Sonu Srinivas Gowda: ರೀಲ್ಸ್ ಮೂಲಕ ಒಂದಿಷ್ಟು ಪ್ರಖ್ಯಾತಿ ಗಳಿಸಿರುವ ಸೋನು ಶ್ರೀನಿವಾಸ್ ಗೌಡ(Sonu Srinivas Gowda) ಸದಾ ಸುದ್ದಿಯಲ್ಲಿರುವ ಹುಡುಗಿ. ತಮ್ಮ ಚಿತ್ರ ವಿಚಿತ್ರ ರೀಲ್ಸ್, ವಿಚಿತ್ರ ಸ್ಟೇಟ್ ಮೆಂಟ್ ನಿಂದ ಸದಾ ಟ್ರೋಲ್ ಒಳಗಾಗೋ ಈಕೆ ಟ್ರೋಲ್ ಹೈಕ್ಳಿಗೆ ಸದಾ ಆಹಾರ. ಈ ಟ್ರೋಲ್‌ನಿಂದಲೇ ಬಿಗ್ ಬಾಸ್ ಒಟಿಟಿ ಕದವನ್ನು ತಟ್ಟಿದ್ರು. ಅಲ್ಲಿಂದ ಒಂದಿಷ್ಟು ಹೆಸರು ಸಂಪಾದಿಸಿಕೊಂಡಿದ್ದ ಈಕೆ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ಸೋನು ಮತ್ತೆ ಸುದ್ದಿಯಲ್ಲಿದ್ದಾಳೆ. ಈ ಬಾರಿ ರೀಲ್ಸ್ ವಿಚಾರಕ್ಕಲ್ಲ ಅರೆಸ್ಟ್ ವಿಚಾರಕ್ಕೆ ಅನ್ನೋದು ನಯಾ ಸಮಾಚಾರ.
ಬೆಳ್ಳಂಬೆಳಿಗ್ಗೆ ಸೋನು ಶ್ರೀನಿವಾಸ್ ಗೌಡ(Sonu Srinivas Gowda) ಅರೆಸ್ಟ್ ಆಗಿರೋ ಸುದ್ದಿ ಎಲ್ಲಾ ಕಡೆ ಪಸರ್ ಆಗಿದೆ. ರೀಲ್ಸ್ ರಾಣಿ ಅದೇನ್ ಅವಾಂತರ ಮಾಡಿಕೊಂಡ್ಲಪ್ಪ ಅಂತ ಸೋಶಿಯಲ್ ಮೀಡಿಯಾದಲ್ಲಿ ಎಲ್ರೂ ತರಹೇವಾರಿ ಕಮೆಂಟ್ ಹಾಕ್ತಿದ್ದಾರೆ. ಅದೇನ್ ರೀಲ್ಸ್ ಮಾಡಿದ್ಲೋ, ಅದೆಲ್ಲಿ ಕಿರಿಕ್ ಮಾಡಿಕೊಂಡ್ಲೋ ಅಂತ ಸರ್ಚ್ ಮಾಡ್ತಿದ್ದಾರೆ. ಆದ್ರೆ, ಸೋನು ಅರೆಸ್ಟ್ ಆಗಿರೋದು ದತ್ತು ಮಗುವನ್ನು ಪಡೆದ ಕಾರಣಕ್ಕೆ. ಹೌದು, ಎಲ್ರಿಗೂ ಗೊತ್ತಿರೋ ಹಾಗೆ ಒಂದು ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ರು ಸೋನು. ಆಕೆಯನ್ನು ಆರೈಕೆ ಮಾಡೋ ವೀಡಿಯೋಗಳನ್ನು, ಆಕೆ ಜೊತೆಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ರು. ಇದೀಗ ಹೀಗೆ ಜಗಜ್ಜಾಹೀರು ಮಾಡಿರೋದೇ ಸೋನುಗೆ ಮುಳುವಾಗಿದೆ.
ಮಗುವನ್ನು ದತ್ತು ಪಡೆಯುವಾಗ ಪಾಲಿಸಲೇಬೇಕಾದ ಕಾನೂನು ಕ್ರಮಗಳನ್ನು ಗಾಳಿಗೆ ಚೆಲ್ಲಿರೋದು ಸೋನು(Sonu Srinivas Gowda)ಅರೆಸ್ಟ್ ಗೆ ಮೈನ್ ರೀಸನ್. ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಯಾಗಿರುವ ಗೀತಾ ಈ ಬಗ್ಗೆ ಮಾತನಾಡಿದ್ದಾರೆ. ಮಗುವನ್ನು ದತ್ತು ಪಡೆಯುವಾಗ ಅನುಸರಿಸಬೇಕಾದ ಕಾನೂನು ಕ್ರಮಗಳು ಪಾಲನೆಯಾಗಿಲ್ಲ. ಮಗು ಹಾಗೂ ಮಗುವನ್ನು ದತ್ತು ಪಡೆಯುವವರ ನಡುವೆ ಇಪ್ಪತ್ತೈದು ವರ್ಷದ ವಯಸ್ಸಿನ ಅಂತವಿರಬೇಕು, ಇದ್ಯಾವುದನ್ನು ಪಾಲಿಸದೇ ಮಗುವನ್ನು ತಮ್ಮ ಜೊತೆ ಇಟ್ಟುಕೊಂಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಮಗು ದತ್ತು ಪಡೆದಿರೋದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡೋದು ದೊಡ್ಡ ತಪ್ಪು ಎಂದು ಗೀತಾ ತಿಳಿಸಿದ್ದಾರೆ. ಇದೆಲ್ಲವೂ ಸೋನು ಶ್ರೀನಿವಾಸ್ ಗೌಡ(Sonu Srinivas Gowda) ಅರೆಸ್ಟ್ ಗೆ ಕಾರಣವಾಗಿದ್ದು ಎಫ್ಐಆರ್ ದಾಖಲಾಗಿದೆ.