Shiva Rajkumar: ಮಪ್ತಿ ನರ್ತನ್ ನಿರ್ದೇಶನದಲ್ಲಿ ಅದ್ದೂರಿಯಾಗಿ ಮೂಡಿ ಬರ್ತಿರುವ ಸಿನಿಮಾ ಭೈರತಿ ರಣಗಲ್(Bhairathi Ranagal). ಮಪ್ತಿ ಸಿನಿಮಾದಲ್ಲಿ ಕಿಕ್ ನೀಡಿದ್ದ ಶಿವಣ್ಣನ ಪಾತ್ರ, ಖಡಕ್ ಲುಕ್ ಬೈರತಿ ರಣಗಲ್. ಆ ಪಾತ್ರವನ್ನೇ ಮಪ್ತಿ ಪ್ರೀಕ್ವೆಲ್‌ನಲ್ಲಿ ನರ್ತನ್ ಕೈಗೆತ್ತಿಕ್ಕೊಂಡು ಮಾಸ್ ಸಿನಿಮಾವನ್ನು ಉಣ ಬಡಿಸಲು ರೆಡಿಯಾಗಿದ್ದಾರೆ. ಈ ಚಿತ್ರದಿಂದ ನಯಾ ಸುದ್ದಿ ಹೊರ ಬಿದ್ದಿದೆ. ಜುಲೈ 12 ಶಿವಣ್ಣ(Shivanna) ಬರ್ತ್ ಡೇ ಅಂದೇ ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಅಭಿಮಾನಿಗಳಿಗೆ ಉಡುಗೊರೆಯಾಗಿ ನೀಡ್ತಿದೆ.
ಗೀತಾ ಪಿಕ್ಚರ್ಸ್ ಬ್ಯಾನರ್‌ನಡಿಯಲ್ಲಿ ಗೀತಾ ಶಿವರಾಜಕುಮಾರ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ವೇದ ಸಿನಿಮಾ ಯಶಸ್ಸಿನ ಬಳಿಕ ಗೀತಾ ಪಿಕ್ಚರ್ಸ್ ನಿರ್ಮಾಣ ಮಾಡ್ತಿರುವ ಎರಡನೇ ಸಿನಿಮಾ ಇದು. ಮಫ್ತಿ ಸಿನಿಮಾದ ಪ್ರೀಕ್ವೆಲ್ ಇದಾಗಿದ್ದು, ಈ ಚಿತ್ರದಲ್ಲಿ ಲಾಯರ್ ಆಗಿ ಶಿವಣ್ಣ(Shivanna) ಬಣ್ಣ ಹಚ್ಚಿದ್ದಾರೆ. ಆನಂದ್ ಆಡಿಯೋ ಸಂಸ್ಥೆ ಭೈರತಿ ರಣಗಲ್(Bhairathi Ranagal) ಚಿತ್ರದ ಆಡಿಯೋ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಪಡೆದುಕೊಂಡಿದೆ. ಈ ವರ್ಷ ತೆರೆ ಕಾಣುತ್ತಿರುವ ಕನ್ನಡದ ದೊಡ್ಡ ಸಿನಿಮಾ ಇದು. ಇದೀಗ ಚಿತ್ರದ ಜೊತೆ ಕೈ ಜೋಡಿಸಿರುವುದು ನಮಗೂ ಖುಷಿ ತಂದಿದೆ. ಪ್ರಚಾರ ಕೆಲಸವೂ ದೊಡ್ಡ ಮಟ್ಟದಲ್ಲಿಯೇ ಸಾಗಲಿದೆ ಎಂದಿದ್ದಾರೆ ಆನಂದ್ ಆಡಿಯೋ ಶ್ಯಾಮ್ ಚಾಬ್ರಿಯಾ.
ಕೆಲ ಮೂಲಗಳ ಪ್ರಕಾರ, ಭೈರತಿ ರಣಗಲ್(Bhairathi Ranagal) ಚಿತ್ರದ ಆಡಿಯೋ ಹಕ್ಕನ್ನು ಬಹುಕೋಟಿ ಕೊಟ್ಟು ಖರೀದಿಸಿದೆಯಂತೆ ಆನಂದ್ ಆಡಿಯೋ. ಇನ್ನೇನು ಶೀಘ್ರದಲ್ಲಿ ಬಿಡುಗಡೆ ದಿನಾಂಕ ಘೋಷಣೆ ಮಾಡಲಿದ್ದು, ಚಿತ್ರಮಂದಿರದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ಸಿನಿಮಾ ರಿಲೀಸ್ ಆಗಲಿದೆ.