Balayya: ನಟ ನಂದಮುರಿ ಬಾಲಕೃಷ್ಣ ತೆಲುಗು ನಟಿ ಅಂಜಲಿ(Anjali)ಯನ್ನು ವೇದಿಕೆ ಮೇಲೆ ತಳ್ಳಿದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಬಾಲಯ್ಯ ನಡೆ ವಿರುದ್ದ ಸಾಮಾಜಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ರು. ಆದ್ರೀಗ ನಟಿ ಅಂಜಲಿ ನೀಡಿರುವ ಹೇಳಿಕೆ ಇದೆಲ್ಲಾ ಸಿನಿಮಾ ಪ್ರಚಾರದ ಗಿಮಿಕ್ಕಾ ಎನ್ನುವಂತೆ ಮಾಡಿದೆ.
ಗ್ಯಾಂಗ್ಸ್ ಆಫ್ ಗೋದಾವರಿ(Gangs Of Godavari) ಸಿನಿಮಾ ಟಾಲಿವುಡ್ ಅಂಗಳದಲ್ಲಿ ಬಿಡುಗಡೆಗೆ ರೆಡಿಯಾಗಿದೆ ಈ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ನಟ ಬಾಲಯ್ಯ(Balayya) ಅವರನ್ನು ಕರೆಸಲಾಗಿತ್ತು. ವೇದಿಕೆಯಲ್ಲಿ ನಟಟಿ ಅಂಜಲಿ(Anjali)ಯನ್ನು ಜೋರಾಗಿ ತಳ್ಳಿದ್ರು. ಈ ವಿಡಿಯೋ ವೈರಲ್ ಆಗಿತ್ತು ಎಣ್ಣೇ ಏಟಲ್ಲೇ ಬಾಲಯ್ಯ ಹೀಗೆ ಮಾಡಿದ್ದಾರೆ ಎಂದು ಸುದ್ದಿ ಪಸರ್ ಆಗಿತ್ತು. ನೆಟ್ಟಿಗರು ತೀವ್ರವಾಗಿ ಈ ಬಗ್ಗೆ ಆಕ್ರೋಶ ಹೊರ ಹಾಕಿದ್ರು. ಆದ್ರೆ ಕಾರ್ಯಕ್ರಮದ ಬಳಿಕ ನಟಿ ಅಂಜಲಿ ಹಾಕಿರುವ ಪೋಸ್ಟ್ ಎಲ್ಲರ ಕಣ್ಣು ಕೆಂಪಾಗಿಸಿದೆ. ನಾವಿಬ್ಬರು ಹಲವು ವರ್ಷಗಳಿಂದ ಪರಿಚಯಸ್ತರು.
ಬಾಲಯ್ಯ(Balayya) ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ನಟಿ ಅಂಜಲಿ ಎಕ್ಸ್ ಖಾತೆಯಲ್ಲಿ ಧನ್ಯವಾದ ತಿಳಿಸಿದ್ದಾರೆ. ನನ್ನ ಹಾಗೂ ಬಾಲಯ್ಯ ನಡುವೆ ಒಳ್ಳೆಯ ಬಾಂದವ್ಯವಿದೆ. ಒಳ್ಳೆಯ ಸ್ನೇಹವಿದೆ. ಒಂದೇ ವೇದಿಕೆ ಹಂಚಿಕೊಂಡಿದ್ದಕ್ಕಾಗಿ ತುಂಬಾ ಖುಷಿ ಇದೆ ಎಂದು ಬರೆದುಕೊಂಡಿದ್ದಾರೆ. ಇದನ್ನು ಕಂಡ ನೆಟ್ಟಿಗರು ಡ್ಯಾಮೇಜ್ ಕಂಟ್ರೋಲ್ ಅಂತಿದ್ರೆ, ಇನ್ನೂ ಕೆಲವರು ಇದು ಸಿನಿಮಾ ಪ್ರಚಾರಕ್ಕಾಗಿ ಬೇಕಂತಲೆ ಮಾಡಿದ ಗಿಮಿಕ್ ಅಂತಿದ್ದಾರೆ. ಒತ್ತಾಯ ಪೂರ್ವಕವಾಗಿ ಹಾಕಿದ ಪೋಸ್ಟ್ ಇದಾಗಿದ ಎಂದು ಕಮೆಂಟ್‌ಗಳ ಸುರಿಮಳೆಯಾಗ್ತಿದೆ. ಬಾಲಯ್ಯ ಇದೆ ಮೊದಲು ಈ ರೀತಿ ನಡೆದುಕೊಳ್ಳುತಿಲ್ಲ ತಮ್ಮ ಅಭಿಮಾನಿಗಳೊಂದಿಗೆ, ಇತರೆ ಕಲಾವಿದರೊಂದಿಗೂ ಇದೇ ರೀತಿ ವರ್ತನೆ ತೋರಿದ್ದಾರೆ. ಇದೆಲ್ಲ ಬಲ್ಲವರು ಬಾಲಯ್ಯ ಸಾರ್ವಜನಿಕವಾಗಿ ತೋರುವ ಪರ್ಸನಾಲಿಟಿ ಬಗ್ಗೆ ಆಕ್ರೋಶ ಹೊರ ಹಾಕುತ್ತಿರುತ್ತಾರೆ.