವ ಸೇರುವ ಲಕ್ಷಣಗಳು ಕೂಡ ಕಾಣಿಸ್ತಿದೆ.
ಅಷ್ಟಕ್ಕೂ, ಈ ಇಬ್ಬರು ಡೈರೆಕ್ಟರ್‌ಗಳಲ್ಲಿ ಧ್ರುವ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳೋವರು ಯಾರು ಅನ್ನೋದು ಸದ್ಯದ ಪ್ರಶ್ನೆ. ಪೊಗರು ಮೂಲಕ ಪ್ಯಾನ್ ಇಂಡಿಯಾದಲ್ಲಿ ಅದೃಷ್ಟ ಪರೀಕ್ಷೆ ಮಾಡಿದವರು ಧ್ರುವ. ಈಗ ಮಾರ್ಟಿನ್ ಮತ್ತು ಕೆಡಿ ಮೂಲಕ ಮತ್ತೆ ಬೇರೆ ಬೇರೆ ಭಾಷೆಗಳಲ್ಲಿ ಮಿಂಚಲು ಸಜ್ಜಾಗ್ತಿದ್ದಾರೆ. ಕೆಡಿ 2 ಬಗ್ಗೆ ಕೂಡ ಟಾಕ್ ಜೋರಾಗಿದೆ. ಜೋಗಿ ಪ್ರೇಮ್ ಕೂಡ ಪಾರ್ಟ್ 2 ಬಗ್ಗೆ ಕೆಲಸ ಮಾಡ್ತಿದ್ದಾರೆ. ಈ ವರ್ಷ ಧ್ರುವ ಸರ್ಜಾ ಅಭಿನಯದ 2 ಸಿನಿಮಾಗಳು ಥೇಟರ್‌ಗೆ ಎಂಟ್ರಿ ಕೊಡೋದು ಪಕ್ಕಾ ಆಗಿದೆ. ಮಾಸ್ ಅಭಿಮಾನಿ ಬಳಗ ಹೊಂದಿರುವ ಧ್ರುವ, ಸಿನಿಮಾಗಳನ್ನ ಅದ್ಬುತವಾಗಿ ನಿರ್ಮಿಸಿ ಜನರಿಗೆ ತಲುಪಿಸುವ ಹೊಂಬಾಳೆ ಸಂಸ್ಥೆ ಇವರಿಬ್ಬರ ಕಾಂಬೋ ಬಹಳಷ್ಟು ನಿರೀಕ್ಷೆಗಳನ್ನ ಹುಟ್ಟುಹಾಕಿದೆ. ಈ ಜೋಡಿ ಮೂಲಕ ಮತ್ತೊಂದು ಸೂಪರ್ ಡೂಪರ್ ಪ್ಯಾನ್ ಇಂಡಿಯಾ ಸಿನಿಮಾ ಬರಲಿ ಅನ್ನೊದು ಕನ್ನಡ ಸಿನಿಪ್ರೇಕ್ಷಕರ ನಿರೀಕ್ಷೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಅಫೀಶಿಯಲ್ ಅನೌನ್ಸ್ಮೆಂಟ್ ಕೂಡ ನಿಮ್ಮ ಮುಂದೆ ಬರಲಿದೆ. ಅಲ್ಲಿವರೆಗೂ ವೇಯ್ಟ್ ಅಂಡ್ ಸೀ ಅಷ್ಟೇ